ETV Bharat / business

ಬೇಳೆ ಕಾಳುಗಳ ದಾಸ್ತಾನಿಗೆ ಮಿತಿ: ಬೆಲೆಯೇರಿಕೆ ತಡೆಗೆ ಕೇಂದ್ರದ ಕ್ರಮ - stock limit for pulses

author img

By ETV Bharat Karnataka Team

Published : Jun 22, 2024, 1:34 PM IST

ಬೇಳೆಕಾಳುಗಳ ಬೆಲೆಯೇರಿಕೆ ಹಾಗೂ ಸಂಗ್ರಹವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ನಿರ್ದಿಷ್ಟ ಬೇಳೆ ಕಾಳುಗಳ ಸಂಗ್ರಹಕ್ಕೆ ಮಿತಿ ವಿಧಿಸಿದೆ.

ಬೇಳೆಕಾಳುಗಳ ಸಂಗ್ರಹಕ್ಕೆ ಮಿತಿ ವಿಧಿಸಿದ ಸರ್ಕಾರ
ಬೇಳೆಕಾಳುಗಳ ಸಂಗ್ರಹಕ್ಕೆ ಮಿತಿ ವಿಧಿಸಿದ ಸರ್ಕಾರ (IANS (ಸಂಗ್ರಹ ಚಿತ್ರ))

ನವದೆಹಲಿ : ಆಹಾರ ಧಾನ್ಯಗಳ ಕಾಳಸಂತೆ ಹಾಗೂ ಬೆಲೆಯೇರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಧಾನ್ಯಗಳ ಸಂಗ್ರಹಕ್ಕೆ ಮಿತಿ ವಿಧಿಸಿ ಆದೇಶ ಹೊರಡಿಸಿದೆ. ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು, ಮಿಲ್​ ಹೊಂದಿದವರು ಮತ್ತು ಧಾನ್ಯಗಳ ಆಮದುದಾರರು ಸಂಗ್ರಹಿಸಿ ಇಟ್ಟುಕೊಳ್ಳಬಹುದಾದ ಬೇಳೆಕಾಳುಗಳ ದಾಸ್ತಾನಿಗೆ ಮಿತಿಯನ್ನು ವಿಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ತಕ್ಷಣದಿಂದ ಜಾರಿಗೆ ಬರಲಿರುವ ಈ ಆದೇಶವು ಸೆಪ್ಟೆಂಬರ್ 30, 2024 ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ತೊಗರಿ ಸೇರಿದಂತೆ ಕಡಲೆ, ಕಾಬೂಲಿ ಕಡಲೆಗಳಿಗೆ ಈ ದಾಸ್ತಾನು ಮಿತಿ ಅನ್ವಯವಾಗಲಿದೆ. ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ಬೇಳೆಕಾಳುಗಳಿಗೆ ಪ್ರತ್ಯೇಕವಾಗಿ ಅನ್ವಯವಾಗುವ ದಾಸ್ತಾನು ಮಿತಿಗಳು ಸಗಟು ವ್ಯಾಪಾರಿಗಳಿಗೆ 200 ಮೆಟ್ರಿಕ್ ಟನ್ (ಎಂಟಿ) ಆಗಿರುತ್ತದೆ. ಈ ಮಿತಿಯು ಚಿಲ್ಲರೆ ವ್ಯಾಪಾರಿಗಳಿಗೆ 5 ಮೆಟ್ರಿಕ್ ಟನ್ ಆಗಿದ್ದು, ಪ್ರತಿ ಚಿಲ್ಲರೆ ಮಾರಾಟ ಮಳಿಗೆಯಲ್ಲಿ 5 ಮೆಟ್ರಿಕ್ ಟನ್ ಮತ್ತು ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳಿಗೆ ಡಿಪೋದಲ್ಲಿ 200 ಮೆಟ್ರಿಕ್ ಟನ್ ಧಾನ್ಯ ಸಂಗ್ರಹಿಸಬಹುದಾಗಿದೆ.

