ಹೈದರಾಬಾದ್: ಕೆಲವು ವರ್ಷಗಳ ಹಿಂದೆ ನಿಮ್ಮ ಖಾತೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ತಿಳಿಯಲು ಗಂಟೆಗಂಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನಲ್ಲಿ ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಕ್ಷಣಮಾತ್ರದಲ್ಲಿ ಒದಗಿಸಲು ಆನ್ಲೈನ್ ಸೇವೆಗಳನ್ನು ನೀಡಲಾಗಿದೆ. ಇದರಿಂದ ಬ್ಯಾಂಕಿಂಗ್ ಸಂಬಂಧಿಸಿದ ಮಾಹಿತಿ ಒಂದೇ ಒಂದು ಸೆಕೆಂಡ್ನಲ್ಲಿ ಆನ್ಲೈನ್ ಮೂಲಕ ತಿಳಿಯಬಹುದಾಗಿದೆ.
ಸಾಮಾನ್ಯವಾಗಿ ಗ್ರಾಹಕರು ಖಾತೆಯಲ್ಲಿರುವ ಬ್ಯಾಲೆನ್ಸ್ ಕುರಿತು ಹೆಚ್ಚು ಪರಿಶೀಲಿಸುತ್ತಾರೆ. ಇದಕ್ಕಾಗಿ ಎಸ್‌ಬಿಐ ಅನೇಕ ರೀತಿಯಲ್ಲಿ ಈ ಬ್ಯಾಲೆನ್ಸ್ ಅನ್ನು ತಿಳಿಯಲು ಗ್ರಾಹಕರಿಗೆ ಅವಕಾಶ ನೀಡಿದೆ. ಇದೀಗ ಎಸ್ಎಂಎಸ್, ಆನ್ಲೈನ್ ಮತ್ತು ವಾಟ್ಸ್ಆ್ಯಪ್ ಸೇರಿದಂತೆ ಅನೇಕ ಮಾಧ್ಯಮಗಳ ಮೂಲಕವೂ ಬ್ಯಾಲೆನ್ಸ್ ನೋಡಿಕೊಳ್ಳಬಹುದಾಗಿದೆ.
ಮಿಸ್ಡ್ ಕಾಲ್ ಬ್ಯಾಂಕಿಂಗ್: ಮಿಸ್ಡ್ ಕಾಲ್ ನೀಡುವ ಮೂಲಕ ಕೂಡ ಗ್ರಾಹಕರು ತಮ್ಮ ಎಸ್‌ಬಿಐ ಖಾತೆಯಲ್ಲಿ ಹಣ ಎಷ್ಟಿದೆ ಎಂದು ತಿಳಿಯಬಹುದು. ಈ ಸೇವೆಯನ್ನು ಪಡೆಯುವ ಮೊದಲು ಅವರು ತಮ್ಮ ಅಧಿಕೃತ ಮೊಬೈನ್ನಿಂದ ನೋಂದಾಯಿಸಿಕೊಂಡಿರಬೇಕು.
- ಮೊದಲಿಗೆ, ನಿಮ್ಮ ಫೋನ್ನಲ್ಲಿರುವ ಮೇಸೆಜ್ ಆ್ಯಪ್ ಅನ್ನು ತೆರೆಯಿರಿ.
- ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಅನ್ನು ಇಲ್ಲಿ ಟೈಪ್ ಮಾಡಿ.
- ಬಳಿಕ ನೋಂದಾಣಿಯಾಗಿರುವ ಮೊಬೈಲ್ ನಂಬರ್ನಿಂದ 09223488888 ಈ ನಂಬರ್ಗೆ ಸಂದೇಶ ಕಳುಹಿಸಿ.
- ಈಗ ನಿಮ್ಮ ಎಸ್‌ಬಿಐ ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಸಕ್ರಿಯವಾಗುತ್ತದೆ.
- ಇದೀಗ ನಿಮ್ಮ ಬ್ಯಾಂಕ್ ಎರಡು ಆಯ್ಕೆಯನ್ನು ನೀಡುತ್ತದೆ.
