ETV Bharat / business

ಬಲ್ಕ್​​ ಪ್ರಿ-ಪ್ರ್ಯಾಕೇಜ್ಡ್​ ಸರಕುಗಳಿಗೆ ಮಾಹಿತಿಯ ಲೇಬಲ್​ ಕಡ್ಡಾಯ: ಕಾನೂನು ತಿದ್ದುಪಡಿಗೆ ಮುಂದಾದ ಸರ್ಕಾರ - pre packaged commodities

author img

By ANI

Published : Jul 14, 2024, 5:42 PM IST

ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ಮಾಹಿತಿ ಮುದ್ರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ದೇಶದ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು, 2011 ಕಾನೂನಿಗೆ ತಿದ್ದುಪಡಿ ಮಾಡಲು ಗ್ರಾಹಕ ವ್ಯವಹಾರಗಳ ಸಚಿವಾಲಯವು ಮುಂದಾಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟವಾಗುವ 25 ಕೆಜಿಗಿಂತ ಹೆಚ್ಚು ತೂಕದ ಅಥವಾ 25 ಲೀಟರ್​ಗಿಂತ ಹೆಚ್ಚಿನ ಅಳತೆಯ ಪೂರ್ವ-ಪ್ಯಾಕೇಜ್ ಮಾಡಿದ ಪ್ಯಾಕೇಜ್​ಗಳ ಮೇಲೆ ಅದರಲ್ಲಿರುವ ಸರಕುಗಳ ಬಗೆಗಿನ ಮಾಹಿತಿಯ ಮುದ್ರಣವನ್ನು ಕಡ್ಡಾಯಗೊಳಿಸುವುದು ಹೊಸ ತಿದ್ದುಪಡಿಯ ಉದ್ದೇಶವಾಗಿದೆ.

ಗರಿಷ್ಠ ಚಿಲ್ಲರೆ ಬೆಲೆ (ಎಂಆರ್​ಪಿ), ಸುರಕ್ಷಿತವಾಗಿ ಬಳಸಬಹುದಾದ ಕೊನೆಯ ದಿನಾಂಕ, ತಯಾರಕರ ಮಾಹಿತಿ ಮತ್ತು ಮೂಲ ದೇಶ ಯಾವುದು ಎಂಬೆಲ್ಲ ಪ್ರಮುಖ ವಿವರಗಳನ್ನು ಪ್ಯಾಕೇಜ್​​ಗಳ ಮೇಲೆ ಪ್ರದರ್ಶಿಸುವ ಮೂಲಕ ಪ್ರಸ್ತುತ ಅಂತಹ ಬೃಹತ್ ಪ್ಯಾಕೇಜ್​​ಗಳಿಗೆ ನೀಡಲಾಗಿರುವ ಈ ವಿನಾಯಿತಿಯಲ್ಲಿನ ಲೋಪದೋಷವನ್ನು ಸರಿಮಾಡುವ ಗುರಿಯಿಂದ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.

"25 ಕೆಜಿಗಿಂತ ಹೆಚ್ಚಿನ ಪ್ಯಾಕೇಜ್ ಮಾಡಿದ ಸರಕುಗಳು ಕೂಡ ಚಿಲ್ಲರೆ ಮಾರಾಟಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಹೀಗೆ ಮಾಡುವುದು ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಪೂರ್ವ-ಪ್ಯಾಕೇಜ್ ಸರಕುಗಳ ಮೇಲೆ ಎಲ್ಲಾ ಮಾಹಿತಿಯನ್ನು ಮುದ್ರಿಸುವ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ ತಯಾರಕರು, ಪ್ಯಾಕರ್ ಗಳು ಮತ್ತು ಆಮದುದಾರರು ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಎಲ್ಲಾ ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ಸಮಗ್ರ ಮಾಹಿತಿಯ ಲೇಬಲ್ ಅನ್ನು ನೀಡುವುದು ಕಡ್ಡಾಯವಾಗಲಿದೆ. ಸಚಿವಾಲಯವು ಜುಲೈ 29 ರವರೆಗೆ ಈ ಪ್ರಸ್ತಾಪದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಈ ಕೆಳಗಿನವುಗಳನ್ನು ಹೊರತುಪಡಿಸಿ, ಎಲ್ಲಾ ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳಿಗೆ ಹೊಸ ನಿಯಮಗಳು ಅನ್ವಯವಾಗಲಿವೆ:

