ETV Bharat / business

ಗ್ರಾಮೀಣ ಭಾರತದಲ್ಲಿ ಗ್ರಾಹಕ ವಸ್ತುಗಳ ಬಳಕೆ, 2 ವರ್ಷಗಳಲ್ಲಿ ಶೇ 60ರಷ್ಟು ಏರಿಕೆ: ವರದಿ

ಗ್ರಾಮೀಣ ಭಾರತದಲ್ಲಿ ಎಫ್​ಎಂಸಿಜಿ ಸರಕುಗಳ ಬಳಕೆ ಹೆಚ್ಚಾಗುತ್ತಿದೆ ಎಂದು ವರದಿ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Nov 11, 2024, 6:52 PM IST

ಮುಂಬೈ, ಮಹಾರಾಷ್ಟ್ರ: ಕಳೆದ ಎರಡು ವರ್ಷಗಳಲ್ಲಿ ಭಾರತದ ಗ್ರಾಮೀಣ ಗ್ರಾಹಕರ ಸರಾಸರಿ ಎಫ್ ಎಂಸಿಜಿ ಸರಕುಗಳ ಬಳಕೆ ಶೇ 60ರಷ್ಟು ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾದ ಇತ್ತೀಚಿನ ಗ್ರೂಪ್ ಎಂ ಮತ್ತು ಕಾಂಟಾರ್ ವರದಿ ತಿಳಿಸಿದೆ.

"ಗ್ರಾಮೀಣ ಭಾರತದಲ್ಲಿ ಸರಾಸರಿ ಎಫ್​ಎಂಸಿಜಿ ಸರಕುಗಳ ಬಳಕೆ 2022 ರಲ್ಲಿ ಇದ್ದ 5.88 ರಿಂದ 2024 ರಲ್ಲಿ 9.3 ಕ್ಕೆ ಗಮನಾರ್ಹ ಹೆಚ್ಚಳವಾಗಿದೆ. ಆರ್​ಟಿಇ, ಪಾನೀಯಗಳು ಮುಂತಾದ ದಿನಬಳಕೆ ವಸ್ತುಗಳ ಹೆಚ್ಚಿನ ಬಳಕೆಯಿಂದ ಪ್ರೇರಿತವಾಗಿದೆ" ಎಂದು ವರದಿ ಹೇಳಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಜೀವನಶೈಲಿ ವಿಕಸನಗೊಳ್ಳುತ್ತಿರುವ ಮತ್ತು ಖರೀದಿಸುವ ಶಕ್ತಿ ಹೆಚ್ಚಾಗಿರುವುದರ ಸೂಚನೆಯಾಗಿದೆ.

ಜಮ್ಮು ಮತ್ತು ಕಾಶ್ಮೀರ (ಶೇ 39), ಮಹಾರಾಷ್ಟ್ರ (ಶೇ 41) ಮತ್ತು ಒಡಿಶಾ (ಶೇ 26) ರಾಜ್ಯಗಳು ಕಡಿಮೆ ಆರ್ಥಿಕ ಮಟ್ಟಗಳ ಹೊರತಾಗಿಯೂ ಎಫ್ಎಂಸಿಜಿ ಬಳಕೆಯಲ್ಲಿ ಮಧ್ಯಮ ಗಾತ್ರದ ಬೆಳವಣಿಗೆಯನ್ನು ತೋರಿಸಿವೆ. ಎಫ್ಎಂಸಿಜಿ ವರ್ಗದ ವಿಸ್ತರಣೆಯಲ್ಲಿನ ಈ ಸಕಾರಾತ್ಮಕ ಪ್ರವೃತ್ತಿಯು ಹೆಚ್ಚುತ್ತಿರುವ ಗ್ರಾಮೀಣ ಆದಾಯ ಮತ್ತು ಸಂಬಳದ ಆದಾಯ ಸೇರಿದಂತೆ ಆದಾಯ ಮೂಲಗಳ ವೈವಿಧ್ಯತೆಯೊಂದಿಗೆ ಬೆಸೆದುಕೊಂಡಿದೆ ಎಂದು 2024 ರ ಗ್ರಾಮೀಣ ಬಾರೋಮೀಟರ್ ವರದಿ ತಿಳಿಸಿದೆ.