- ಬ್ಯಾಂಕ್ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್ಮೆಂಟ್ ಪರಿಶೀಲಿಸಲು ಎರಡು ಪ್ರತ್ಯೇಕ ಟೋಲ್ ಫ್ರೀ ನಂಬರ್ ಅನ್ನು ನೀಡುತ್ತದೆ.
ಮತ್ತೊಂದು ಮಾರ್ಗ: 9223766666, 9223866666 ಸಂಖ್ಯೆಗೆ ಕರೆ ಮಾಡಿದರೆ ಎಸ್‌ಬಿಐ ಖಾತೆ ಮೂಲಕ ನಡೆಸಲಾದ ಕಳೆದ 5 ವಹಿವಾಟುಗಳ ಮಾಹಿತಿ ತಿಳಿಯಬಹುದು.
ವಾಟ್ಸ್ಆ್ಯಪ್: ಎಸ್‌ಬಿಐ ತನ್ನ ಅನೇಕ ಸೇವೆ ಮತ್ತು ಮಾಹಿತಿಯನ್ನು ಗ್ರಾಹಕರಿಗೆ ವಾಟ್ಸ್ಆ್ಯಪ್ ಬ್ಯಾಂಕಿಂಗ್ ಮೂಲಕವೂ ನೀಡುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಈ ಮಾರ್ಗದ ಮೂಲಕವೂ ತಿಳಿಯಬಹುದು
- +919022690226 ಈ ಸಂಖ್ಯೆಯನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೇವ್ ಮಾಡಿ
- ಈ ನಂಬರ್ಗೆ ಹಾಯ್ ಎಂದು ಸಂದೇಶ ರವಾನಿಸಿ
- ಇಲ್ಲಿ ಅನೇಕ ಆಯ್ಕೆಗಳು ಲಭ್ಯವಾಗಲಿದ್ದು, ಅಲ್ಲಿ ಬ್ಯಾಲೆನ್ಸ್ ಮಾಹಿತಿ ಮೇಲೆ ಕ್ಲಿಕ್ ಮಾಡಿ
- ನಿಮಗೆ ಬೇಕಾದ ಎಲ್ಲಾ ಮಾಹಿತಿ ಕ್ಷಣ ಮಾತ್ರದಲ್ಲಿ ನಿಮ್ಮ ಅಂಗೈಯಲ್ಲಿ ಸಿಗಲಿದೆ.
ಮಾಹಿತಿ ಸಂಬಂಧಿತ ಮಿನಿ ಸ್ಟೇಟ್ಮೆಂಟ್, ಅಕೌಂಟ್ ಸ್ಟೇಟ್ಮೆಂಟ್, ಪೆನ್ಷನ್ ಸ್ಲೀಪ್, ಎನ್ಆರ್ಐ ಖಾತೆಗಳ ಮಾಹಿತಿಯನ್ನು ಕೂಡ ಈ ಎಸ್‌ಬಿಐ ವಾಟ್ಸ್ಆ್ಯಪ್ ಬ್ಯಾಂಕಿಂಗ್ ಸೇವೆ ಮೂಲಕ ಪಡೆಯಬಹುದು. ಇದರ ಹೊರತಾಗಿ, ಅನೇಕ ಬ್ಯಾಂಕಿಂಗ್ ಸೇವೆಗಳು ಕೂಡ ಲಭ್ಯವಿದೆ.
ಎಸ್ಎಂಎಸ್ ಮೂಲಕ ಮಾಹಿತಿ: ಸಂದೇಶ ಮೂಲಕ ಮಾಹಿತಿ ಪಡೆಯಲು ಈ ಕ್ರಮ ಅನುಸರಿಸಿ.
- ಮೊದಲಿಗೆ ಮೆಸೇಜ್ ಆ್ಯಪ್ ತೆರೆಯಿರಿ. ಅಲ್ಲಿ BAL ಎಂದು ಟೈಪ್ ಮಾಡಿ
- ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಿಂದ +919223766666 ಈ ನಂಬರ್ಗೆ ಸಂದೇಶ ಕಳುಹಿಸಿ.
