ETV Bharat / business

ವಿಕಸಿತ್ ಭಾರತ ನಿರ್ಮಾಣಕ್ಕೆ ಬೆಂಗಳೂರು ತೆರಿಗೆದಾರರು ಬಲ ನೀಡುತ್ತಿದ್ದಾರೆ: ಸಚಿವೆ ಸೀತಾರಾಮನ್ - ವಿಕಸಿತ್ ಭಾರತ

ಅಭಿವೃದ್ಧಿಹೊಂದಿದ ಭಾರತದ ನಿರ್ಮಾಣದಲ್ಲಿ ಬೆಂಗಳೂರಿಗರ ಕೊಡುಗೆ ಅಪಾರವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Bengaluru tax payers are giving us buoyancy, says Nirmala Sitharaman

author img

By ETV Bharat Karnataka Team

Published : Feb 28, 2024, 7:41 PM IST

ಬೆಂಗಳೂರು: ದೃಢವಾದ ಮತ್ತು ಅಭಿವೃದ್ಧಿ ಹೊಂದಿದ (ವಿಕಸಿತ್ ಭಾರತ್) ನಿರ್ಮಾಣದಲ್ಲಿ ಬೆಂಗಳೂರು ತೆರಿಗೆದಾರರ ಕೊಡುಗೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಶ್ಲಾಘಿಸಿದ್ದಾರೆ. ಇಡೀ ತೆರಿಗೆ ಇಲಾಖೆ ತನ್ನ ಸಂಪೂರ್ಣ ರಾಷ್ಟ್ರೀಯ ಮುಖರಹಿತ ಆದಾಯ ತೆರಿಗೆ ಮೌಲ್ಯಮಾಪನ ಯೋಜನೆ (national faceless income tax assessment scheme) ಯನ್ನು ಕರ್ನಾಟಕದ ರಾಜಧಾನಿಯಿಂದಲೇ ನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ನಿರ್ಮಿಸಲಾಗುತ್ತಿರುವ "ಹೊಂಗಿರಣ" ವಸತಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನ ತೆರಿಗೆ ಪಾವತಿದಾರರು ನಮಗೆ ಸಂಪೂರ್ಣವಾಗಿ ಉತ್ತೇಜನ ನೀಡುತ್ತಿದ್ದಾರೆ ಎಂದರು ಮತ್ತು ದೃಢವಾದ ಹಾಗೂ 'ವಿಕಸಿತ್​ ಭಾರತ್' ನಿರ್ಮಾಣಕ್ಕೆ ಕೈಜೋಡಿಸಿರುವುದಕ್ಕೆ ಪ್ರದೇಶದ ಎಲ್ಲಾ ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆದಾರರಿಗೆ ಧನ್ಯವಾದ ಅರ್ಪಿಸಿದರು.

"ನಿಮ್ಮ ಕೊಡುಗೆ ಅಪಾರ. ಇದರಲ್ಲಿ ಎಂದಿಗೂ ಇಳಿಕೆಯಾಗಿಲ್ಲ. ಆದ್ದರಿಂದ ಆ ವೇಗವನ್ನು ಹೆಚ್ಚಿಸಿದ್ದಕ್ಕಾಗಿ ಬೆಂಗಳೂರಿಗೆ ತುಂಬಾ ಧನ್ಯವಾದಗಳು" ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಹೂಡಿಕೆಗಳ ಬಗ್ಗೆ ಸೀತಾರಾಮನ್ ಒತ್ತಿ ಹೇಳಿದರು.

ತೆರಿಗೆದಾರರಿಗೆ ಆಗುತ್ತಿದ್ದ ಕಿರುಕುಳ ತಡೆಗಟ್ಟಲು ಹಾಗೂ ಆದಾಯ ತೆರಿಗೆ ಮೌಲ್ಯಮಾಪನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸರ್ಕಾರವು ಸಂಪೂರ್ಣ ಮುಖರಹಿತ ವ್ಯವಸ್ಥೆಯನ್ನು ತಂದಿದೆ. ಹೀಗಾಗಿ ತೆರಿಗೆದಾರರು ಅಧಿಕಾರಿಯ ಎದುರಿಗೆ ಹೋಗಿ ಕುಳಿತು ಮಾತನಾಡಬೇಕಾದ ಪ್ರಸಂಗ ಇನ್ನು ಮುಂದೆ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.