ಮಿಲ್​ಗಳ ವಿಷಯದಲ್ಲಿ, ಸ್ಟಾಕ್ ಮಿತಿಯು ಮಿಲ್​ ಈ ಹಿಂದಿನ 3 ತಿಂಗಳಲ್ಲಿ ಉತ್ಪಾದಿಸಿದಷ್ಟು ಪ್ರಮಾಣ ಅಥವಾ ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇ 25 ರಷ್ಟಾಗಿರುತ್ತದೆ. ಇದರಲ್ಲಿ ಯಾವುದು ಹೆಚ್ಚೋ ಅದು ಅನ್ವಯವಾಗಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ದಿನಾಂಕದಿಂದ 45 ದಿನಗಳ ನಂತರ ಆಮದುದಾರರು ತಾವು ಆಮದು ಮಾಡಿಕೊಂಡ ಸ್ಟಾಕ್ ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

"ಆಯಾ ನೋಂದಾಯಿತ ಕಂಪನಿಗಳು ಗ್ರಾಹಕ ವ್ಯವಹಾರಗಳ ಇಲಾಖೆಯ ಪೋರ್ಟಲ್ (https://fcainfoweb.nic.in/psp) ನಲ್ಲಿ ತಮ್ಮ ಸ್ಟಾಕ್ ಪ್ರಮಾಣವನ್ನು ಘೋಷಿಸಬೇಕು ಮತ್ತು ಒಂದೊಮ್ಮೆ ಈ ಕಂಪನಿಗಳು ನಿಗದಿತ ಮಿತಿಗಿಂತ ಹೆಚ್ಚಿನ ಸ್ಟಾಕ್ ಹೊಂದಿದ್ದರೆ, ಅದನ್ನು ಜುಲೈ 12, 2024 ರೊಳಗೆ ನಿಗದಿತ ಸ್ಟಾಕ್ ಮಿತಿಯ ಒಳಗೆ ತರಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಸ್ಟಾಕ್ ಡಿಸ್​ಕ್ಲೋಸರ್​ ಪೋರ್ಟಲ್ ಮೂಲಕ ಬೇಳೆ ಕಾಳುಗಳ ದಾಸ್ತಾನು ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲಾಖೆಯು ಏಪ್ರಿಲ್ ಮೊದಲ ವಾರದಲ್ಲಿ ಎಲ್ಲ ಸ್ಟಾಕ್ ಹೋಲ್ಡಿಂಗ್ ಘಟಕಗಳು ಕಡ್ಡಾಯ ಸ್ಟಾಕ್ ಬಹಿರಂಗಪಡಿಸುವಿಕೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳೊಂದಿಗೆ ಸಂವಹನ ನಡೆಸಿತ್ತು. ಇದಕ್ಕಾಗಿ ಏಪ್ರಿಲ್ ಕೊನೆಯ ವಾರದಿಂದ ಮೇ 10 ರವರೆಗೆ ದೇಶಾದ್ಯಂತ ಪ್ರಮುಖ ಬೇಳೆಕಾಳು ಉತ್ಪಾದಿಸುವ ರಾಜ್ಯಗಳು ಮತ್ತು ವ್ಯಾಪಾರ ಕೇಂದ್ರಗಳಿಗೆ ಭೇಟಿ ನೀಡಲಾಗಿತ್ತು.

ಇದನ್ನೂ ಓದಿ : ಏಪ್ರಿಲ್​ನಲ್ಲಿ EPFOಗೆ ದಾಖಲೆಯ 20 ಲಕ್ಷ ಸದಸ್ಯರ ಸೇರ್ಪಡೆ: ಶೇ 31ರಷ್ಟು ಏರಿಕೆ - EPFO Data

ETV Bharat Logo

Copyright © 2024 Ushodaya Enterprises Pvt. Ltd., All Rights Reserved.