- ತತ್ಕ್ಷಣಕ್ಕೆ ಖಾತೆಯಲ್ಲಿರುವ ಬ್ಯಾಲೆನ್ಸ್ ತಿಳಿಯಬಹುದು
- ಜೊತೆಗೆ ಎಂಎಸ್ಟಿಎಂಟಿಗೆ ಸಂದೇಶ ಕಳುಹಿಸುವ ಮೂಲಕ ಮಿನಿ ಸ್ಟೇಟ್ಮೆಂಟ್ ಪಡೆಯಬಹುದು.
ಯೊನೊ ಆಪ್: ಎಸ್ಬಿಐನ ಯೊನೊ ಆ್ಯಪ್ ಮೂಲಕ ಕೂಡ ಎಸ್‌ಬಿಐ ಖಾತೆಯ ಬ್ಯಾಲೆನ್ಸ್ ತಿಳಿಯಬಹುದು. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಇದರ ಮೂಲಕ ಅನೇಕ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಈ ಸೇವೆ ಪಡೆಯಲು ಹೀಗೆ ಮಾಡಿ.
- ಮೊದಲಿಗೆ ಯೊನೊ ಆ್ಯಪ್ ಅನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿ.
- ಯೂಸರ್ ನೇಮ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಮಾಡಿ.
- ಪಿನ್ ಅಥವಾ ಬಯೋಮೆಟ್ರಿಕ್ ಮೂಲಕ ದೃಢೀಕರಿಸಿ.
- ಹೋಮ್ ಸ್ಕ್ರೀನ್ನಲ್ಲಿ ವಿವ್ಯೂ ಬ್ಯಾಲೆನ್ಸ್ ಆಯ್ಕೆ ಬರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಪರಿಶೀಲಿಸಬಹುದು.
- ನೆಟ್ ಬ್ಯಾಂಕಿಂಗ್:
- https://www.onlinesbi.sbi/ ವೆಬ್ಸೈಟ್ಗೆ ಡೆಸ್ಕ್ ಟಾಪ್ ಮತ್ತು ಮೊಬೈಲ್ ಮೂಲಕ ಲಾಗಿನ್ ಮಾಡಿ.
- ಪರ್ಸನಲ್ ಬ್ಯಾಂಕಿಂಗ್ ಹೋಗಿ ಅಲ್ಲಿ ಲಾಗಿನ್ ಕ್ಲಿಕ್ ಮಾಡಿ
- ಯುಸರ್ ನೇಮ್, ಪಾಸ್ವರ್ಡ್ ಮೂಲಕ ಲಾಗಿನ್ ಮಾಡಿ.
- ರಿಜಿಸ್ಟರ್ ಮೊಬೈಲ್ ನಂಬರ್ಗೆ ಒಟಿಪಿ ಲಭ್ಯವಾಗಲಿದೆ.
- ಅದನ್ನು ಹಾಕಿದ ಬಳಿಕ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಪುಟ ತೆರೆಯಲಿದೆ.
- ಅಕೌಂಟ್ ಸಮ್ಮರಿ ಸೆಕ್ಷನ್ಗೆ ಹೋಗಿ ಅಲ್ಲಿ ವಹಿವಾಟಿ ಖಾತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.
- ತಕ್ಷಣಕ್ಕೆ ಎಸ್‌ಬಿಐ ಖಾತೆಯಲ್ಲಿ ಎಷ್ಟಿದೆ ಹಣ ಎಂಬುದು ತಿಳಿಯಬಹುದು.
ಇದನ್ನೂ ಓದಿ: ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ: ನೀವು ಬಯಸಿದಾಗಲೆಲ್ಲಾ ಹಣ ಹಿಂಪಡೆಯಲು ಅವಕಾಶ!, ಲಾಭ ಏನು ಅಂತೀರಾ?