ಹೈದರಾಬಾದ್: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ತನ್ನ ಪ್ರವೇಶ ಮಟ್ಟದ ಸ್ಕೂಟರ್‌ಗಳಾದ S1 X ಸರಣಿಯ ಬೆಲೆಯಲ್ಲಿ ಕಡಿತ ಮಾಡಿದೆ. ಇನ್ನು ಮುಂದೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಗಳು 69,999 ರೂ. (ಎಕ್ಸ್ ಶೋ ರೂಂ) ಗಳಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿದೆ. ಹೊಸ ದರಗಳನ್ನು ಓಲಾ ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವವರಿಗೆ ಕಡಿಮೆ ಬೆಲೆಯಲ್ಲಿ ಸ್ಕೂಟರ್‌ಗಳನ್ನು ಒದಗಿಸಲಾಗುವುದು ಎಂದು ಓಲಾ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಇದಲ್ಲದೇ ಮುಂದಿನ ವಾರದಿಂದ ಇವುಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
Ola EV ಸ್ಕೂಟರ್ ಬೆಲೆ: ಹೊಸ S1 X 3 ಬ್ಯಾಟರಿ ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ. ಈ ಸ್ಕೂಟರ್‌ಗಳು 8 ವರ್ಷಗಳು/80 ಸಾವಿರ ಕಿಲೋಮೀಟರ್‌ಗಳವರೆಗೂ ಬ್ಯಾಟರಿ ವಾರಂಟಿ ಗ್ರಾಹಕರಿಗೆ ಸಿಗಲಿದೆ.
2 kWh ಹೊಸ ದರ 69,999 ರೂ (ಪರಿಚಯಾತ್ಮಕ ಕೊಡುಗೆ)ದಲ್ಲಿ ಲಭ್ಯವಿರಲಿದೆ
3 kWh ಬ್ಯಾಟರಿ ರೂಪಾಂತರದ ಬೆಲೆ 84,999 ರೂ.
4 kWh ಬ್ಯಾಟರಿ ರೂಪಾಂತರದ ಬೆಲೆ 99,999 ರೂ.
Ola EV ಸ್ಕೂಟರ್ ವೈಶಿಷ್ಟ್ಯಗಳು: S1X ಸ್ಕೂಟರ್‌ಗಳು ಭೌತಿಕ ಕೀಲಿಯೊಂದಿಗೆ ಸಿಗಲಿದೆ. ಈ 2 kWh ಸ್ಕೂಟರ್ 95 ಕಿಲೋಮೀಟರ್ IDC ವ್ಯಾಪ್ತಿಯನ್ನು ಹೊಂದಿದೆ. 3 kWh ಸ್ಕೂಟರ್ 143 ಕಿಲೋಮೀಟರ್ ಮತ್ತು 4 kWh 190 ಕಿಲೋಮೀಟರ್ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ( ಒಮ್ಮೆ ಬ್ಯಾಟರಿ ಚಾರ್ಜ್ ಆದ ಬಳಿಕ ಬ್ಯಾಟರಿ ಸಾಮರ್ಥ್ಯಕ್ಕೆ ತಕ್ಕಂತೆ ಮೈಲೇಜ್ ಕೊಡಲಿವೆ.)
S1X ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 6kW ಮೋಟಾರ್: ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 3.3 ಸೆಕೆಂಡುಗಳಲ್ಲಿ 0-40 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಓಲಾ ಕಂಪನಿ ಹೇಳಿದೆ. 2 kW ಬ್ಯಾಟರಿಯ ರೂಪಾಂತರವು 85 kmph ವೇಗವನ್ನು ಹೊಂದಿದೆ. ಉಳಿದ ಎರಡು ಸ್ಕೂಟರ್‌ಗಳು ಗಂಟೆಗೆ ಗರಿಷ್ಠ 90 ಕಿಮೀ ವೇಗದಲ್ಲಿ ಚಲಿಸುತ್ತವೆ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್‌ಗಳು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಮೋಡ್‌ಗಳಲ್ಲಿ ಲಭ್ಯ ಇವೆ.
ಇದು ಕ್ರೂಸ್ ಕಂಟ್ರೋಲ್, ರಿವರ್ಸ್ ಮೋಡ್, ಓಲಾ ಎಲೆಕ್ಟ್ರಿಕ್ ಅಪ್ಲಿಕೇಶನ್‌ನೊಂದಿಗೆ ಸಂಪರ್ಕದಂತಹ ಅನೇಕ ಇತ್ತೀಚಿನ ವೈಶಿಷ್ಟ್ಯಗಳನ್ನು ಕೂಡಾ ಹೊಂದಿವೆ. ಒಟ್ಟು 7 ಬಣ್ಣಗಳಲ್ಲಿ ಈ ಸ್ಕೂಟರ್‌ಗಳು ದೊರೆಯಲಿವೆ ಎಂದು ಕಂಪನಿ ಹೇಳಿಕೊಂಡಿದೆ.