ETV Bharat / business

ಕಳೆದೊಂದು ದಶಕದಲ್ಲಿ ಭಾರತೀಯರ ಆದಾಯ ಏರಿಕೆ: ಗೃಹ ಬಳಕೆಯ ವೆಚ್ಚವೂ ಹೆಚ್ಚಳ - Household Consumption Expenditure

author img

By ETV Bharat Karnataka Team

Published : Jun 10, 2024, 3:29 PM IST

ಕಳೆದ ಒಂದು ದಶಕದಲ್ಲಿ ಭಾರತೀಯರ ಗೃಹ ಬಳಕೆಯ ವೆಚ್ಚ ಏರಿಕೆಯಾಗಿದೆ.

ಕಳೆದೊಂದು ದಶಕದಲ್ಲಿ ಭಾರತೀಯರ ಆದಾಯ ಏರಿಕೆ:
ಸಂಗ್ರಹ ಚಿತ್ರ (IANS)

ನವದೆಹಲಿ: ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನತೆ ವಸ್ತುಗಳ ಖರೀದಿಗೆ ಮತ್ತು ಸೇವೆಗಳನ್ನು ಪಡೆಯಲು ಮಾಡುವ ಗೃಹ ಬಳಕೆಯ ವೆಚ್ಚವು ಕಳೆದ ದಶಕದಲ್ಲಿ ದೃಢವಾದ ಏರಿಕೆ ಕಂಡಿದೆ ತೋರಿಸಿದೆ ಎಂದು ಅಂಕಿಅಂಶ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಸಮೀಕ್ಷೆ ತಿಳಿಸಿದೆ. ಈ ಗೃಹ ಬಳಕೆಯ ವೆಚ್ಚದ ಅಂಕಿ ಸಂಖ್ಯೆಗಳು ಜನಸಂಖ್ಯೆಯ ಜೀವನ ಮಟ್ಟ ಮತ್ತು ಯೋಗಕ್ಷೇಮವನ್ನು ಪ್ರತಿಬಿಂಬಿಸುತ್ತವೆ.

2011-12ರಲ್ಲಿ ದಾಖಲಾದ ಅಂಕಿಅಂಶಗಳಿಗೆ ಹೋಲಿಸಿದರೆ, ಹಣದುಬ್ಬರವನ್ನು ಸರಿಹೊಂದಿಸಿದ ನಂತರ ಗ್ರಾಮೀಣ ಭಾರತದಲ್ಲಿ ಮಾಸಿಕ ತಲಾ ಗೃಹ ಬಳಕೆಯು 2022-23ರಲ್ಲಿ ಶೇಕಡಾ 40ಕ್ಕಿಂತ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕ ತಲಾ ಬಳಕೆಯ ವೆಚ್ಚವು 2011-12ರಲ್ಲಿ 1,430 ರೂ.ಗಳಿಂದ 2022-23ರಲ್ಲಿ 2,008 ರೂ.ಗೆ ಏರಿದೆ.

ಹಣದುಬ್ಬರವನ್ನು ಸರಿಹೊಂದಿಸಿದ ನಂತರ 2011-12ರಲ್ಲಿ 2,360 ರೂ. ಇದ್ದ ತಲಾ ಗೃಹ ಬಳಕೆ ವೆಚ್ಚವು 2022-23ರಲ್ಲಿ 3,510 ರೂ.ಗೆ ಏರುವುದರೊಂದಿಗೆ ಭಾರತದ ನಗರ ಪ್ರದೇಶದಲ್ಲಿನ ಗೃಹ ಬಳಕೆ ವೆಚ್ಚವು ಶೇಕಡಾ 33ರಷ್ಟು ಹೆಚ್ಚಳವಾಗಿದೆ.

ಹಣದುಬ್ಬರವನ್ನು ಸರಿಹೊಂದಿಸದೆ ಇದ್ದಾಗ ಈ ಅಂಕಿಅಂಶಗಳು 2022-23ರಲ್ಲಿ ನಗರ ಕುಟುಂಬಗಳಿಗೆ 6,459 ರೂ ಮತ್ತು ಗ್ರಾಮೀಣ ಕುಟುಂಬಗಳಿಗೆ 3,773 ರೂ.ಗಳಾಗಿದ್ದು, 2011-12 ರಲ್ಲಿ ಇದ್ದ ಕ್ರಮವಾಗಿ 2,630 ಮತ್ತು 1,430 ರೂ.ಗೆ ಹೋಲಿಸಿದರೆ, ಇದು ಹಣದುಬ್ಬರಕ್ಕೆ ಸರಿಹೊಂದಿಸಿದ ನಂತರ ನೈಜ ಅವಧಿಯ ಏರಿಕೆಗಿಂತ ಹೆಚ್ಚಾಗಿದೆ. ಗೃಹ ಬಳಕೆಯ ವೆಚ್ಚವು ಆಹಾರ, ಇಂಧನ, ವಿದ್ಯುತ್, ವೈದ್ಯಕೀಯ ಸೇವೆಗಳು, ಸಾರಿಗೆ ಮತ್ತು ಶಿಕ್ಷಣದ ವೆಚ್ಚವನ್ನು ಒಳಗೊಂಡಿದೆ.

2022-23ರಲ್ಲಿ, ಸರಾಸರಿ ಗ್ರಾಮೀಣ ಕುಟುಂಬಗಳ ಗೃಹ ಬಳಕೆಯ ವೆಚ್ಚದಲ್ಲಿ ಆಹಾರದ ಪಾಲು ಶೇಕಡಾ 46 ರಷ್ಟು ಇದ್ದರೆ, ನಗರ ಪ್ರದೇಶದ ಕುಟುಂಬಗಳ ಗೃಹ ಬಳಕೆಯ ವೆಚ್ಚದಲ್ಲಿ ಆಹಾರದ ಪಾಲು ಶೇಕಡಾ 39 ರಷ್ಟಿದೆ ಎಂದು ಸಮೀಕ್ಷೆ ತೋರಿಸಿದೆ.

ಜನತೆ ಬೇಳೆಕಾಳುಗಳು, ಹಾಲು, ತರಕಾರಿಗಳು, ಹಣ್ಣುಗಳು, ಮೊಟ್ಟೆ ಮತ್ತು ಮಾಂಸವನ್ನು ಹೆಚ್ಚಾಗಿ ಸೇವಿಸಲಾರಂಭಿಸಿರುವುದರಿಂದ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಅಕ್ಕಿ ಮತ್ತು ಗೋಧಿಯಂತಹ ಏಕದಳ ಧಾನ್ಯಗಳ ತಲಾ ಬಳಕೆಯಲ್ಲಿ ಕ್ರಮೇಣ ಕುಸಿತ ಕಂಡುಬಂದಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಬಳಕೆಯ ಮಾದರಿಯಲ್ಲಿನ ಈ ಬದಲಾವಣೆಯು ಈ ಅವಧಿಯಲ್ಲಿ ಜೀವನಮಟ್ಟದಲ್ಲಿ ಸುಧಾರಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದ್ದರಿಂದ ಮತ್ತು ಆದಾಯದ ಹೆಚ್ಚಳದಿಂದಾಗಿ ಸಾಧ್ಯವಾಗಿದೆ.

ಇದನ್ನೂ ಓದಿ : 2023-24ರಲ್ಲಿ 1 ಮಿಲಿಯನ್ ಟನ್ ಸರಕು ಸಾಗಿಸಿದ ಅದಾನಿ ಏರ್​ಪೋರ್ಟ್ಸ್​: ಶೇ 7ರಷ್ಟು ಬೆಳವಣಿಗೆ - Adani Airports cargo shipment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.