ವಿವಾಹ ಸೇರಿದಂತೆ ಇತರ ಹಬ್ಬ ಹಾಗೂ ಆಚರಣೆಗಳಲ್ಲಿ ಚಿನ್ನ ಮತ್ತು ಬೆಳ್ಳಿಗೆ ಹೆಚ್ಚ ಪ್ರಾಶಸ್ತ್ಯ. ಹಾಗಾಗಿ ಭಾರತೀಯರು ಬಂಗಾರ ಕೊಳ್ಳಲು ಸೂಕ್ತ ಸಮಯ ನೋಡುತ್ತಲೇ ಇರುತ್ತಾರೆ. ಇಂದು ಆಭರಣ ಖರೀದಿಗಾಗಿ ಉತ್ತಮ ಅವಕಾಶ ಕೂಡಿ ಬಂದಿದೆ. ಕಾರಣ ಕಳೆದ ದಿನಕ್ಕೆ ಹೋಲಿಸಿದರೆ ಇಂದು ಹಳದಿ ಲೋಹಗಳ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
Gold Rate Today May 25, 2024: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಅಗ್ಗವಾಗಿದೆ. ಚಿನ್ನ ಅಷ್ಟೇ ಅಲ್ಲದೇ ಬೆಳ್ಳಿ ಲೋಹದಲ್ಲೂ ಸಹ ಬೆಲೆ ಇಳಿಕೆ ಕಾಣಬಹುದಾಗಿದೆ. ಇದರಿಂದಾಗಿ ಆಭರಣ ಖರೀದಿದಾರರ ಜೇಬಿಗೆ ಸ್ವಲ್ಪ ಉಳಿತಾಯವಾಗುವುದು ಗ್ಯಾರೆಂಟಿ ಅಂತಲೇ ಹೇಳಬಹುದು. ಕರ್ನಾಟಕ ಸೇರಿದಂತೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಮುಖ ನಗರಗಳಲ್ಲಿ ಸದ್ಯ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಸಾಧಿಸಿವೆ. ದರ ಇಳಿಕೆ ಆಭರಣ ಪ್ರಿಯರಿಗೆ ಖುಷಿ ತರಿಸಿದೆ.
Gold Rate Today: ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆಗೆ 73,420 ರೂ. ಇದ್ದರೆ, ಶನಿವಾರ 72,440 ರೂ. ಆಗಿದೆ. 980 ರೂ. ಇಳಿಕೆ ಕಂಡಿದೆ. ಗುರುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 94,680 ರೂ. ರಷ್ಟಿದ್ದರೆ, ಶನಿವಾರದ ವೇಳೆಗೆ 2,840 ರೂ.ರಷ್ಟು ಇಳಿಕೆ ಕಂಡು ರೂ. 91,840ಕ್ಕೆ ತಲುಪಿದೆ. ವೀಕೆಂಡ್‌ನಲ್ಲಿ ಕುಸಿತ ಸಾಧಿಸಿದ್ದರಿಂದ ಆಭರಣ ಖರೀದಿ ಕೂಡ ಜೋರಾಗಿದೆ.
- ಬೆಂಗಳೂರಿನಲ್ಲಿ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ 72,440 ರೂ. ಇತ್ತು
- ಇನ್ನು 22 ಕ್ಯಾರೆಟ್ನ ಆಭರಣ ಬಂಗಾರದ ಬೆಲೆ 10 ಗ್ರಾಂಗೆ 66, 400 ರೂಪಾಯಿ ಇದೆ.
ಇನ್ನು ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 72,440 ರೂ. ಇದೆ. ಇಲ್ಲಿಯೇ ಪ್ರತಿ ಕೆಜಿ ಬೆಳ್ಳಿ ಬೆಲೆ 91,840 ರೂ. ಇದೆ. ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 72,440 ರೂ. ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 91,840 ರೂ. ಇದೆ. ವಿಶಾಖಪಟ್ಟಣಂನಲ್ಲಿ ಹತ್ತು ಗ್ರಾಂ ಹಳದಿಗೆ 73,980 ರೂ. ಇದ್ದರೆ ಹಾಗೆಯೇ ಪ್ರತಿ ಕೆಜಿ ಬೆಳ್ಳಿ ಬೆಲೆ 91,840 ರೂ. ಇದೆ. ಪ್ರದ್ದುಟೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 72,440 ರೂ. ಇದ್ದರೆ ಪ್ರತಿ ಕೆಜಿ ಬೆಳ್ಳಿ ಬೆಲೆ 91,840 ರೂ. ಇದೆ. ಇನ್ನು ಮಹಾನಗರ ನವದೆಹಲಿಯಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 72,590 ರೂ
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ದರಗಳು ಬದಲಾಗುತ್ತವೆ.
Spot Gold Price May 25, 2024: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಬಹುತೇಕ ಸ್ಥಿರವಾಗಿವೆ. ಶುಕ್ರವಾರದಂದು 2330 ಡಾಲರ್ ಇದ್ದ ಔನ್ಸ್ ಚಿನ್ನದ ಬೆಲೆ ಶನಿವಾರದ ವೇಳೆಗೆ 2334 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.38 ಡಾಲರ್ ಆಗಿದೆ. ಆದರೆ, ಕ್ರಿಪ್ಟೋ ಕರೆನ್ಸಿ ವಹಿವಾಟು ಶನಿವಾರ ಭಾರೀ ನಷ್ಟದಲ್ಲಿದೆ. ಬಿಟ್ ಕಾಯಿನ್ 50,99,938 ರೂ., ಎಥೆರಿಯಮ್ 2,76,125 ರೂ., ಟೆಥರ್ 79.45 ರೂ., ಬೈನಾನ್ಸ್ ನಾಣ್ಯ 47,254 ರೂ., ಸೊಲೊನಾ 12,741 ರೂ. ಇದೆ.
Petrol And Diesel Prices May 25, 2024: ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.93 ಇದೆ. ಹೈದರಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಇದ್ದರೆ, ಡೀಸೆಲ್ ಬೆಲೆ 95.63 ರೂ. ಇದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಇದ್ದರೆ, ಡೀಸೆಲ್ ಬೆಲೆ 96.16 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂ. ಇದ್ದರೆ ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 104.21 ರೂ. ಇದ್ದರೆ ಡೀಸೆಲ್ ಬೆಲೆ ಲೀಟರ್‌ಗೆ 92.15 ರೂ. ಇದೆ.
ಇದನ್ನೂ ಓದಿ: ರೆಬೆಲ್ ಆಗುತ್ತಿರುವ 'ರೆಮಲ್': ನಾಳೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ - cyclone remal