ETV Bharat / business

2023 ರ ಏಪ್ರಿಲ್-ಡಿಸೆಂಬರ್​ನಲ್ಲಿ ಎಫ್‌ಡಿಐ ಶೇಕಡಾ 13ರಷ್ಟು ಇಳಿಕೆ

ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಎಫ್‌ಡಿಐ
ಎಫ್‌ಡಿಐ
author img

By ETV Bharat Karnataka Team

Published : Feb 29, 2024, 1:39 PM IST

ನವದೆಹಲಿ: ಡಿಜಿಟಲ್​​, ಟೆಲಿಕಾಂ, ಫಾರ್ಮಾ ಸೇರಿದಂತೆ ಹಲವು ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) 2023-24 ನೇ ಸಾಲಿನ ಹಣಕಾಸು ವರ್ಷದ 9 ತಿಂಗಳಲ್ಲಿ (ಏಪ್ರಿಲ್-ಡಿಸೆಂಬರ್‌) ಶೇಕಡಾ 13 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

2022-23 ರ ಹಣಕಾಸು ವರ್ಷದಲ್ಲಿ ಇದೇ 9 ತಿಂಗಳ ಅವಧಿಯಲ್ಲಿ 36.74 ಬಿಲಿಯನ್​ ಡಾಲರ್​ ಎಫ್​ಡಿಐ ಹೂಡಿಕೆಯಾಗಿತ್ತು. ಈ ವರ್ಷ ಅದು 32.03 ಬಿಲಿಯನ್​ ಡಾಲರ್​ನಷ್ಟು ಮಾತ್ರ ಹೂಡಿಕೆಯಾಗಿದೆ. ಅಂದರೆ ಶೇಕಡಾ 13 ರಷ್ಟು ಕುಂಠಿತವಾಗಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 18 ರಷ್ಟು (11.6 ಬಿಲಿಯನ್​ ಡಾಲರ್​) ಏರಿಕೆ ಕಂಡಿದೆ. 2022-23 ರಲ್ಲಿ ಇದೇ ಅವಧಿಯಲ್ಲಿ 9.83 ಬಿಲಿಯನ್​ ಡಾಲರ್​ ವಿದೇಶಿ ಬಂಡವಾಳ ಹರಿದು ಬಂದಿತ್ತು.ಈಕ್ವಿಟಿ, ಮರುಹೂಡಿಕೆ ಮತ್ತು ಇತರ ಬಂಡವಾಳ ಸೇರಿ ಶೇಕಡಾ 7 ರಷ್ಟು ಇಳಿಕೆಯಾಗಿದೆ ಎಂದು ಅಂಕಿಅಂಶ ಹಂಚಿಕೊಂಡಿದೆ.

ಯಾವ ರಾಷ್ಟ್ರಗಳಿಂದ ನಿರಾಸಕ್ತಿ: ಸಿಂಗಾಪುರ್, ಅಮೆರಿಕ, ಇಂಗ್ಲೆಂಡ್​, ಸೈಪ್ರಸ್, ಅರಬ್​ ರಾಷ್ಟ್ರಗಳು ಸೇರಿದಂತೆ ಪ್ರಮುಖ ದೇಶಗಳಿಂದ ಎಫ್‌ಡಿಐ ಈಕ್ವಿಟಿ ಒಳಹರಿವು ಕಡಿಮೆಯಾಗಿದೆ. ಕಳೆದ ವರ್ಷ ಸೈಪ್ರಸ್​ ರಾಷ್ಟ್ರಗಳಿಂದ 215 ಮಿಲಿಯನ್​ ಡಾಲರ್​, ಅರಬ್​ ರಾಷ್ಟ್ರಗಳು 1.15 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದ್ದವು. ಆದರೆ, ಈ ವರ್ಷ ಕ್ರಮವಾಗಿ 215 ಮಿಲಿಯನ್​ ಡಾಲರ್​,796 ಮಿಲಿಯನ್​ ಡಾಲರ್​ಗೆ ಇಳಿಕೆ ಕಂಡಿದೆ.

ಯಾವ ಕ್ಷೇತ್ರದಲ್ಲಿ ಇಳಿಕೆ: ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್, ವ್ಯಾಪಾರ, ಸೇವೆಗಳು, ದೂರಸಂಪರ್ಕ, ಆಟೋಮೊಬೈಲ್, ಫಾರ್ಮಾ ಮತ್ತು ರಾಸಾಯನಿಕ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕುಸಿತವಾಗಿದೆ. ನಿರ್ಮಾಣ ಚಟುವಟಿಕೆಗಳು, ಅಭಿವೃದ್ಧಿ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಮಾರಿಷಸ್, ನೆದರ್ಲ್ಯಾಂಡ್ಸ್, ಜಪಾನ್ ಮತ್ತು ಜರ್ಮನಿ ದೇಶಗಳು ಭಾರತದಲ್ಲಿ ಹೂಡಿಕೆ ಮಾಡುವ ಪ್ರಮಾಣ ಏರಿಕೆ ಕಂಡಿದೆ.

ಇನ್ನೂ, ರಾಜ್ಯವಾರು ಹೂಡಿಕೆಯಲ್ಲಿ ಮಹಾರಾಷ್ಟ್ರ ಈ ಅವಧಿಯಲ್ಲಿ 12.1 ಬಿಲಿಯನ್​ ಡಾಲರ್​ ಹೂಡಿಕೆ ಕಾಣುವ ಮೂಲಕ ಅತಿ ಹೆಚ್ಚು ಪ್ರಮಾಣ ದಾಖಲಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 10.76 ಬಿಲಿಯನ್ ಡಾಲರ್​ನಷ್ಟು ಮಾತ್ರ ಹೂಡಿಕೆ ಕಂಡಿತ್ತು.

ಕರ್ನಾಟಕದಲ್ಲಿ ಸಾಗರೋತ್ತರ ಬಂಡವಾಳದ ಒಳಹರಿವು ಕುಸಿದಿದೆ. ಈ ವರ್ಷದ ಏಪ್ರಿಲ್-ಡಿಸೆಂಬರ್‌ನಲ್ಲಿ 3.6 ಬಿಲಿಯನ್​ ಡಾಲರ್​ ಹೂಡಿಕೆಯಷ್ಟೇ ಆಗಿದೆ. ಕಳೆದ ವರ್ಷ ಇದು 8.77 ಬಿಲಿಯನ್​ ಡಾಲರ್​ನಷ್ಟಿತ್ತು. ಇದರೊಂದಿಗೆ ದೆಹಲಿ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೂಡ ಹಿನ್ನಡೆ ಅನುಭವಿಸಿವೆ. ಆದರೆ, ಗುಜರಾತ್, ತೆಲಂಗಾಣ ಮತ್ತು ಜಾರ್ಖಂಡ್‌ನಲ್ಲಿ ಸಕಾರಾತ್ಮಕ ಹೂಡಿಕೆ ದಾಖಲಿಸಿವೆ.

ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ.100 ರಷ್ಟು ಎಫ್‌ಡಿಐ ಹೂಡಿಕೆಗೆ ಕೇಂದ್ರ ಸರ್ಕಾರದ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.