ETV Bharat / business

ಆಭರಣಪ್ರಿಯರಿಗೆ ಗುಡ್​ನ್ಯೂಸ್​: ಚಿನ್ನ, ಬೆಳ್ಳಿ ದರ ಮತ್ತಷ್ಟು ಇಳಿಕೆ - Gold Silver Rate

ಕೇಂದ್ರ ಬಜೆಟ್‌ ನಂತರ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿವೆ.

gold-tumbles-rs-950-silver-nosedives-rs-4500-on-weak-demand
ಸಾಂದರ್ಭಿಕ ಚಿತ್ರ (ETV Bharat)
author img

By PTI

Published : Jul 30, 2024, 11:09 AM IST

ನವದೆಹಲಿ: ರಾಷ್ಟ್ರ ರಾಜಧಾನಿಯ ಸ್ಥಳೀಯ ಮಾರುಕಟ್ಟೆಗಳಲ್ಲಿ ಸೋಮವಾರ ಚಿನ್ನಾಭರಣಕ್ಕೆ ಬೇಡಿಕೆ ತುಸು ತಗ್ಗಿತು. ಪರಿಣಾಮ, 10 ಗ್ರಾಂ ಚಿನ್ನದ ಬೆಲೆಯಲ್ಲಿ 950 ರೂ ಇಳಿಕೆಯಾಗಿದೆ.

ಈ ಹಿಂದಿನ ಅವಧಿಯಲ್ಲಿ ಶೇ 99.9ರಷ್ಟು ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 72 ಸಾವಿರ ರೂ ಇದ್ದರೆ, 99.5 ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 70,700 ರೂ ಇದ್ದು, ದಿನದ ವಹಿವಾಟಿನ ಅಂತ್ಯಕ್ಕೆ 72,350 ರೂಪಾಯಿಗೆ ಮಾರಾಟವಾಗುತ್ತಿತ್ತು ಎಂದು ಆಲ್​ ಇಂಡಿಯಾ ಸರಾಫಾ ಅಸೋಸಿಯೇಷನ್​ ತಿಳಿಸಿದೆ.

ಬೆಳ್ಳಿ ಬೆಲೆಯೂ ಇಳಿಕೆ: ಬಂಗಾರದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆ ಕಂಡುಬಂದಿದ್ದು, 4,500 ರೂ ದರ ಕಡಿಮೆಯಾಗಿದೆ. ಕೆ.ಜಿ ಬೆಳ್ಳಿಗೆ 84,500 ರೂಪಾಯಿಯಂತೆ ಸೋಮವಾರದ ವಹಿವಾಟು ಅಂತ್ಯಕಂಡಿದೆ. ಬೆಳ್ಳಿ ನಾಣ್ಯ ಮತ್ತು ಉದ್ಯಮ ಘಟಕಗಳು ಕಡಿಮೆಯಾದ ಹಿನ್ನೆಲೆಯಲ್ಲಿ ದರ ಇಳಿದಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಾರ ಕೇಂದ್ರ ಬಜೆಟ್​ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಚಿನ್ನದ ಮೇಲಿನ ಸೀಮಾ ಸುಂಕವನ್ನು ಶೇ 15ರಿಂದ 6ರಷ್ಟು ಕಡಿತ ಮಾಡಿದ್ದರು.

ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಏರುತ್ತಿದೆ. ಕಾಮೆಕ್ಸ್ ಚಿನ್ನ ಪ್ರತಿ ಔನ್ಸ್‌ಗೆ 2,438.50 ಅಮೆರಿಕನ್​ ಡಾಲರ್​ನಲ್ಲಿ ವಹಿವಾಟು ಕಂಡಿದ್ದು, ಪ್ರತಿ ಔನ್ಸ್‌ಗೆ 10.60 ಡಾಲರ್​​ ಹೆಚ್ಚಾಗಿದೆ. ಬೆಳ್ಳಿ ಬೆಲೆ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, ನ್ಯೂಯಾರ್ಕ್​ನಲ್ಲಿ 28.28 ಯುಎಸ್​​ ಡಾಲರ್​ ಇದೆ.

ಇದನ್ನೂ ಓದಿ: ಫಿನ್​ಟೆಕ್​ ಎನ್​ಬಿಎಫ್​ಸಿಗಳಿಂದ 98 ಸಾವಿರ ಕೋಟಿ ಮೊತ್ತದ 9 ಕೋಟಿ ಸಾಲ ಬಟವಾಡೆ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.