ETV Bharat / business

ಚಿನ್ನಾಭರಣ ಖರೀದಿ ಮಾಡುವವರಿಗೆ ಗುಡ್‌ನ್ಯೂಸ್‌!.. ಇಂದು ಬಂಗಾರದ ಬೆಲೆ ಎಷ್ಟಿದೆ ಗೊತ್ತಾ? - GOLD RATE

ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ ಕಂಡಿದ್ದು, ಚಿನ್ನಾಭರಣ ಖರೀದಿ ಮಾಡುವವರಿಗೆ ಇದು ಸಕಾಲ! ಮದುವೆ, ಶುಭ ಸಮಾರಂಭಗಳ ಸೀಸನ್‌ ಆರಂಭವಾಗಿದ್ದು, ಚಿನ್ನ ಕೊಂಡುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಿದೆ.

Gold prices in India fell precipitously today, Monday,
ಸಂಗ್ರಹ ಚಿತ್ರ (Getty Images)
author img

By ETV Bharat Karnataka Team

Published : Dec 2, 2024, 2:32 PM IST

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಇಳಿಕೆಯತ್ತ ಸಾಗಿದೆ. ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯಲ್ಲೂ ಸಹ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಭಾರತದಲ್ಲಿ ಸದ್ಯ ಮದುವೆ ಸೀಸನ್‌ ಶುರುವಾಗಿದ್ದು, ಆಭರಣ ಖರೀದಿದಾರರಿಗೆ ಇದರಿಂದ ಹೆಚ್ಚು ಉಳಿತಾಯವಾಗಲಿದೆ.

ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ ತಣ್ಣಗಾದ ಪ್ರಕ್ಷುಬ್ಧ ವಾತಾವರಣದ ಜೊತೆಗೆ, ಜಾಗತಿಕ ಸೂಚನೆಗಳು ಮಿಶ್ರವಾಗಿದ್ದು, ಡಾಲರ್ ಹೆಚ್ಚು ಬಲಗೊಳ್ಳುತ್ತಿರುವುದು, ಚಿನ್ನದ ಮೇಲೆ ನಿರಂತರ ಪರಿಣಾಮ ಬೀರುತ್ತಿವೆ. ಹೀಗಾಗಿ ಕಳೆದ ಕೆಲವು ವಹಿವಾಟುಗಳಲ್ಲಿ ಚಿನ್ನದ ಬೆಲೆ ಇಳಿಕೆ ಸಾಕ್ಷಿಯಾಗಿದೆ. ಇಂದು ಕೂಡ (ಸೋಮವಾರ, ಡಿಸೆಂಬರ್ 2) ಚಿನ್ನದ ಬೆಲೆಯಲ್ಲಿ ತೀವ್ರವಾಗಿ ಕುಸಿತ ಕಂಡಿದ್ದು, ಚಿನ್ನಾಭರಣ ಖರೀದಿ ಮಾಡುವವರಿಗೆ ಇದು ಶುಭ ಸುದ್ದಿ ಎಂದೇ ಹೇಳಬಹುದು.

Gold Rate Today December 2nd, 2024: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಗಳು ಇಂದು ತೀವ್ರವಾಗಿ ಕುಸಿದಿವೆ. ಭಾನುವಾರದಂದು 10 ಗ್ರಾಂ ಚಿನ್ನದ ಬೆಲೆ ರೂ.79,015 ರಷ್ಟಿತ್ತು. ಆದರೆ, ಸೋಮವಾರದ ವೇಳೆಗೆ ರೂ.921 ಇಳಿಕೆಯಾಗಿ ರೂ.78,094 ಆಗಿದೆ. ಭಾನುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.91,662 ರಷ್ಟಿದ್ದರೆ, ಸೋಮವಾರ ರೂ.1,119 ಇಳಿಕೆಯಾಗಿ ರೂ.90,543 ರಷ್ಟಿದೆ.

ಮದುವೆ ಸೀಸನ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗುವುದು ಸಾಮಾನ್ಯ. ಬೇಡಿಕೆ ಹೆಚ್ಚಾದಂತೆ ಬೆಲೆ ಕೂಡ ಏರುವುದು ಸಹಜ. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮದುವೆ ಸೀಸನ್‌ನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಇದು ಚಿನ್ನಾಭರಣ ಕೊಂಡುಕೊಳ್ಳುವವರಿಗೆ ಸಕಾಲ ಎಂದೇ ಹೇಳಬಹುದು.

Gold Price In Bengaluru: ಬೆಂಗಳೂರಿನಲ್ಲಿ 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ ರೂ.77,350 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 91,000 ರೂ. ಇದೆ.

Gold Price In Hyderabad: ಹೈದರಾಬಾದ್‌ನಲ್ಲಿ 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 78,094 ರೂ. ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,543 ರೂ. ಇದೆ.

Gold Price In Mumbai/Kolkata: ಮುಂಬೈನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ರೂ.77,350 ಇದ್ದರೆ, ಕೋಲ್ಕತ್ತಾದಲ್ಲಿ ಬೆಲೆ ರೂ. 77,350 ಇದೆ.

Gold Price In Vijayawada: ವಿಜಯವಾಡದಲ್ಲಿ 10 ಗ್ರಾಂ ಗ್ರಾಂ ಚಿನ್ನದ ಬೆಲೆ 78,094 ರೂ. ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,543 ರೂ. ಇದೆ.

Gold Price In Visakhapatnam: ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ 78,094 ರೂ. ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,543 ರೂ. ಇದೆ.

Gold Price In Proddatur: ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.78,094 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,543 ರೂ. ಇದೆ.

ಚಿನ್ನಾಭರಣ ಖರಿದೀದಾರರಿಗೆ ಸಿಹಿ ಸುದ್ದಿ: ಒಂದೇ ದಿನದಲ್ಲಿ ಚಿನ್ನ ಬೆಲೆ 600 ರೂಪಾಯಿಯಿಂದ 900 ರೂಪಾಯಿ ವರೆಗೂ ಕುಸಿತ ಕಂಡಿದೆ. ಹಾಗಾಗಿ ಚಿನ್ನ ಖರೀದಿ ಮಾಡಲು ಕಾಯುತ್ತಿರುವ ಆಭರಣ ಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದೆ. ಅದರಲ್ಲೂ, ಮದುವೆ ಸೀಸನ್ ಇದ್ದು, ಚಿನ್ನದ ಬೆಲೆ ಕುಸಿತದ ಕಡೆಗೆ ಮುಖ ಮಾಡಿದೆ.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತಿರುವುದನ್ನು ಗಮನಿಸಬಹುದು.

Spot Gold Price: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ. ಭಾನುವಾರದಂದು ಔನ್ಸ್ ಚಿನ್ನದ ಬೆಲೆ 2,651 ಡಾಲರ್ ಆಗಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.22 ಡಾಲರ್ ಆಗಿದೆ.

Rupee Value Today: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದಲ್ಲಿ 2 ಪೈಸೆ ಏರಿಕೆಯಾಗಿದೆ. ಪ್ರಸ್ತುತ ಡಾಲರ್ ಎದುರು ರೂ. 84.58 ಆಗಿದೆ.

ಇದನ್ನು ಓದಿ: ನವೆಂಬರ್​ ತಿಂಗಳಲ್ಲಿ ಯಾವಾವ ಕಾರುಗಳು ಎಷ್ಷೆಷ್ಟು ಮಾರಾಟವಾಗಿವೆ ಗೊತ್ತಾ? ಇಲ್ಲಿದೆ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.