ಎಫ್​ಎಂಸಿಜಿ ಸರಕುಗಳ ಬಳಕೆಯಲ್ಲಿ ಗಮನಾರ್ಹ ವ್ಯತ್ಯಾಸ: ವೈವಿಧ್ಯಮಯ ಆದಾಯದ ಮೂಲಗಳನ್ನು ಹೊಂದಿರುವವರಿಗೆ ಹೋಲಿಸಿದರೆ ಜನಸಂಖ್ಯೆಯ ಶೇಕಡಾ 19 ರಷ್ಟಿರುವ ಕೇವಲ ಕೃಷಿ ಆದಾಯ ಹೊಂದಿರುವ ಗ್ರಾಮೀಣ ವ್ಯಕ್ತಿಗಳ ನಡುವೆ ಎಫ್​ಎಂಸಿಜಿ ಸರಕುಗಳ ಬಳಕೆಯಲ್ಲಿ ಗಮನಾರ್ಹ ವ್ಯತ್ಯಾಸವಿರುವುದನ್ನು ವರದಿ ಎತ್ತಿ ತೋರಿಸಿದೆ. ಕೃಷಿ ಆದಾಯವನ್ನು ಮಾತ್ರ ಅವಲಂಬಿಸಿರುವವರು ಹೆಚ್ಚಿನ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಅವರ ಪೈಕಿ ಶೇ 82 ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ, ವೈವಿಧ್ಯಮಯ ಆದಾಯದ ಮೂಲಗಳನ್ನು ಹೊಂದಿರುವವರು ಕಡಿಮೆ ಒತ್ತಡ ಹೊಂದಿರುತ್ತಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಎಫ್​ಎಂಸಿಜಿ ಸರಕುಗಳನ್ನು ಬಳಸುತ್ತಾರೆ ಎಂದು ವರದಿ ಹೇಳಿದೆ.

ಡಿಜಿಟಲ್ ಮಾಧ್ಯಮಗಳನ್ನು ಸಂಯೋಜಿಸುವ ಹೈಬ್ರಿಡ್ ಮಾದರಿ: ಮಾಧ್ಯಮ ಬಳಕೆಯ ವಿಷಯದಲ್ಲಿ, ಗ್ರಾಮೀಣ ಭಾರತವು ಸಾಂಪ್ರದಾಯಿಕ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಸಂಯೋಜಿಸುವ ಹೈಬ್ರಿಡ್ ಮಾದರಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದೆ. ಗ್ರಾಮೀಣ ಜನಸಂಖ್ಯೆಯ 47 ಪ್ರತಿಶತದಷ್ಟು ಜನರು ಈ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ. ಉತ್ತಮ ಡಿಜಿಟಲ್ ಮೂಲಸೌಕರ್ಯ ಹೊಂದಿರುವ ಪ್ರದೇಶಗಳಲ್ಲಿ ಈ ಬದಲಾವಣೆ ಹೆಚ್ಚು ಸ್ಪಷ್ಟವಾಗಿದೆ. ಆದಾಗ್ಯೂ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್​​​​ಗಢದಂತಹ ರಾಜ್ಯಗಳು ಕಡಿಮೆ ಡಿಜಿಟಲ್ ಸಂಪರ್ಕ ಹೊಂದಿವೆ.

ಇ - ಕಾಮರ್ಸ್ ಪ್ರಭಾವ: ಗ್ರಾಮೀಣ ಭಾರತವು ವಿಕಸನಗೊಳ್ಳುತ್ತಿದ್ದಂತೆ ಡಿಜಿಟಲ್ ಪ್ಲಾಟ್ ಫಾರ್ಮ್​ಗಳು ಗ್ರಾಹಕರನ್ನು ತಲುಪುವಲ್ಲಿ ಮತ್ತು ತೊಡಗಿಸಿಕೊಳ್ಳುವಲ್ಲಿ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿವೆ. ಪಾವತಿಗಳು ಮತ್ತು ಇ - ಕಾಮರ್ಸ್ ನಿಂದ ಹಿಡಿದು ಗೇಮಿಂಗ್ ಮತ್ತು ಜೀವನಶೈಲಿ ವಿಷಯದವರೆಗೆ ಡಿಜಿಟಲ್ ವಲಯವು ವಿಸ್ತರಿಸುತ್ತಿದೆ. ಸಾಂಪ್ರದಾಯಿಕ ಮಾಧ್ಯಮವು ಪ್ರಭಾವಶಾಲಿಯಾಗಿದ್ದರೂ, ಆನ್ ಲೈನ್ ಮತ್ತು ಆಫ್ ಲೈನ್ ಚಾನೆಲ್​​​​ಗಳನ್ನು ನಿಯಂತ್ರಿಸುವ ಹೈಬ್ರಿಡ್ ವಿಧಾನವು ಗ್ರಾಮೀಣ ಪ್ರೇಕ್ಷಕರೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸಲು ಪ್ರಮುಖವಾಗಿದೆ. ಗ್ರಾಮೀಣ ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳು ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಬ್ರಾಂಡ್​​​ಗಳು ಈ ಮಾರುಕಟ್ಟೆಯ ಅಪಾರ ಬೆಳವಣಿಗೆಯ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು ಎಂದು ವರದಿ ಗಮನಸೆಳೆದಿದೆ.

ಇದನ್ನೂ ಓದಿ : ಮದುವೆ ಸೀಸನ್​ನಲ್ಲಿ ಶುಭ ಸುದ್ದಿ: ಚಿನ್ನದ ಬೆಲೆ 77 ಸಾವಿರ ರೂ.ಗೆ ಇಳಿಕೆ, ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.