ETV Bharat / business

ಬೆಲೆ ಹೆಚ್ಚಾದರೂ ತಗ್ಗದ ವ್ಯಾಮೋಹ: ಭಾರತದಲ್ಲಿ ಚಿನ್ನದ ಬೇಡಿಕೆ ಶೇ 8ರಷ್ಟು ಹೆಚ್ಚಳ - Gold Demand In India - GOLD DEMAND IN INDIA

ಭಾರತದಲ್ಲಿ ಚಿನ್ನದ ಬೇಡಿಕೆ ಶೇ 8ರಷ್ಟು ಹೆಚ್ಚಳವಾಗಿದೆ.

India's gold demand rises 8 pc in Jan-March despite soaring prices

author img

By ETV Bharat Karnataka Team

Published : Apr 30, 2024, 3:01 PM IST

ನವದೆಹಲಿ: ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ 136.6 ಟನ್​ಗಳಿಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 8 ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಬೆಲೆ ಏರಿಕೆಯ ಹೊರತಾಗಿಯೂ ಚಿನ್ನದ ಖರೀದಿ ಏರಿಕೆಯಾಗಿದೆ. ಇದು ಆರ್ಥಿಕತೆ ಮತ್ತು ಅದರೊಂದಿಗೆ ಆದಾಯವೂ ಬೆಳೆಯುತ್ತಿರುವುದರ ಸೂಚನೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಭಾರತದ ಒಟ್ಟು ಚಿನ್ನದ ಬೇಡಿಕೆಯಲ್ಲಿ ಆಭರಣ ಚಿನ್ನದ ಬೇಡಿಕೆ ಶೇಕಡಾ 4 ರಷ್ಟು ಏರಿಕೆಯಾಗಿ 91.9 ಟನ್​ಗಳಿಂದ 95.5 ಟನ್​ಗಳಿಗೆ ತಲುಪಿದೆ. ಒಟ್ಟು ಚಿನ್ನದ ಮೇಲಿನ ಹೂಡಿಕೆಯ ಬೇಡಿಕೆ (ಬಾರ್, ನಾಣ್ಯಗಳ ರೂಪದಲ್ಲಿ)ಯು ಶೇಕಡಾ 19 ರಷ್ಟು ಏರಿಕೆಯಾಗಿ 34.4 ಟನ್​ಗಳಿಂದ 41.1 ಟನ್​ಗಳಿಗೆ ತಲುಪಿದೆ.

ಮೌಲ್ಯವಾರು ನೋಡುವುದಾದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಶೇಕಡಾ 20 ರಷ್ಟು ಏರಿಕೆಯಾಗಿ 75,470 ಕೋಟಿ ರೂ.ಗೆ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರಷ್ಯಾ-ಉಕ್ರೇನ್ ಯುದ್ಧದ ನಡುವೆ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಚಿನ್ನದ ಖರೀದಿಯನ್ನು ಹೆಚ್ಚಿಸಿದೆ. ಈ ಮೂಲಕ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಚಿನ್ನದ ಸಂಗ್ರಹ 19 ಟನ್​ಗಳಷ್ಟು ಹೆಚ್ಚಾಗಿದೆ. ಇದು ಕಳೆದ ವರ್ಷದ 16 ಟನ್​ಗಳ ನಿವ್ವಳ ಖರೀದಿಯನ್ನು ಮೀರಿಸಿದೆ ಎಂದು ಡಬ್ಲ್ಯುಜಿಸಿ ತಿಳಿಸಿದೆ.

2024 ರಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ 700 ರಿಂದ 800 ಮೆಟ್ರಿಕ್ ಟನ್​ಗಳ ನಡುವೆ ಇರುವ ಸಾಧ್ಯತೆಯಿದೆ. ಬೆಲೆಗಳು ಇನ್ನೂ ಹೆಚ್ಚಾದರೆ ಈ ಪ್ರಮಾಣ ಕೊಂಚ ಕಡಿಮೆಯಾಗಬಹುದು ಎಂದು ಡಬ್ಲ್ಯುಜಿಸಿಯ ಭಾರತೀಯ ವಿಭಾಗದ ಸಿಇಒ ಸಚಿನ್ ಜೈನ್ ಹೇಳಿದ್ದಾರೆ. 2024 ರಲ್ಲಿ ಶೇಕಡಾ 13 ಕ್ಕಿಂತ ಹೆಚ್ಚು ಏರಿಕೆಯಾದ ನಂತರ ಚಿನ್ನದ ದೇಶೀಯ ಬೆಲೆಗಳು ಏಪ್ರಿಲ್​ನಲ್ಲಿ 10 ಗ್ರಾಂಗೆ 73,958 ರೂ.ಗೆ ತಲುಪಿವೆ. 2023 ರಲ್ಲಿ ಇದು ಶೇಕಡಾ 10 ರಷ್ಟು ಏರಿಕೆಯಾಗಿದೆ.

ಚಿನ್ನದ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭವಾಗುತ್ತಿದೆ. ಆದರೆ ದುಬಾರಿ ವೆಚ್ಚದಿಂದಾಗಿ ಆಭರಣಗಳಿಗಾಗಿ ಚಿನ್ನದ ಬಳಕೆ ಕಡಿಮೆಯಾಗುತ್ತಿದೆ ಎಂದು ಜೈನ್ ಹೇಳಿದರು.

ಇದನ್ನೂ ಓದಿ : ಓಲಾ ಕ್ಯಾಬ್ಸ್​ ಸಿಇಒ ಹೇಮಂತ್ ಬಕ್ಷಿ ರಾಜೀನಾಮೆ: ಯಾವ ಕಾರಣಕ್ಕೆ? - OLA CABS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.