ಜನರು ಈಗೀಗ ಹೆಚ್ಚೆಚ್ಚು ಆರ್ಥಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉಳಿತಾಯ ಹಾಗೂ ಭವಿಷ್ಯದ ಉತ್ತಮ ಜೀವನಕ್ಕಾಗಿ ಯೋಚನೆ ಹಾಗೂ ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ವಿಷಯವಾಗಿದೆ. ಏಕೆಂದರೆ ನಮ್ಮನ್ನು ನಂಬಿದವರಿಗೆ ಹಾಗೂ ನಮ್ಮ ನಂತರವೂ ಆರ್ಥಿಕ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾದರೆ, ಜೀವ ವಿಮಾ ಪಾಲಿಸಿ ತೆಗೆದುಕೊಳ್ಳುವುದು ಅನಿವಾರ್ಯ. ಎಲ್ಐಸಿ ಈಗಾಗಲೇ ಹಲವು ರೀತಿಯ ಪಾಲಿಸಿಗಳನ್ನು ಜನರ ಅನಕೂಲಕ್ಕಾಗಿ ಜಾರಿಗೆ ತಂದಿದೆ. ಗ್ರಾಹಕರ ಬೇಡಿಕೆ ಹಾಗೂ ಅನುಕೂಲಕ್ಕಾಗಿ ಹೆಚ್ಚಿನ ಭದ್ರತೆ ಮತ್ತು ಗಣನೀಯ ಲಾಭವನ್ನು ಖಾತರಿಪಡಿಸುವ ಮತ್ತೊಂದು ಪಾಲಿಸಿಯನ್ನು ಎಲ್ಐಸಿ ಹೊರ ತಂದಿದೆ. ಅದೇ 'ಎಲ್‌ಐಸಿ ಹೊಸ ಜೀವನ್ ಆನಂದ್ ಪಾಲಿಸಿ' (915).
ಈ ಹೊಸ ಪಾಲಿಸಿದಾರರಿಗೆ ದೈನಂದಿನ ಉಳಿತಾಯದೊಂದಿಗೆ ಗಣನೀಯ ಪ್ರಮಾಣದ ಹಣವನ್ನು ಗಳಿಸಲು ಇದು ಸಹಾಯ ಮಾಡುತ್ತದೆ. ನೀವು ದಿನಕ್ಕೆ ಕನಿಷ್ಠ ರೂ.200 ಉಳಿಸಿದರೆ, ಮೆಚ್ಯೂರಿಟಿ ಸಮಯದಲ್ಲಿ ರೂ.1.22 ಕೋಟಿಗಳ ಮೊತ್ತವನ್ನು ನೀವು ಪಡೆಯಬಹುದಾಗಿದೆ. LIC ಹೊಸ ಜೀವನ್ ಆನಂದ್ ಪಾಲಿಸಿಯ ಸಂಪೂರ್ಣ ವಿವರಗಳನ್ನು ನೋಡುವುದಾದರೆ,
ಎಲ್ಐಸಿ ನ್ಯೂ ಜೀವನ್ ಆನಂದ್ ಕಡಿಮೆ ಪ್ರೀಮಿಯಂ ಎಲ್ಐಸಿ ಪಾಲಿಸಿಗಳಲ್ಲಿ ಒಂದಾಗಿದೆ. ಕಡಿಮೆ ಪ್ರೀಮಿಯಂ ಹೆಚ್ಚಿನ ಆದಾಯ ಇದರ ಮೂಲ ಮಂತ್ರವಾಗಿದೆ. ಈ ಯೋಜನೆಯು ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ. ಇದು ಅನೇಕ ಮೆಚ್ಯೂರಿಟಿ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಪ್ರತಿ ತಿಂಗಳು ನೀವು 6,075 ಹೂಡಿಕೆ ಮಾಡುವ ಮೂಲಕ, 35 ವರ್ಷಗಳ ಬಳಿಕ ಸುಮಾರು 1.22 ಕೋಟಿಗಳನ್ನು ಪಡೆಯಬಹುದು.
ಪ್ರೀಮಿಯಂ ಪಾವತಿ: ಮೊದಲ ವರ್ಷದ ಪ್ರೀಮಿಯಂ (ಶೇ 4.5ರಷ್ಟು ಜಿಎಸ್‌ಟಿ )
- ವರ್ಷಕ್ಕೆ : 71,274 ರೂಪಾಯಿ
- ಆರು ತಿಂಗಳಿಗೆ : 36,041 ರೂ.
- ಮೂರು ತಿಂಗಳಿಗೆ : 18,223 ರೂ.
- ತಿಂಗಳಿಗೆ : 6,075 ರೂ.
ಎರಡನೇ ವರ್ಷದಿಂದ ಪ್ರೀಮಿಯಂ (ಶೇ 2.25 GST )
- ವರ್ಷಕ್ಕೆ : 69,740 ರೂ.
- ಆರು ತಿಂಗಳಿಗೆ: 35,265 ರೂ
- ಮೂರು ತಿಂಗಳಿಗೆ :.17,830 ರೂ
- ಪ್ರತಿ ತಿಂಗಳು : 5,944 ರೂ.
ಮೆಚ್ಯೂರಿಟಿ ವಿವರಗಳು:
- ಪಾವತಿಸಿದ ಒಟ್ಟು ಪ್ರೀಮಿಯಂ : 24,42,421 ರೂ.
- ಮೂಲ ವಿಮಾ ಮೊತ್ತ : 25,00,000 ರೂ
- ಬೋನಸ್ (ಅಂದಾಜು) : 39,37,500 ರೂ.
- FIB (ಅಂದಾಜು.) :57,50,000 ರೂ.
- ಒಟ್ಟು ಮೆಚ್ಯೂರಿಟಿ ಮೌಲ್ಯ : 1,21,87,500 ರೂ.
LIC ಜೀವನ್ ಆನಂದ್ ಪಾಲಿಸಿಯ ಹೆಚ್ಚುವರಿ ಪ್ರಯೋಜನಗಳು ಮೆಚ್ಯೂರಿಟಿ ಪ್ರಯೋಜನಗಳ ಹೊರತಾಗಿ, LIC ಹೊಸ ಜೀವನ್ ಆನಂದ್ ಪಾಲಿಸಿಗೆ ಅನೇಕ ಹೆಚ್ಚುವರಿ ರೈಡರ್ಗಳನ್ನು ಸೇರ್ಪಡೆ ಮಾಡಬಹುದು. ಅದು ಪಾಲಿಸಿಯ ಒಟ್ಟು ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು LIC ಶಾಖೆ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.