ETV Bharat / business

ದೇಶದ ಮೊದಲ ಆಲ್ ಇನ್ ಒನ್ ಪಾವತಿ ಸಾಧನ ಅನಾವರಣಗೊಳಿಸಿದ ಭಾರತ್​ಪೇ: ಇದರ ಉಪಯೋಗವೇನು? - BharatPe One

ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದಂತೆ ಪಿಒಎಸ್​, ಕ್ಯೂರ್​ಆರ್​ ಮತ್ತು ಸ್ಪೀಕರ್​ ಒಳಗೊಂಡ ಒಂದೇ ಸಾಧನವನ್ನು ಭಾರತ್​ಪೇ ಇಂದು ಅನಾವರಣಗೊಳಿಸಿದೆ.

BharatPe One
ಭಾರತ್​ಪೇ ಓನ್
author img

By ETV Bharat Karnataka Team

Published : Apr 23, 2024, 9:55 PM IST

ಹೈದರಾಬಾದ್: ಫಿನ್‌ಟೆಕ್​ ಉದ್ಯಮದಲ್ಲಿ ಭಾರತದ ಹೆಸರಾಂತ ಭಾರತ್​ಪೇ (BharatPe) ತನ್ನ ಬಳಕೆದಾರರಿಗೆ ಸರಳ ಮತ್ತು ಸುಲಭ ಸೇವೆ ಒದಗಿಸಲು ಸಜ್ಜಾಗಿದೆ. ಪಿಒಎಸ್​ (Point of Sale), ಕ್ಯೂರ್​ಆರ್​ (QR) ಮತ್ತು ಸ್ಪೀಕರ್​ ಒಳಗೊಂಡ ಒಂದೇ ಸಾಧನ​ವನ್ನು ಬಿಡುಗಡೆಗೊಳಿಸಿದೆ. ಇದು ಭಾರತದ ಮೊದಲ ಆಲ್​ ಇನ್​ ಒನ್​ ಪಾವತಿ ಕ್ರಮವಾಗಿದೆ. ಭಾರತ್​ಪೇ ಓನ್​ (BharatPe One) ಹೆಸರಲ್ಲಿ ಈ ಸೇವೆ ಪ್ರಾರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ನವೀನ ಉತ್ಪನ್ನವು ವ್ಯಾಪಾರಿಗಳಿಗೆ ವಹಿವಾಟುಗಳನ್ನು ಸುವ್ಯವಸ್ಥಿತಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಡೈನಾಮಿಕ್ ಮತ್ತು ಸ್ಟ್ಯಾಟಿಕ್ ಕ್ಯೂಆರ್ ಕೋಡ್, ಟ್ಯಾಪ್ ಮತ್ತು ಪೇ ಮತ್ತು ಸಾಂಪ್ರದಾಯಿಕ ಕಾರ್ಡ್ ಪಾವತಿ ಆಯ್ಕೆಗಳು ಸೇರಿದಂತೆ ವ್ಯಾಪಕವಾದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಾದ್ಯಂತ ಬಹುಮುಖ ಪಾವತಿಗಳ ಸ್ವೀಕರಿಸುವ ಆಯ್ಕೆಗಳನ್ನು ಭಾರತ್​ಪೇ ಓನ್​ ಒದಗಿಸುತ್ತದೆ.

ಆರಂಭದಲ್ಲಿ 100ಕ್ಕೂ ನಗರಗಳಲ್ಲಿ ಲಭ್ಯ: ಮೊದಲ ಹಂತದಲ್ಲಿ 100ಕ್ಕೂ ನಗರಗಳಲ್ಲಿ ಈ ಸಾಧನದ ಉತ್ಪನ್ನಗಳು ಲಭ್ಯವಾಗಲಿವೆ. ಮುಂದಿನ 6 ತಿಂಗಳ ಅವಧಿಯಲ್ಲಿ 450ಕ್ಕೂ ನಗರಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಒಂದೇ ವೆಚ್ಚದಲ್ಲಿ ಪರಿಣಾಮಕಾರಿ ಸಾಧನವಾಗಿ ಅನೇಕ ಕಾರ್ಯಗಳನ್ನು ಸಂಯೋಜಿಸುವ ಮೂಲಕ ವಿವಿಧ ವಲಯಗಳಾದ್ಯಂತ ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ನಾವು ಸಮಗ್ರ ಪರಿಹಾರವನ್ನು ಒದಗಿಸುತ್ತಿದ್ದೇವೆ ಎಂದು ಭಾರತ್‌ಪೇ ಸಿಇಒ ನಳಿನ್ ನೇಗಿ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಕಂಪನಿಯ ಹೇಳಿಕೆ ಪ್ರಕಾರ, ಈ ಸಾಧನವು ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಿಗೂ ಸುಗಮ ಮತ್ತು ಸಮಸ್ಯೆರಹಿತ ಸೇವೆ ನೀಡುತ್ತದೆ. ಇದು ಹೈಡೆಫಿನಿಷನ್ ಟಚ್‌ಸ್ಕ್ರೀನ್ ಡಿಸ್​ಪ್ಲೇ, 4ಜಿ ಮತ್ತು ವೈ-ಫೈ ಸಂಪರ್ಕ ಹೊಂದಿರುತ್ತದೆ. ಜೊತೆಗೆ ಇತ್ತೀಚಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಿಂದಲೂ ಚಾಲಿತವಾಗಲಿದೆ. ಇದು ಸುಧಾರಿತ ಕಾರ್ಯಕ್ಷಮತೆ ಮತ್ತು ಸುರಕ್ಷತೆ ನೀಡುತ್ತದೆ.

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಗೇಮ್ ಚೇಂಜರ್: ನಾವು ಪ್ರಾಯೋಗಿಕ ಹಂತದಲ್ಲಿ ನಮ್ಮ ವ್ಯಾಪಾರಿಗಳಿಂದ ಹಲವು ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಇದು ಡಿಜಿಟಲ್ ಪಾವತಿಗಳ ಪರಿಸರ ವ್ಯವಸ್ಥೆಗೆ ಮತ್ತೊಂದು ಗೇಮ್ ಚೇಂಜರ್ ಆಗಲಿದೆ ಎಂಬುವುದು ನಮ್ಮ ಲೆಕ್ಕಾಚಾರ. ಫಿನ್‌ಟೆಕ್ ಉದ್ಯಮದಲ್ಲಿ ಟ್ರಯಲ್‌ಬ್ಲೇಜರ್ ಆಗಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಭಾರತ್‌ಪೇನ ಪಿಒಎಸ್ ಸಲಹೆಗಾರ, ಮುಖ್ಯ ವ್ಯಾಪಾರ ಅಧಿಕಾರಿ ರಿಜಿಶ್ ರಾಘವನ್ ಹೇಳಿದ್ದಾರೆ.

ಇದನ್ನೂ ಓದಿ: ತೆರಿಗೆ ಪೂರ್ವ ಲಾಭದಲ್ಲಿ 1 ಲಕ್ಷ ಕೋಟಿ ಮಿತಿ ದಾಟಿದ ರಿಲಯನ್ಸ್​​​​: ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.