ETV Bharat / business

ಮತ್ತೆ ವಿಶ್ವದ ನಂಬರ್​ ಒನ್ ಪಟ್ಟಕ್ಕೇರಿದ ಎಲೋನ್ ಮಸ್ಕ್: ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ! - Musk World Richest Person Again

author img

By ETV Bharat Karnataka Team

Published : Jun 20, 2024, 8:23 AM IST

Updated : Jun 20, 2024, 9:01 AM IST

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಅಲಂಕರಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ.

elon-musk-is-the-worlds-richest-person-again-according-to-bloomberg-billionaires-index
ಮತ್ತೆ ವಿಶ್ವದ ನಂಬರ್​ ಒನ್​ ಪಟ್ಟಕ್ಕೇರಿದ ಎಲೋನ್ ಮಸ್ಕ್: ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ (Elon Musk and mukesh ambani (Getty Images))

ಹೈದರಾಬಾದ್​: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ವರದಿಯ ಪ್ರಕಾರ, ಎಲೋನ್ ಮಸ್ಕ್ 208 ಬಿಲಿಯನ್ ಡಾಲರ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 205 ಬಿಲಿಯನ್ ಡಾಲರ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಬರ್ನಾರ್ಡ್ ಅರ್ನಾಲ್ಡ್ 199 ಬಿಲಿಯನ್ ಡಾಲರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ವಾಸ್ತವವಾಗಿ, ಈ ಮೂವರ ನಡುವೆ ಬಹಳ ಸಮಯದಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದಾಗ್ಯೂ, ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಮಸ್ಕ್ ಅವರ ಸಂಪತ್ತು ಅಗಾಧವಾಗಿ ಹೆಚ್ಚಾಗಿದೆ. ಇದರೊಂದಿಗೆ ಜೆಫ್ ಬೆಜೋಸ್ ಅವರನ್ನು ಹಿಂದಕ್ಕೆ ತಳ್ಳಿ ಮೊದಲ ಸ್ಥಾನವನ್ನು ಮರಳಿ ಪಡೆದುಕೊಳ್ಳುವಲ್ಲಿ ಎಲೋನ್​​​ ಯಶಸ್ವಿಯಾಗಿದ್ದಾರೆ. ಟೆಸ್ಲಾದ ಇತ್ತೀಚಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಹೂಡಿಕೆದಾರರು ಎಲೋನ್ ಮಸ್ಕ್‌ಗೆ $56 ಬಿಲಿಯನ್ ವೇತನ ಪ್ಯಾಕೇಜ್ ನೀಡಲು ಒಪ್ಪಿಕೊಂಡಿದ್ದರು. ಇದರೊಂದಿಗೆ ಅವರ ಕಂಪನಿಯ ಷೇರುಗಳು ಭಾರಿ ಲಾಭ ಗಳಿಸಿದ್ದವು.

ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ: ಬ್ಲೂಮ್‌ಬರ್ಗ್ ಇಂಡೆಕ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್​ನ ಅಧ್ಯಕ್ಷ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಮುಖೇಶ್ ಅಂಬಾನಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮುಖೇಶ್ ಅಂಬಾನಿ 113 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 13 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ್ ಅದಾನಿ 108 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 14ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಹಿಂದೆ 12ನೇ ಸ್ಥಾನದಲ್ಲಿದ್ದ ಮುಖೇಶ್ ಅಂಬಾನಿ ಇದೀಗ 13ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅದಾನಿ 11ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕ್ರಮ

ಸಂಖ್ಯೆ

ಹೆಸರುಸಂಪತ್ತು( ಡಾಲರ್)ಉದ್ಯಮ
1 ಎಲೋನ್ ಮಸ್ಕ್208 ಬಿಲಿಯನ್ತಂತ್ರಜ್ಞಾನ
2ಜೆಫ್ ಬೆಜೋಸ್205 ಬಿಲಿಯನ್ ತಂತ್ರಜ್ಞಾನ
3ಬರ್ನಾರ್ಡ್ ಅರ್ನಾಲ್ಡ್199 ಬಿಲಿಯನ್ಗ್ರಾಹಕ ವ್ಯವಹಾರ
4ಮಾರ್ಕ್ ಜುಕರ್‌ಬರ್ಗ್177 ಬಿಲಿಯನ್ ತಂತ್ರಜ್ಞಾನ
5ಬಿಲ್ ಗೇಟ್ಸ್ 157 ಬಿಲಿಯನ್ತಂತ್ರಜ್ಞಾನ
6ಲ್ಯಾರಿ ಎಲಿಸನ್156 ಬಿಲಿಯನ್ತಂತ್ರಜ್ಞಾನ
7ಲ್ಯಾರಿ ಪುಟ156 ಬಿಲಿಯನ್ತಂತ್ರಜ್ಞಾನ
8ಸ್ಟೀವ್ ಬಾಲ್ಮರ್154 ಬಿಲಿಯನ್ತಂತ್ರಜ್ಞಾನ
9ಸೆರ್ಗೆ ಬ್ರಿನ್ 147 ಬಿಲಿಯನ್ ತಂತ್ರಜ್ಞಾನ
10ವಾರೆನ್ ಬಫೆಟ್ 135 ಬಿಲಿಯನ್ ಹೂಡಿಕೆ/ಇತರ
11ಮೈಕೆಲ್ ಡೆಲ್ 122 ಬಿಲಿಯನ್ ತಂತ್ರಜ್ಞಾನ
12ಜಾನ್ಸನ್ ಹುವಾಂಗ್119 ಬಿಲಿಯನ್ತಂತ್ರಜ್ಞಾನ
13ಮುಖೇಶ್ ಅಂಬಾನಿ113 ಬಿಲಿಯನ್ ಕೈಗಾರಿಕೆ
14ಗೌತಮ್ ಅದಾನಿ108 ಬಿಲಿಯನ್ ಕೈಗಾರಿಕೆ
15ಅಮಾನ್ಸಿಯೊ ಒರ್ಟೆಗಾ 98.8 ಬಿಲಿಯನ್ರಿಟೈಲ್​​

ಇದನ್ನು ಓದಿ: ಆಗಸಕ್ಕೆ ಏಣಿ ಇಡುವ ಕಾಲ ಬಂತು ಹತ್ತಿರ, ಬಾಹ್ಯಾಕಾಶ ಪ್ರವಾಸ ಇನ್ನು ಸುಲಭ! - Space Elevator

Last Updated : Jun 20, 2024, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.