ಬೆಂಗಳೂರು: ದೇಶದ ಎರಡನೇ ಐಟಿ ದೈತ್ಯ ಇನ್ಫೋಸಿಸ್‌ನ ನಾಲ್ಕನೇ ಹಣಕಾಸು ತ್ರೈಮಾಸಿಕ ವರದಿ ಬಿಡುಗಡೆಗೊಂಡಿದೆ. ಕಳೆದ 23 ವರ್ಷಗಳಲ್ಲಿ ಮೊದಲ ಬಾರಿಗೆ 2023-24 ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಸುಮಾರು 25,994 ಉದ್ಯೋಗಿಗಳು ಕಡಿಮೆ ಆಗಿದ್ದಾರೆ. ಹಿಂದಿನ ಆರ್ಥಿಕ ವರ್ಷಕ್ಕಿಂತ ಇದು ಶೇ 7.5 ರಷ್ಟು ಕಡಿಮೆ. ಈ ಹಣಕಾಸು ವರ್ಷದಲ್ಲಿ ಕಂಪನಿಯಲ್ಲಿ ಸುಮಾರು 317,240 ಉದ್ಯೋಗಿಗಳಿದ್ದರು.
ವರ್ಷದ ಆರಂಭದಲ್ಲಿ ತರಬೇತಿ ಪಡೆದವರು ಸೇರಿದಂತೆ 77 ಪ್ರತಿಶತದಷ್ಟು ಸುಧಾರಣೆ ಕಂಡು ಬಂದಿದೆ. ಆ ಸಮಯದಲ್ಲಿ ಬೆಳವಣಿಗೆಯ ವಾತಾವರಣವು ತುಂಬಾ ವಿಭಿನ್ನವಾಗಿತ್ತು. ಹೀಗಾಗಿ ನಮ್ಮ ನೌಕರರ ಸಾಮರ್ಥ್ಯ ಹೆಚ್ಚಿಸಲು ನಾವು ಹೈಟೆಕ್ ಮಾರ್ಗದರ್ಶನ ನೀಡಿದ್ದೇವೆ ಎಂದು ಕಂಪನಿಯ ಸಿಎಫ್‌ಒ ಜಯೇಶ್ ಸಂಘರಾಜ್ಕ ಹೇಳಿದ್ದಾರೆ. ಗುರುವಾರ ಕಂಪನಿ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಹಾಗೂ 2023-24ನೇ ಸಾಲಿನ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದೆ.
ಬೆಳವಣಿಗೆಯ ವಾತಾವರಣವು ಬದಲಾದಂತೆ ನಾವು ಅಂತಹ ಕೆಲವು ಅಂಶಗಳನ್ನು ಮರು ಹೊಂದಿಸಬೇಕಾಗಿದೆ. ನಮ್ಮ ಬಳಕೆಯು ಈಗ 82 ಪ್ರತಿಶತಕ್ಕೆ ಬದಲಾಗಿದೆ. ನಮ್ಮ ದೌರ್ಬಲ್ಯ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿಮೆ ಅಗಿದೆ ಎಂದು ಸಿಎಫ್‌ಒ ಹೇಳಿದ್ದಾರೆ.
ಈ ತ್ರೈಮಾಸಿಕದಲ್ಲಿ ಕಂಪನಿಯು 5,423 ಉದ್ಯೋಗಿಗಳನ್ನು ಮಾತ್ರವೇ ಹೊಸದಾಗಿ ಸೇರಿಸಿಕೊಂಡಿದೆ. "ನಾವು ನಮ್ಮ ನೇಮಕಾತಿ ಮಾದರಿಯನ್ನು ಗಣನೀಯವಾಗಿ ಬದಲಾಯಿಸಿದ್ದೇವೆ. ನಾವು ಇನ್ಮುಂದೆ ಕ್ಯಾಂಪಸ್‌ನಿಂದ ಫ್ರೆಷರ್‌ಗಳನ್ನು ನೇಮಿಸಿಕೊಳ್ಳುವುದಿಲ್ಲ. ಅರ್ಧಕ್ಕಿಂತ ಕಡಿಮೆ ಕ್ಯಾಂಪಸ್‌ನಿಂದ ಮತ್ತು ಅರ್ಧಕ್ಕಿಂತ ಹೆಚ್ಚು ಕ್ಯಾಂಪಸ್ ಹೊರಗಡೆಯಿಂದ ನೇಮಕ ಮಾಡಿಕೊಳ್ಳುತ್ತೇವೆ ಎಂದು ಸಂಘರಾಜ್ಕಾ ಸ್ಪಷ್ಟಪಡಿಸಿದ್ದಾರೆ.
ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇಕಡಾ 30 ರಷ್ಟು ಜಿಗಿತವನ್ನು ಕಂಡಿದೆ. ಕಂಪನಿ ನಾಲ್ಕನೇ ತ್ರೈಮಾಸಿಕದಲ್ಲಿ 7,969 ಕೋಟಿ ರೂಪಾಯಿಗಳ ನಿವ್ವಳ ಲಾಭ ಘೋಷಿಸಿದೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 6,128 ಕೋಟಿ ರೂ. ನಿವ್ವಳ ಲಾಭವನ್ನು ಕಂಪನಿ ಗಳಿಸಿತ್ತು. ಇದು ಶೇ 30 ರಷ್ಟು ಹೆಚ್ಚು.
ಇದನ್ನು ಓದಿ: ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಉದ್ಯೋಗ ನೇಮಕಾತಿ ಶೇ 154ರಷ್ಟು ಹೆಚ್ಚಳ: ಅಧ್ಯಯನ ವರದಿ - Indian Electronics Industry