ETV Bharat / business

ಇನ್ನೂ 20 ವರ್ಷ ಕಲ್ಲಿದ್ದಲಿನ ಅವಲಂಬನೆ ಕಡಿಮೆ ಮಾಡಲಾಗದು: ಆರ್ಥಿಕ ಸಮೀಕ್ಷೆ ವರದಿ - Economic Survey

ಭಾರತವು ಮುಂದಿನ 20 ವರ್ಷಗಳವರೆಗೆ ಕಲ್ಲಿದ್ದಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗದು ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದೆ.

ಕಲ್ಲಿದ್ದಲು (ಸಾಂದರ್ಭಿಕ ಚಿತ್ರ)
ಕಲ್ಲಿದ್ದಲು (ಸಾಂದರ್ಭಿಕ ಚಿತ್ರ) (IANS)
author img

By PTI

Published : Jul 22, 2024, 5:08 PM IST

ನವದೆಹಲಿ: ಮುಂದಿನ ಎರಡು ದಶಕಗಳವರೆಗೆ ಕಲ್ಲಿದ್ದಲು ಭಾರತೀಯ ಇಂಧನ ವ್ಯವಸ್ಥೆಯ ಬೆನ್ನೆಲುಬಾಗಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಆರ್ಥಿಕ ಸಮೀಕ್ಷೆ ಸೋಮವಾರ ತಿಳಿಸಿದೆ. ಕಲ್ಲಿದ್ದಲು ಬಳಕೆಯನ್ನು ಕಡಿಮೆ ಮಾಡುವುದು ಶುದ್ಧ ಇಂಧನ ಮತ್ತು ಬ್ಯಾಟರಿಗಳ ತಯಾರಿಕೆಗೆ ಬೇಕಾಗುವ ಪ್ರಮುಖ ಖನಿಜಗಳ ಆಮದನ್ನು ಆವಲಂಬಿಸಿದೆ ಎಂದು ಅದು ಹೇಳಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ 2023-24ರ ಆರ್ಥಿಕ ಸಮೀಕ್ಷೆಯು, ಕಲ್ಲಿದ್ದಲು ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಇಂಗಾಲದ ಡೈ ಆಕ್ಸೈಡ್​ ಅನ್ನು ವಾತಾವರಣದಿಂದ ಕಡಿಮೆ ಮಾಡುವ ಮತ್ತು ಇಂಗಾಲವನ್ನು ಸೆರೆಹಿಡಿಯುವ ಹಾಗೂ ಅದನ್ನು ಸಂಗ್ರಹಿಸುವ ತಂತ್ರಜ್ಞಾನಗಳನ್ನು ಅನ್ವೇಷಿಸುವುದು ಅಗತ್ಯವಾಗಿದೆ ಎಂದು ತಿಳಿಸಿದೆ.

ದೇಶೀಯವಾಗಿ ಲಭ್ಯವಿರುವ ಖನಿಜ ಸಂಪನ್ಮೂಲಗಳ ಆಧಾರದ ಮೇಲೆ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ದೇಶವು ಹೂಡಿಕೆ ಮಾಡದ ಹೊರತು, ಕಲ್ಲಿದ್ದಲಿನ ಬಳಕೆ ಕಡಿಮೆ ಮಾಡುವಿಕೆಯು ಮರುಬಳಕೆ ಇಂಧನ ಮತ್ತು ಬ್ಯಾಟರಿಗಳಿಗೆ ಬೇಕಾಗುವ ಪ್ರಮುಖ ಖನಿಜಗಳ ಆಮದಿನ ಮೇಲೆ ಅವಲಂಬಿತವಾಗಿದೆ ಎಂದು ಅದು ವಿವರಿಸಿದೆ.

ಭಾರತದಲ್ಲಿ ಅನಿಲೀಕರಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಕಲ್ಲಿದ್ದಲು ವಲಯವನ್ನು ಪರಿವರ್ತಿಸಬಹುದು ಮತ್ತು ನೈಸರ್ಗಿಕ ಅನಿಲ, ಮಿಥೇನಾಲ್ ಮತ್ತು ಅಮೋನಿಯಾ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಅಲ್ಲದೇ ಇದರಿಂದ ಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು ಎಂದು ಅದು ಹೇಳಿದೆ. ಒಟ್ಟು ವಿದ್ಯುತ್ ಉತ್ಪಾದನೆಯ ಶೇಕಡಾ 70 ರಷ್ಟನ್ನು ಹೊಂದಿರುವ ಕಲ್ಲಿದ್ದಲು, ಉಕ್ಕು, ಸ್ಪಾಂಜ್ ಕಬ್ಬಿಣ, ಸಿಮೆಂಟ್ ಮತ್ತು ಕಾಗದದಂತಹ ವಿವಿಧ ಕೈಗಾರಿಕೆಗಳಲ್ಲಿ ಪ್ರಮುಖ ಇಂಧನ ಮೂಲವಾಗಿದೆ.

ಕೇಂದ್ರವು ಕಲ್ಲಿದ್ದಲು ಅನಿಲೀಕರಣ ಮಿಷನ್ ಸೇರಿದಂತೆ ಹಲವಾರು ಶುದ್ಧ ಕಲ್ಲಿದ್ದಲು ಉಪಕ್ರಮಗಳನ್ನು ಪ್ರಾರಂಭಿಸಿದೆ. ಮೇಲ್ಮೈ ಕಲ್ಲಿದ್ದಲು, ಲಿಗ್ನೈಟ್ ಅನಿಲೀಕರಣ ಯೋಜನೆಗಳ ಮೂಲಕ 2030 ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಿಸುವ ಗುರಿಯನ್ನು ದೇಶ ಹೊಂದಿದೆ.

ಕಲ್ಲಿದ್ದಲು ಗಣಿಗಳಿಂದ ಮೀಥೇನ್ ಅನಿಲದ ಗಣಿಗಾರಿಕೆ, ಕಲ್ಲಿದ್ದಲಿಗೆ ಬದಲು ಹೈಡ್ರೋಜನ್ ಬಳಸುವುದು, ಇಂಗಾಲ ಸೆರೆಹಿಡಿಯುವುದು ಮತ್ತು ಸಂಗ್ರಹಣೆ ಮತ್ತು ತೊಳೆಯುವ ಯಂತ್ರಗಳ ಮೂಲಕ ಮಾಲಿನ್ಯದ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸಬಹುದು. ಭಾರತದ ಒಟ್ಟಾರೆ ವಾಣಿಜ್ಯ ಇಂಧನದಲ್ಲಿ ಕಲ್ಲಿದ್ದಲಿನ ಪ್ರಮಾಣ ಶೇಕಡಾ 55ರಷ್ಟಿದೆ ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಒಟ್ಟು ವಿದ್ಯುತ್ ಉತ್ಪಾದನೆಯ ಶೇಕಡಾ 70 ರಷ್ಟಿದೆ.

ಇದನ್ನೂ ಓದಿ : 2024-25ರ ಆರ್ಥಿಕ ಸಮೀಕ್ಷೆ ಮಂಡನೆ: ಶೇ 6.5ರಿಂದ 7ರಷ್ಟು ಜಿಡಿಪಿ ಬೆಳವಣಿಗೆ ಅಂದಾಜು - Economic Survey

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.