ನವದೆಹಲಿ: ಇದೇ ಮೊದಲ ಬಾರಿಗೆ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ 5ಜಿ ಹ್ಯಾಂಡ್ ಸೆಟ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ವರದಿಯೊಂದು ತಿಳಿಸಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಜಾಗತಿಕ 5ಜಿ ಹ್ಯಾಂಡ್ ಸೆಟ್ ಮಾರಾಟವು 2024 ರ ಮೊದಲಾರ್ಧದಲ್ಲಿ ಶೇಕಡಾ 20 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. 5ಜಿ ಹ್ಯಾಂಡ್ ಸೆಟ್ ಮಾರಾಟದಲ್ಲಿ ಆಪಲ್ ಮುಂಚೂಣಿಯಲ್ಲಿದ್ದು, ಶೇಕಡಾ 25 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಐಫೋನ್ 15 ಸರಣಿ ಮತ್ತು ಐಫೋನ್ 14 ಸರಣಿಯ ಫೋನ್ಗಳು ಅತ್ಯಧಿಕವಾಗಿ ಮಾರಾಟವಾಗಿದ್ದು, ಆಪಲ್ ಜಾಗತಿಕವಾಗಿ 5 ಜಿ ಹ್ಯಾಂಡ್ ಸೆಟ್ ಮಾರುಕಟ್ಟೆಯಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
5ಜಿ ಹ್ಯಾಂಡ್ ಸೆಟ್ಗಳ ಮಾರಾಟವು ಸ್ಥಿರವಾಗಿ ಬೆಳೆಯುತ್ತಿದೆ ಮತ್ತು ಕಡಿಮೆ ದರದಲ್ಲಿ 5ಜಿ ಹ್ಯಾಂಡ್ ಸೆಟ್ಗಳು ಮಾರುಕಟ್ಟೆಗೆ ಬಂದಿರುವುದರಿಂದ ಉದಯೋನ್ಮುಖ ಮಾರುಕಟ್ಟೆಗಳಲ್ಲಿ 5ಜಿ ಹ್ಯಾಂಡ್ ಸೆಟ್ಗಳು ಉತ್ತಮವಾಗಿ ಮಾರಾಟವಾಗುತ್ತಿವೆ. ಇತರ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸಹ 5ಜಿ ಹ್ಯಾಂಡ್ ಸೆಟ್ಗಳ ಮಾರಾಟ ಹೆಚ್ಚಾಗುತ್ತಿದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿನ ಗ್ರಾಹಕರು ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಕೊಂಡರೂ ಸಹ ಹೊಸ ಫೋನ್ 5ಜಿ ಆಗಿರಬೇಕೆಂದು ಬಯಸುತ್ತಿದ್ದಾರೆ.
ವರ್ಷದ ಮೊದಲಾರ್ಧದಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ಎರಡನೇ ಅತಿದೊಡ್ಡ 5ಜಿ ಹ್ಯಾಂಡ್ ಸೆಟ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಕಡಿಮೆ ಬಜೆಟ್ನ ಶಿಯೋಮಿ, ವಿವೋ, ಸ್ಯಾಮ್ ಸಂಗ್ ಮತ್ತು ಇತರ ಬ್ರಾಂಡ್ಗಳ 5ಜಿ ಸ್ಮಾರ್ಟ್ಫೋನ್ಗಳು ಅತ್ಯಧಿಕವಾಗಿ ಮಾರಾಟವಾಗುತ್ತಿರುವುದರಿಂದ ಭಾರತವು ಎರಡನೇ ಅತಿದೊಡ್ಡ 5ಜಿ ಹ್ಯಾಂಡ್ ಸೆಟ್ ಮಾರುಕಟ್ಟೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಹಿರಿಯ ವಿಶ್ಲೇಷಕ ಪ್ರಚಿರ್ ಸಿಂಗ್ ಹೇಳಿದ್ದಾರೆ.
5ಜಿ ಸ್ಮಾರ್ಟ್ಫೋನ್ಗಳ ಮಾರಾಟದಲ್ಲಿ ಸ್ಯಾಮ್ಸಂಗ್ ಎರಡನೇ ಸ್ಥಾನದಲ್ಲಿದ್ದು, ಗ್ಯಾಲಕ್ಸಿ ಎ ಸರಣಿ ಮತ್ತು ಎಸ್ 24 ಸರಣಿಯ ಫೋನ್ಗಳ ಜನಪ್ರಿಯತೆಯಿಂದಾಗಿ ಕಂಪನಿಯು ಶೇಕಡಾ 21 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. 2024 ರ ಮೊದಲಾರ್ಧದಲ್ಲಿ 5ಜಿ ಟಾಪ್-10 ಸ್ಮಾರ್ಟ್ಫೋನ್ ಮಾಡೆಲ್ಗಳ ಪಟ್ಟಿಯಲ್ಲಿ ಆಪಲ್ ಮತ್ತು ಸ್ಯಾಮ್ ಸಂಗ್ ತಲಾ ಐದು ಫೋನ್ಗಳನ್ನು ಹೊಂದಿವೆ. ಯುರೋಪ್ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಎಂಇಎ) ಪ್ರದೇಶಗಳಲ್ಲಿಯೂ 5 ಜಿ ಹ್ಯಾಂಡ್ ಸೆಟ್ ಮಾರಾಟವು ಎರಡಂಕಿ ಬೆಳವಣಿಗೆಯನ್ನು ಕಂಡಿದೆ.
ಇದನ್ನೂ ಓದಿ : ಆಗಸ್ಟ್ನಲ್ಲಿ 40 ಲಕ್ಷ ಹೊಸ ಡಿಮ್ಯಾಟ್ ಖಾತೆ ಓಪನ್: 17 ಕೋಟಿಗೆ ತಲುಪಿದ ಅಕೌಂಟ್ಗಳ ಸಂಖ್ಯೆ - Demat Accounts Rise