Gold Rate Today: ದೇಶದಲ್ಲಿಂದು ಚಿನ್ನದ ದರದಲ್ಲಿ ಬದಲಾವಣೆ ಆಗಿದ್ದು ಸ್ವಲ್ಪ ಇಳಿಕೆಯಾಗಿದೆ. ಆದ್ರೆ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ ರೂ.74,000 ಆಗಿದ್ದರೆ, ಬುಧವಾರ (ಇಂದು) ರೂ.145 ರೂ. ನಷ್ಟು ಇಳಿಕೆಯಾಗಿ ರೂ.73,855ಕ್ಕೆ ತಲುಪಿದೆ. ಮಂಗಳವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 84,139 ರೂ.ಗಳಾಗಿದ್ದರೆ, ಬುಧವಾರ 121 ರೂ.ಗಳ ಏರಿಕೆ ಕಂಡು 84,260 ರೂ.ಗೆ ತಲುಪಿದೆ. ಪ್ರಮುಖ ಜಿಲ್ಲೆಗಳಿಲ್ಲಿನ ಬಂಗಾರದ ದರ ಈ ಕೆಳಗಿದೆ.
- Gold Price In Bengaluru: ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಬಂಗಾರ (24K)ದ ಬೆಲೆ ರೂ.72,270 ಆಗಿದೆ. ಕೆಜಿ ಬೆಳ್ಳಿಯ ಬೆಲೆ 84,100 ರೂ. ಇದೆ.
- Gold Price In Mangaluru: ಕಡಲ ನಗರಿ ಮಂಗಳೂರಿನಲ್ಲಿ 10 ಗ್ರಾಂ ಶುದ್ಧ ಬಂಗಾರ (24K)ದ ಬೆಲೆ ರೂ.72,270 ಆಗಿದೆ. ಕೆಜಿ ಬೆಳ್ಳಿಯ ಬೆಲೆ 84,100 ರೂ. ಇದೆ.
- Gold Price In Mysuru: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 10 ಗ್ರಾಂ ಶುದ್ಧ ಬಂಗಾರ (24K)ದ ಬೆಲೆ ರೂ.72,270 ಆಗಿದೆ. ಕೆಜಿ ಬೆಳ್ಳಿಯ ಬೆಲೆ 84,100 ರೂ. ಇದೆ.
- Gold Price In Hubli: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 10 ಗ್ರಾಂ ಶುದ್ಧ ಬಂಗಾರ (24K)ದ ಬೆಲೆ ರೂ.71,775 ಆಗಿದೆ. ಕೆಜಿ ಬೆಳ್ಳಿಯ ಬೆಲೆ 84,100 ರೂ. ಇದೆ.
ಸ್ಪಾಟ್ ಗೋಲ್ಡ್ ಬೆಲೆ Spot Gold Price: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ಮಂಗಳವಾರ, ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2322 ಡಾಲರ್‌ಗಳಷ್ಟಿತ್ತು. ಆದರೆ, ಬುಧವಾರದ ಹೊತ್ತಿಗೆ ಅದು 5 ಡಾಲರ್‌ಗಳಷ್ಟು ಕಡಿಮೆಯಾಗಿ 2317 ಡಾಲರ್‌ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 27.35 ಡಾಲರ್ ಆಗಿದೆ.
ಪ್ಟೋಕರೆನ್ಸಿ ಬೆಲೆಗಳು ಹೀಗಿವೆ - Cryptocurrency : ಕ್ರಿಪ್ಟೋ ಕರೆನ್ಸಿ ವಹಿವಾಟು ಬುಧವಾರ ಸಮತಟ್ಟಾಗಿ ಮುಂದುವರಿಯುತ್ತದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಯಾವುವು?
ಕ್ರಿಪ್ಟೋ ಕರೆನ್ಸಿ | ಈಗಿನ ಬೆಲೆ |
ಬಿಟ್ಕಾಯಿನ್ | ರೂ.49,74,168 |
ಎಥೆರಿಯಮ್ | ರೂ.2,51,200 |
ಟೆಥರ್ | ರೂ.79.55 |
ಬೈನಾನ್ಸ್ ನಾಣ್ಯ | ರೂ.47,124 |
ಸೋಲೋನಾ | ರೂ.12,087 |
ಸ್ಟಾಕ್ ಮಾರುಕಟ್ಟೆ ಅಪಡೇಟ್ಸ್
Stock Market Today: ದೇಶಿ ಷೇರು ಮಾರುಕಟ್ಟೆ ಇಂದು ನಷ್ಟದೊಂದಿಗೆ ಆರಂಭಗೊಂಡಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ -45.46 ಅಂಕ ಕಳೆದುಕೊಂಡು 73,446 ನೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 22,302ರೊಂದಿಗೆ ವಹಿವಾಟು ಮುಕ್ತಾಯವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ Rupee Open: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಂದು 2 ಪೈಸೆ ಅಷ್ಟು ಏರಿಕೆ ಕಂಡಿದೆ. ಪ್ರಸ್ತುತ, ದೇಶಿಯ ಕರೆನ್ಸಿ ಡಾಲರ್ ವಿರುದ್ದ 83.49ರೂ. ಆಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ Petrol And Diesel Prices: ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.99.24 ಇದ್ದು ಡೀಸೆಲ್ ಬೆಲೆ 85.93 ರೂ. ಆಗಿದೆ. ಮಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.11 ರೂ. ಇದ್ದು, ಡೀಸೆಲ್ ಬೆಲೆ 85.15 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.
ಇದನ್ನೂ ಓದಿ: ಅಕ್ಷಯ ತೃತೀಯಕ್ಕೆ ಚಿನ್ನ ಏಕೆ ಖರೀದಿಸಬೇಕು? ಬಂಗಾರ ದುಬಾರಿ ಅನಿಸಿದ್ರೆ ಇರುವ ಆಯ್ಕೆಗಳೇನು? - Akshaya Tritiya 2024