ETV Bharat / business

ಇವಿ ಚಾರ್ಜಿಂಗ್ ಸೌಕರ್ಯಕ್ಕೆ ಉತ್ತೇಜನ: ಅದಾನಿ ಟೋಟಲ್​ ಎನರ್ಜಿಸ್​​ ಜೊತೆ ಕೈ ಜೋಡಿಸಿದ ಮಹೀಂದ್ರಾ - mou on boost EV charging infra - MOU ON BOOST EV CHARGING INFRA

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ವಿದ್ಯುತ್​​ ಹಾಗೂ ಸುಸ್ಥಿರ ಭವಿಷ್ಯದೆಡೆಗೆ ಸಾಗಲು ಈ ಪಾಲುದಾರಿಕೆ ಸಹಾಯ ಮಾಡುತ್ತದೆ ಎಂದು ಎಟಿಇಎಲ್​ ತಿಳಿಸಿದೆ.

mahindra-joins-adani-total-energies-e-mobility-ltd-sing-mou-on-boost-ev-charging-infra

author img

By ETV Bharat Karnataka Team

Published : Mar 22, 2024, 2:47 PM IST

ಮುಂಬೈ: ದೇಶದಲ್ಲಿ ಹಸಿರು ಭವಿಷ್ಯ ನಿರ್ಮಾಣ ಮತ್ತು ಎಲೆಕ್ಟ್ರಿಕ್​​ ವಾಹನ (ಇವಿ) ಮೂಲ ಸೌಕರ್ಯ ಉತ್ತೇಜಿಸುವ ನಿಟ್ಟಿನಲ್ಲಿ ಅದಾನಿ ಟೋಟಲ್​ ಎನರ್ಜಿಸ್​ ಇ ಮೊಬಿಲಿಟಿ ಲಿಮಿಟೆಡ್​​ ಜೊತೆಗೆ ಮಹೀಂದ್ರಾ ಅಂಡ್​​ ಮಹೀಂದ್ರಾ ಒಡಂಬಡಿಕೆಗೆ ಸಹಿ ಹಾಕಿದೆ.

ದೇಶದೆಲ್ಲೆಡೆ ವಿಸ್ತಾರವಾದ ಇವಿ ಚಾರ್ಜಿಂಗ್​ ಮೂಲ ಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಒಡಂಬಡಿಕೆ ಇದಾಗಿದೆ. ಈ ಪಾಲುದಾರಿಕೆ ದೇಶದೆಲ್ಲೆಡೆ ಗ್ರಾಹಕರಿಗೆ ಚಾರ್ಜಿಂಗ್​ ನೆಟ್​​ವರ್ಕ್​ ಬಲಪಡಿಸಲು, ತಡೆ ರಹಿತ ಅನ್ವೇಷಣೆ, ಲಭ್ಯತೆ, ಸಂಚಾರ ಮತ್ತು ವಹಿವಾಟಗಳನ್ನು ವಿಸ್ತರಿಸುವ ಉದ್ದೇಶವನ್ನು ಒಳಗೊಂಡಿದೆ. ಜೊತೆಗೆ ಇ - ಮೊಬಿಲಿಟಿ ಪರಿಹಾರಗಳನ್ನು ಹೊರತರಲು ಸಹಾಯ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಸಹಕಾರವು ಇವಿ ಚಾರ್ಜಿಂಗ್​ ಮೂಲಸೌಕರ್ಯ ವೃದ್ಧಿಸಿ, ದೇಶದೆಲ್ಲೆಡೆ ಗ್ರಾಹಕರು ಡಿಜಿಟಲ್​ ಏಕೀಕರಣ ಮತ್ತು ತಡೆರಹಿತ ಚಾರ್ಜಿಂಗ್​ ನೆಟ್​ವರ್ಕ್​ ಪ್ರವೇಶದ ಮೂಲಕ ಇವಿ ಅನುಭವ ಆಹ್ಲಾದಿಸಬಹುದು ಎಂದು ಎಂ ಅಂಡ್​ ಎಂನ ಆಟೋಮೋಟಿವ್​ ಡಿವಿಶನ್​ ಅಧ್ಯಕ್ಷ ವಿಜಯ್​​ ನಕ್ರಾ ತಿಳಿಸಿದ್ದಾರೆ. ಮಹೀಂದ್ರಾ ಎಕ್ಸ್​ಯುವಿ 400 ಗ್ರಾಹಕರು ಬ್ಲೂಸೆನ್ಸ್​​ಪ್ಲಸ್​​ ಆ್ಯಪ್​ ಮೂಲಕ 1,100ಕ್ಕೂ ಹೆಚ್ಚು ಚಾರ್ಜರ್ ಲಭ್ಯತೆಯನ್ನು ಇದೀಗ ಪಡೆಯಬಹುದು. ಈ ಮೂಲಕ ಮಹೀಂದ್ರ ಇವಿ ಮಾಲೀಕರಿಗೆ ಎಲೆಕ್ಟ್ರಿಕ್​ ಚಾರ್ಜಿಂಗ್​ ಸೌಲಭ್ಯದ ಅನುಕೂಲತೆ ಉತ್ತೇಜಿಸಲಿದೆ.

