ETV Bharat / business

ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 20ರಷ್ಟು ಹೆಚ್ಚಳ - Net Direct Tax Collection

ಭಾರತದಲ್ಲಿ 2023-24ರ ಹಣಕಾಸು ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 20ರಷ್ಟು ಹೆಚ್ಚಳವಾಗಿದೆ.

Net direct tax collections for FY 2023-24 grow at over 19.88 p.c.

author img

By ETV Bharat Karnataka Team

Published : Mar 20, 2024, 1:25 PM IST

ನವದೆಹಲಿ: ಮಾರ್ಚ್ 17 ರವರೆಗೆ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹವು ಶೇಕಡಾ 19.88 ರಷ್ಟು ಏರಿಕೆಯಾಗಿ 18.90 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.

ಮಾರ್ಚ್ 17 ರ ವೇಳೆಗೆ ಸಂಗ್ರಹವಾದ 18,90,259 ಕೋಟಿ ರೂ.ಗಳ ನಿವ್ವಳ ನೇರ ತೆರಿಗೆಯು 9,14,469 ಕೋಟಿ ರೂ. ಕಾರ್ಪೊರೇಷನ್ ತೆರಿಗೆ (ಸಿಐಟಿ) (ಮರುಪಾವತಿಯ ನಿವ್ವಳ) ಮತ್ತು 9,72,224 ಕೋಟಿ ರೂ. ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್​ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ)ಗಳನ್ನು ಒಳಗೊಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್ 17 ರವರೆಗೆ ಸುಮಾರು 3.37 ಲಕ್ಷ ಕೋಟಿ ರೂ.ಗಳ ರಿಫಂಡ್​ ಅನ್ನು ಸಹ ನೀಡಲಾಗಿದೆ. ಒಟ್ಟು ಆಧಾರದ ಮೇಲೆ, ರಿಫಂಡ್​ ಅನ್ನು ಸರಿಹೊಂದಿಸುವ ಮೊದಲು ನೇರ ತೆರಿಗೆ ಸಂಗ್ರಹವು 22.27 ಲಕ್ಷ ಕೋಟಿ ರೂ.ಗಳಷ್ಟಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 18.74 ರಷ್ಟು ಹೆಚ್ಚಳವಾಗಿದೆ.

"2023-24ರ ಹಣಕಾಸು ವರ್ಷದ (ಮಾರ್ಚ್ 17, 2024 ರಂತೆ) ನೇರ ತೆರಿಗೆ ಸಂಗ್ರಹದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ- ನಿವ್ವಳ ನೇರ ತೆರಿಗೆ ಸಂಗ್ರಹವು 18,90,259 ಕೋಟಿ ರೂ.ಗಳಷ್ಟಿದೆ. ಹಿಂದಿನ ಹಣಕಾಸು ವರ್ಷದ (ಹಣಕಾಸು ವರ್ಷ 2022-23) ಇದೇ ಅವಧಿಯಲ್ಲಿ 15,76,776 ಕೋಟಿ ರೂ.ಗೆ ಹೋಲಿಸಿದರೆ, ಇದು ಶೇಕಡಾ 19.88 ರಷ್ಟು ಹೆಚ್ಚಳವಾಗಿದೆ" ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.

ನೇರ ತೆರಿಗೆ ಸಂಗ್ರಹದ ಪರಿಷ್ಕೃತ ಅಂದಾಜುಗಳಲ್ಲಿ ಸರ್ಕಾರವು ಪೂರ್ಣ ಹಣಕಾಸು ವರ್ಷದಲ್ಲಿ (ಏಪ್ರಿಲ್-ಮಾರ್ಚ್) ಆದಾಯವನ್ನು 19.45 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಿತ್ತು.

ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 208 ರ ಪ್ರಕಾರ, ಟಿಡಿಎಸ್ ಕಡಿತದ ನಂತರ ವರ್ಷಕ್ಕೆ ಅಂದಾಜು ತೆರಿಗೆ ಹೊಣೆಗಾರಿಕೆ 10,000 ರೂ.ಗಿಂತ ಹೆಚ್ಚು ಅಥವಾ ಸಮಾನವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮುಂಗಡ ತೆರಿಗೆ ಪಾವತಿಸಬೇಕಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ವ್ಯವಹಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವಿಲ್ಲದ ವ್ಯಕ್ತಿಗಳನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಜೂನ್, ಸೆಪ್ಟೆಂಬರ್, ಡಿಸೆಂಬರ್ ಮತ್ತು ಮಾರ್ಚ್ 15 ರೊಳಗೆ ನಾಲ್ಕು ಕಂತುಗಳಲ್ಲಿ ಮುಂಗಡ ತೆರಿಗೆಯನ್ನು ಪಾವತಿಸಬಹುದು. ಮುಂಗಡ ತೆರಿಗೆ ಸಂಗ್ರಹವು ದೇಶದ ಆರ್ಥಿಕ ಚಟುವಟಿಕೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ : 2029ಕ್ಕೆ ಭಾರತದಲ್ಲಿ 10ರಿಂದ 15 ಲಕ್ಷ ಸ್ಟಾರ್ಟ್​ಅಪ್ ಕಾರ್ಯಾರಂಭ: ಬಿಜೆಪಿ ಮುಖಂಡ ಹಿತೇಶ್ ಜೈನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.