ಇಲಾಖೆಯ ಸಂಪೂರ್ಣ ಕೇಂದ್ರೀಯ ಸಂಸ್ಕರಣಾ ಕೇಂದ್ರವಾಗಿರುವ, ಇಡೀ ದೇಶದ ತೆರಿಗೆ ವ್ಯವಸ್ಥೆಯನ್ನು ನಿರ್ವಹಿಸುವ ಡಿಜಿಟಲ್ ಸಂಸ್ಕರಣಾ ಘಟಕ ಬೆಂಗಳೂರಿನಲ್ಲಿದೆ. ಇದು ಇಡೀ ದೇಶದ ಆದಾಯ ತೆರಿಗೆ ವ್ಯವಸ್ಥೆಯನ್ನು ಮುನ್ನಡೆಸುತ್ತದೆ ಎಂದು ಅವರು ತಿಳಿಸಿದರು.

"ಕರ್ನಾಟಕದ ಹಣ ಎಲ್ಲಿಯೂ ಹೋಗುವುದಿಲ್ಲ. ಅದು ಅದೇ ರಾಜ್ಯಕ್ಕೆ ಹಿಂತಿರುಗಿ ಬರುತ್ತದೆ ಮತ್ತು ಬೇರೆ ರೀತಿಯಲ್ಲಿ ಬರುತ್ತದೆ. ಹೌದು.. ಅದು ರಸ್ತೆಗಳ ನಿರ್ಮಾಣಕ್ಕಾಗಿ ಬರುತ್ತದೆ, ಅದು ಸಂಪರ್ಕಕ್ಕಾಗಿ ಹಿಂತಿರುಗುತ್ತದೆ, ಅದು ಮೆಟ್ರೋ ನಿರ್ಮಾಣಕ್ಕಾಗಿ ಹಿಂತಿರುಗಿ ಬರುತ್ತದೆ, ಅದು ರೈಲಿಗಾಗಿ ಹಿಂತಿರುಗುತ್ತದೆ, ಉಪನಗರ ರೈಲ್ವೆ ವ್ಯವಸ್ಥೆಗಾಗಿ ಬರುತ್ತದೆ, ಇದು ಮಂಗಳೂರು ಬಂದರು ನಿರ್ಮಾಣಕ್ಕಾಗಿ ಬರುತ್ತದೆ, 'ಕಲ್ಯಾಣ' ಕರ್ನಾಟಕಕ್ಕೆ (ಪ್ರದೇಶ) ಹಿಂತಿರುಗುತ್ತದೆ ಮತ್ತು ಇತರ ಅನೇಕ ಯೊಜನೆಗಳಿಗಾಗಿ ಹಿಂತಿರುಗಿ ಬರುತ್ತದೆ" ಎಂದು ಸೀತಾರಾಮನ್ ಹೇಳಿದರು.

"ಆದರೆ ನಿರ್ದಿಷ್ಟವಾಗಿ ತೆರಿಗೆ ಇಲಾಖೆಯ ಸಂಪೂರ್ಣ ರಾಷ್ಟ್ರೀಯ ಮುಖರಹಿತ ಯೋಜನೆ ಬೆಂಗಳೂರಿನಿಂದ ನಿರ್ವಹಿಸಲ್ಪಡುತ್ತಿದೆ ಎಂಬ ಅಂಶವನ್ನು ನಾನು ಎತ್ತಿ ತೋರಿಸಲು ಬಯಸುತ್ತೇನೆ ಮತ್ತು ಇದಕ್ಕಾಗಿ ನಾವು ಮಾಡಿರುವ ಅಗಾಧ ಹೂಡಿಕೆಯ ಪ್ರಮಾಣವನ್ನು ನೀವು ಊಹಿಸಬಹುದು... ಇದನ್ನು ನಡೆಸುವವರು ಬೆಂಗಳೂರಿಗರು ಹಾಗೂ ಅವರು ಇಡೀ ದೇಶಕ್ಕಾಗಿ ಕೊಡುಗೆ ನೀಡುತ್ತಿರುವುದು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ" ಎಂದು ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಸಚಿವೆ ಸೀತಾರಾಮನ್ ನುಡಿದರು.

ಇದನ್ನೂ ಓದಿ : 10 ವರ್ಷಗಳಲ್ಲಿ $2 ಟ್ರಿಲಿಯನ್​ ತಲುಪಲಿದೆ ಭಾರತದ ರಿಟೇಲ್ ಮಾರುಕಟ್ಟೆ: ಸಂಶೋಧನಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.