ನವದೆಹಲಿ: ಕಳೆದ ಒಂದು ವಾರದ ಅವಧಿಯಲ್ಲಿ 26 ಭಾರತೀಯ ಸ್ಟಾರ್ಟ್ಅಪ್ಗಳು 239 ಮಿಲಿಯನ್ ಡಾಲರ್ಗೂ (23 ಕೋಟಿ ಡಾಲರ್) (ಸುಮಾರು 1990 ಕೋಟಿ ರೂಪಾಯಿ) ಅಧಿಕ ಫಂಡಿಂಗ್ ಮೊತ್ತವನ್ನು ಸಂಗ್ರಹಿಸಿದ್ದು, ಇದರಲ್ಲಿ 9 ಬೆಳವಣಿಗೆಯ ಹಂತದ ಡೀಲ್ಗಳು ಮತ್ತು 15 ಆರಂಭಿಕ ಹಂತದ ಡೀಲ್ಗಳು ಸೇರಿವೆ. ಆರಂಭಿಕ ಹಂತದ ಎರಡು ಸ್ಟಾರ್ಟ್ಅಪ್ಗಳು ತಾವು ಪಡೆದ ಫಂಡಿಂಗ್ ಮೊತ್ತವನ್ನು ಬಹಿರಂಗಪಡಿಸಿಲ್ಲ ಎಂದು ಎನ್ ಟ್ರಾಕರ್ ವರದಿ ಮಾಡಿದೆ.
ಮೇ 6-11ರ ವಾರದಲ್ಲಿ ಸುಮಾರು 24 ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್ಗಳು ಒಟ್ಟಾಗಿ ಸುಮಾರು 320 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದ್ದವು.
ಬೆಳವಣಿಗೆಯ ಹಂತದ ಒಪ್ಪಂದಗಳ ಪೈಕಿ ಏಳು ಸ್ಟಾರ್ಟ್ಅಪ್ಗಳು ಕಳೆದ ವಾರ ಸುಮಾರು 207.2 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿವೆ. ಮೈಕ್ರೋಫೈನಾನ್ಸ್ ಸಂಸ್ಥೆ ಅನ್ನಪೂರ್ಣ ಫೈನಾನ್ಸ್ 72 ಮಿಲಿಯನ್ ಡಾಲರ್ ಅತಿ ಹೆಚ್ಚು ಫಂಡಿಂಗ್ ಪಡೆದುಕೊಂಡಿದೆ. ಬ್ಯಾಟರಿ ಟೆಕ್ ಸ್ಟಾರ್ಟ್ಅಪ್ ಬ್ಯಾಟರಿ ಸ್ಮಾರ್ಟ್, ಆನ್ ಲೈನ್ ಚಾನೆಲ್ಗಳ ಮೂಲಕ ಶಿಕ್ಷಣ ಸಾಲ ನೀಡುವ ಪ್ರೊಪೆಲ್ಡ್ (Propelld) ಮತ್ತು ಆಂಬ್ಯುಲೆನ್ಸ್ ಸೇವಾ ಪೂರೈಕೆದಾರ ರೆಡ್ ನಂತರದ ಸ್ಥಾನಗಳಲ್ಲಿವೆ.
ಕೃಷಿ, ರಕ್ಷಣಾ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಬಳಸಲಾಗುವ ಡ್ರೋನ್ಗಳನ್ನು ತಯಾರಿಸುವ ದಕ್ಷ (Dhaksha) ಕ್ರಮವಾಗಿ $ 45 ಮಿಲಿಯನ್, $ 25 ಮಿಲಿಯನ್, $ 20 ಮಿಲಿಯನ್ ಮತ್ತು $ 18 ಮಿಲಿಯನ್ ಫಂಡಿಂಗ್ ಪಡೆದುಕೊಂಡಿದೆ.
ಇದಲ್ಲದೆ 15 ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ಕಳೆದ ವಾರ 32.5 ಮಿಲಿಯನ್ ಡಾಲರ್ ಮೌಲ್ಯದ ಫಂಡಿಂಗ್ ಪಡೆದುಕೊಂಡಿವೆ. ಎಂಡ್-ಟು-ಎಂಡ್ ಕೋಲ್ಡ್-ಚೈನ್ ಸೇವೆಗಳನ್ನು ಒದಗಿಸುವ ದೇಶೀಯ ಅಗ್ರಿಗೇಟರ್ ಸೆಲ್ಸಿಯಸ್ ಲಾಜಿಸ್ಟಿಕ್ಸ್ (Celcius Logistics) ಆರಂಭಿಕ ಹಂತದ ಸ್ಟಾರ್ಟ್ಅಪ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮೊಬಿಲಿಟಿ ಮತ್ತು ಎನರ್ಜಿ ಸೊಲ್ಯೂಷನ್ಸ್ ಸ್ಟಾರ್ಟ್ಅಪ್ ಮ್ಯಾಟೆಲ್, ದೃಢೀಕರಣ ಮತ್ತು ಪ್ರವೇಶ ನಿರ್ವಹಣಾ ಪ್ಲಾಟ್ ಫಾರ್ಮ್ ಒಟಿಪ್ಲೆಸ್ (OTPless), ಮಾರ್ಕೆಟಿಂಗ್ ಸಾಸ್ (ಸಾಫ್ಟ್ ವೇರ್-ಆಸ್-ಎ-ಸರ್ವೀಸ್) ಪ್ಲಾಟ್ಫಾರ್ಮ್ Highperformr ಡಾಟ್ ai ಮತ್ತು ಕ್ರೀಡಾ ಟೆಕ್ ಕಂಪನಿ ಸ್ತೂಪ ಸ್ಪೋರ್ಟ್ಸ್ ನಂತರದ ಸ್ಥಾನಗಳಲ್ಲಿವೆ.
ಆರಂಭಿಕ ಹಂತದ ಸ್ಟಾರ್ಟ್ಅಪ್ಗಳ ಪಟ್ಟಿಯಲ್ಲಿ ಡುರೊ ಗ್ರೀನ್ ಮತ್ತು ಟ್ರೆಜಿ ಕೂಡ ಸೇರಿವೆ. ಈ ಎರಡೂ ಕಂಪನಿಗಳು ತಾವು ಪಡೆದ ಫಂಡಿಂಗ್ ಮೊತ್ತವನ್ನು ಬಹಿರಂಗಪಡಿಸಿಲ್ಲ. ನಗರವಾರು ನೋಡುವುದಾದರೆ- ಬೆಂಗಳೂರು ಮೂಲದ ಸ್ಟಾರ್ಟ್ಅಪ್ಗಳು ಒಂಬತ್ತು ಡೀಲ್ಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ದೆಹಲಿ-ಎನ್ಸಿಆರ್, ಚೆನ್ನೈ, ಮುಂಬೈ, ಹೈದರಾಬಾದ್, ಅಹಮದಾಬಾದ್ ಮತ್ತು ಭುವನೇಶ್ವರ ನಂತರದ ಸ್ಥಾನಗಳಲ್ಲಿವೆ.
ಇದನ್ನೂ ಓದಿ : $644.15 ಶತಕೋಟಿಗೆ ತಲುಪಿದ ಭಾರತದ ವಿದೇಶಿ ವಿನಿಮಯ ಸಂಗ್ರಹ: $2.56 ಶತಕೋಟಿ ಹೆಚ್ಚಳ - INDIA FOREX RESERVES