ETV Bharat / business

ಇನ್ಮುಂದೆ ದುಬಾರಿಯಾಗಲಿವೆ ಹೀರೊ ಬೈಕ್, ಸ್ಕೂಟರ್: ಜುಲೈ 1ರಿಂದಲೇ ಹೊಸ ದರ ಜಾರಿ! - Hero MotoCorp price hike - HERO MOTOCORP PRICE HIKE

ಇದೇ ಜುಲೈ 1 ರಿಂದ ಹೀರೊ ಕಂಪನಿಯ ಬೈಕ್ ಮತ್ತು ಸ್ಕೂಟರ್​ಗಳ ಬೆಲೆ ಹೆಚ್ಚಾಗಲಿವೆ.

ದುಬಾರಿಯಾಗಲಿವೆ ಹೀರೊ ಬೈಕ್, ಸ್ಕೂಟರ್
ದುಬಾರಿಯಾಗಲಿವೆ ಹೀರೊ ಬೈಕ್, ಸ್ಕೂಟರ್ (IANS (ಸಾಂದರ್ಭಿಕ ಚಿತ್ರ))
author img

By IANS

Published : Jun 24, 2024, 1:30 PM IST

ನವದೆಹಲಿ: ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೊಕಾರ್ಪ್ ಜುಲೈ 1 ರಿಂದ ಜಾರಿಗೆ ಬರುವಂತೆ ಆಯ್ದ ಮೋಟಾರ್ ಸೈಕಲ್ ಮತ್ತು ಸ್ಕೂಟರ್​ಗಳ ಎಕ್ಸ್ ಶೋರೂಂ ಬೆಲೆಯನ್ನು 1,500 ರೂ.ವರೆಗೆ ಹೆಚ್ಚಿಸುವುದಾಗಿ ಸೋಮವಾರ ತಿಳಿಸಿದೆ. "1,500 ರೂ.ಗಳವರೆಗೆ ಬೆಲೆಗಳು ಹೆಚ್ಚಾಗಲಿವೆ ಮತ್ತು ಹೆಚ್ಚಳದ ನಿಖರವಾದ ಪ್ರಮಾಣವು ನಿರ್ದಿಷ್ಟ ಮಾದರಿ ಮತ್ತು ಮಾರುಕಟ್ಟೆಗಳಿಗೆ ಅನುಗುಣವಾಗಿ" ಎಂದು ಕಂಪನಿಯು ಎಕ್ಸ್ ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ. ವಾಹನಗಳ ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಬೆಲೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.

ಮೇ ತಿಂಗಳಲ್ಲಿ, ಹೀರೋ ಮೋಟೊಕಾರ್ಪ್ 4,98,123 ಸಂಖ್ಯೆಯಷ್ಟು ಮೋಟಾರ್ ಸೈಕಲ್ ಮತ್ತು ಸ್ಕೂಟರ್​ಗಳನ್ನು ಮಾರಾಟ ಮಾಡಿದೆ. ಇದು 2023 ರ ಮೇ ತಿಂಗಳಲ್ಲಿ ಮಾರಾಟವಾದ 5,19,474 ಸಂಖ್ಯೆಗಿಂತ ಶೇಕಡಾ 4.1 ರಷ್ಟು ಕಡಿಮೆಯಾಗಿದೆ.

ಮೋಟಾರ್ ಸೈಕಲ್ ವಿಭಾಗದಲ್ಲಿ, ಕಂಪನಿಯು ಮೇ 2024 ರಲ್ಲಿ 4.71 ಲಕ್ಷ ಯುನಿಟ್​ಗಳನ್ನು ಮಾರಾಟ ಮಾಡಿದೆ. ಇದು 2023 ರ ಮೇ ತಿಂಗಳಲ್ಲಿ ಮಾರಾಟವಾದ 4.89 ಲಕ್ಷ ಯುನಿಟ್​ಗಳಿಗಿಂತ ಶೇಕಡಾ 3.7 ರಷ್ಟು ಕಡಿಮೆಯಾಗಿದೆ. ಹಾಗೆಯೇ ಸ್ಕೂಟರ್​ಗಳ ಮಾರಾಟವು ಸುಮಾರು ಶೇಕಡಾ 11 ರಷ್ಟು ಕುಸಿತ ಕಂಡಿದೆ. ಹಿಂದಿನ ವರ್ಷ ಮಾರಾಟವಾದ 30,138 ಯುನಿಟ್​ಗಳಿಗೆ ಹೋಲಿಸಿದರೆ 2024 ರ ಮೇ ತಿಂಗಳಲ್ಲಿ 26,937 ಯುನಿಟ್​ಗಳು ಮಾರಾಟವಾಗಿವೆ.

ಅಲ್ಲದೇ ದೇಶೀಯವಾಗಿ ಕಳೆದ ವರ್ಷ ಮಾರಾಟವಾದ 5.08 ಯುನಿಟ್​ಗಳಿಗೆ ಹೋಲಿಸಿದರೆ ಈ ವರ್ಷ 4.79 ಲಕ್ಷ ಯುನಿಟ್​ಗಳು ಮಾರಾಟವಾಗಿವೆ. ಇದು ಸುಮಾರು ಶೇಕಡಾ 5.7 ರಷ್ಟು ಕುಸಿತವಾಗಿದೆ. ಇನ್ನು ರಫ್ತುಗಳು ಹೆಚ್ಚಾಗಿದ್ದು, ಕಳೆದ ವರ್ಷದ ಮೇ ತಿಂಗಳಲ್ಲಿ ಮಾರಾಟವಾದ 11,165 ಯುನಿಟ್​ಗಳಿಗೆ ಹೋಲಿಸಿದರೆ ಈ ವರ್ಷ 18,673 ಯುನಿಟ್​ಗಳು ಮಾರಾಟವಾಗಿವೆ.

ಮತ್ತೊಂದು ಬೆಳವಣಿಗೆಯಲ್ಲಿ, ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಅಥೆರ್ ಎನರ್ಜಿಯಲ್ಲಿ 124 ಕೋಟಿ ರೂ. ಹೂಡಿಕೆ ಮಾಡಿದ್ದು, ಇನ್ನೂ ಶೇಕಡಾ 2.2 ರಷ್ಟು ಪಾಲನ್ನು ಪಡೆದುಕೊಳ್ಳಲಿದೆ. ಈ ಹೂಡಿಕೆಯೊಂದಿಗೆ ಈಗಾಗಲೇ ಅಥೆರ್​ನಲ್ಲಿ ಅತಿದೊಡ್ಡ ಷೇರುದಾರರಾಗಿದ್ದ ಹೀರೋ ಮೋಟೊಕಾರ್ಪ್, ಸಂಸ್ಥೆಯ ಒಟ್ಟು ಷೇರುಗಳ ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಷೇರು ಹೊಂದಿದೆ. ಮಾರ್ಚ್ 2024 ರ ಹೊತ್ತಿಗೆ, ಪ್ರವರ್ತಕರು ಅಥೆರ್​ನಲ್ಲಿ ಶೇಕಡಾ 34.76 ರಷ್ಟು ಪಾಲನ್ನು ಹೊಂದಿದ್ದರು.

ಇದನ್ನೂ ಓದಿ : ದೇಶಾದ್ಯಂತ 400 ಹೊಸ ಶಾಖೆ ಆರಂಭಿಸಲಿದೆ ಎಸ್​ಬಿಐ - SBI To Open More Branches

ETV Bharat Logo

Copyright © 2025 Ushodaya Enterprises Pvt. Ltd., All Rights Reserved.