ಇವಿ ಕ್ಷೇತ್ರದಲ್ಲಿ ಅದಾನಿ ಟೋಟಲ್​ ಗ್ಯಾಸ್​​ ಲಿಮಿಟೆಡ್​​ನ ಹೆಜ್ಜೆ ಗುರುತು ವಿಸ್ತರಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಎಂ ಅಂಡ್​ ಎಂ ಜೊತೆಗಿನ ಸಹಯೋಗವೂ ಚಾರ್ಜಿಂಗ್​ ಮೂಲ ಸೌಕರ್ಯ ಹೆಚ್ಚಿಸಿ, ಶಕ್ತಿ ಪರಿವರ್ತನೆ ಭಾಗವಾಗಿ ಗ್ರಾಹಕರಲ್ಲಿ ಇವಿ ತಂತ್ರಜ್ಞಾನ ಒಪ್ಪಿಕೊಳ್ಳುವ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಅದಾನಿ ಟೋಟಲ್​ ಗ್ಯಾಸ್​ ಲಿಮಿಟೆಡ್​​ ಮತ್ತು ಕಾರ್ಯಕಾರಿ ನಿರ್ದೇಶಕ ಸುರೇಶ್​ ಪಿ ಮಂಗ್ಲನಿ ತಿಳಿಸಿದ್ದಾರೆ.

ಇಂಗಾಲದ ಹೊರ ಸೂಸುವಿಕೆ ಕಡಿಮೆ ಮಾಡಲು ಈ ಪಾಲುದಾರಿಕೆಗೆ ಸಹಾಯ ಮಾಡಲಾಗಿದೆ. ಭಾರತದ ಹವಾಮಾನದ ಗುರಿಗಳ ಸಾಧನೆಗೆ ಇದು ಸಹಾಯ ಮಾಡಲಿದೆ. ಸಿಇಪಿ 26 ಬದ್ಧತೆಗಳಿಗೆ ಅನುಗುಣವಾಗಿ ಮಹೀಂದ್ರಾ ಮತ್ತು ಎಟಿಇಎಲ್​ ನಡುವಿನ ಈ ಪಾಲುದಾರಿಕೆಯು ಸಾರಿಗೆಯಿಂದ ಹೊರಸೂಸುವ ಇಂಗಾಲವನ್ನು ಕಡಿಮೆ ಮಾಡಲು ಮತ್ತು ವಿದ್ಯುತ್​​ ಹಾಗೂ ಸುಸ್ಥಿರ ಭವಿಷ್ಯದೆಡೆಗೆ ಸಾಗಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ವಿದ್ಯುತ್‌ ಚಾಲಿತ ವಾಹನ, ಹಸಿರು ಇಂಧನ ಬಳಕೆಗೆ ಉತ್ತೇಜನ.. ಸರ್ಕಾರದಿಂದ ಅಭಿಯಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.