  • 25 ಕಿಲೋಗ್ರಾಂ ಅಥವಾ 25 ಲೀಟರ್ ಗಿಂತ ಹೆಚ್ಚಿನ ಪ್ರಮಾಣದ ಸರಕು ಹೊಂದಿರುವ ಪ್ಯಾಕೇಜ್​ಗಳು.
  • 50 ಕಿಲೋಗ್ರಾಂಗಿಂತ ಹೆಚ್ಚಿನ ತೂಕ ಹೊಂದಿರುವ ಚೀಲಗಳಲ್ಲಿ ಮಾರಾಟ ಮಾಡಲಾಗುವ ಸಿಮೆಂಟ್, ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳು.
  • ಕೈಗಾರಿಕಾ ಅಥವಾ ಸಾಂಸ್ಥಿಕ ಗ್ರಾಹಕರಿಗೆ ಮಾರಾಟ ಮಾಡಲು ಉದ್ದೇಶಿಸಲಾದ ಪ್ಯಾಕೇಜ್ ಮಾಡಿದ ಸರಕುಗಳು.

25 ಕಿಲೋಗ್ರಾಂ ಅಥವಾ 25 ಲೀಟರ್ ಗಿಂತ ಹೆಚ್ಚಿನ ಪ್ಯಾಕೇಜ್ ಗಳಿಗೆ ಪ್ರಸ್ತುತ ವಿನಾಯಿತಿಯು ಚಿಲ್ಲರೆ ಪ್ಯಾಕೇಜ್ ಮಾಡಿದ ಸರಕುಗಳು ಈ ತೂಕವನ್ನು ಮೀರುವುದಿಲ್ಲ ಎಂಬ ಊಹೆಯನ್ನು ಆಧರಿಸಿದೆ. ಆದರೆ ಅಂಥ ದೊಡ್ಡ ಪ್ಯಾಕೇಜ್​ಗಳು ಈಗ ಚಿಲ್ಲರೆ ಮಾರಾಟಕ್ಕೂ ಲಭ್ಯವಿವೆ. ಇದು ಎಲ್ಲಾ ಚಿಲ್ಲರೆ ಪೂರ್ವ-ಪ್ಯಾಕೇಜ್ ಸರಕುಗಳ ಮೇಲೆ ಮಾಹಿತಿಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸುವ ನಿಯಮಗಳ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಈ ಪ್ರಸ್ತಾವಿತ ತಿದ್ದುಪಡಿಯು ಈ ಸಮಸ್ಯೆಯನ್ನು ಸರಿಪಡಿಸುವ ಮತ್ತು ಮಾರುಕಟ್ಟೆಯಾದ್ಯಂತ ಪ್ರಮಾಣೀಕೃತ ಪ್ಯಾಕೇಜಿಂಗ್ ಮಾಹಿತಿಯ ಮೂಲಕ ಗ್ರಾಹಕರ ಸಮಗ್ರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : 21 ಸಾವಿರ ಕೋಟಿ ರೂ.ಗೆ ತಲುಪಿದ ಭಾರತದ ಯುದ್ಧ ಶಸ್ತ್ರಾಸ್ತ್ರ ರಫ್ತು: 10 ವರ್ಷಗಳಲ್ಲಿ 30 ಪಟ್ಟು ಹೆಚ್ಚಳ - India Defence Exports

ETV Bharat Logo

Copyright © 2024 Ushodaya Enterprises Pvt. Ltd., All Rights Reserved.