Mobile blast in Himachal Pradesh: ಮೊಬೈಲ್ ಇಂದು ನಮ್ಮ ಜೀವನದ ಒಂದು ಭಾಗವಾಗಿದೆ. ಮಕ್ಕಳಿಂದ ಹಿಡಿದು ಹಿರಿಯವರೆಗೂ ದಿನವೂ ಮೊಬೈಲ್ನಲ್ಲೇ ಕಾಲ ಕಳೆಯುತ್ತಾರೆ. ಆನ್ಲೈನ್ ಪೇಮೆಂಟ್ ನಿಂದ ಹಿಡಿದು ಫೋಟೊಗ್ರಫಿ, ವಿಡಿಯೋಗ್ರಫಿವರೆಗೆ ಎಲ್ಲವನ್ನೂ ಮೊಬೈಲ್ ಮೂಲಕವೇ ಸುಲಭವಾಗಿ ಮಾಡಬಹುದು.
ಇನ್ನು ನಾವು ಯಾವುದಾದರೂ ಕೆಲಸದ ವೇಳೆ ಫೋನ್‌ನ ಬ್ಯಾಟರಿ ಕಡಿಮೆಯಾಯ್ತು ಎಂದರೆ ಸಾಕು ಚಡಪಡಿಕೆ ಅನುಭವಿಸಲು ಪ್ರಾರಂಭಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ತಕ್ಷಣ ಫೋನ್ ಚಾರ್ಜ್ಗಿಟ್ಟು ಬಳಸಲು ಪ್ರಾರಂಭಿಸುತ್ತೇವೆ. ಈ ಪ್ರಕ್ರಿಯೆ ನಮ್ಮ ಪ್ರಾಣಕ್ಕೆ ಕುತ್ತು ತರಬಹುದಾಗಿದೆ.
ಹೌದು, ಕೆಲ ದಿನಗಳ ಹಿಂದೆ ಚಂಬಾ ಜಿಲ್ಲೆಯ ಸಲೂನಿ ಉಪವಿಭಾಗದ ಬಿಚುಣಿ ಗ್ರಾಮದ 20 ವರ್ಷದ ಯುವತಿಯೊಬ್ಬಳು ತನ್ನ ಮೊಬೈಲ್ ಚಾರ್ಜ್ ಮಾಡುವಾಗ ಬಳಸುತ್ತಿದ್ದರು. ಇದೇ ವೇಳೆ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಆಕೆಗೆ ಮೈಗೆ ಆವರಿಸಿತ್ತು. ಕುಟುಂಬಸ್ಥರು ಹಾಗೋ ಹೀಗೋ ಆ ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರಲ್ಲಿ ಯುವತಿ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು.
ಅವಘಡ ನಂತರ ಮನೆಯವರು ಬಾಲಕಿಯನ್ನು ಚಂಬಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರುವುದನ್ನು ಕಂಡ ವೈದ್ಯರು ಪ್ರಾಥಮಿಕ ಚಿಕಿತ್ಸೆ ಬಳಿಕ ತಾಂಡಾ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ವಿಶಾಲ್ ಮಹಾಜನ್ ಮಾತನಾಡಿ, 'ಮೊಬೈಲ್ ಸ್ಫೋಟದಿಂದ ಸುಟ್ಟು ಕರಕಲಾದ ಬಾಲಕಿಯನ್ನು ಚಂಬಾ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಚಿಕಿತ್ಸೆ ಬಳಿಕ ಆಕೆಯ ಸ್ಥಿತಿ ಪರಿಗಣಿಸಿ ವೈದ್ಯಕೀಯ ಕಾಲೇಜು ತಾಂಡಾಕ್ಕೆ ರವಾನಿಸಲಾಗಿದೆ' ಎಂದು ತಿಳಿಸಿದ್ದರು.
ಸುಮಾರು 5 ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರವೂ ಯುವತಿ ಬದುಕುಳಿಯಲಿಲ್ಲ. ಅವಳು ಡಿಸೆಂಬರ್ 15 ರಂದು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಕಿರಣ್ ಶವವನ್ನು ಅಂತಿಮ ವಿಧಿವಿಧಾನಗಳಿಗಾಗಿ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಇನ್ನು ಸ್ಫೋಟಗೊಂಡ ಫೋನ್ ಯಾವ ಕಂಪನಿಯದು ಎಂಬ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ.
ದಯವಿಟ್ಟು ಗಮನಿಸಿ, ಚಾರ್ಜ್ ಆಗುವಾಗ ಮೊಬೈಲ್ ಬಳಸಬೇಡಿ: ಚಾರ್ಜ್ ಮಾಡುವಾಗ ಮೊಬೈಲ್ ಬಳಸುವುದು ಅಪಾಯಕಾರಿಯಾಗಿರುವುದು ಗಮನಾರ್ಹ. ಚಾರ್ಜ್ ಮಾಡುವಾಗ ಫೋನ್ ಬಳಸಿದರೆ ಬ್ಯಾಟರಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಘಟನೆಗಳು ಹಲವು ಬಾರಿ ಬೆಳಕಿಗೆ ಬಂದಿವೆ. ಚಾರ್ಜ್ ಮಾಡುವಾಗ ಫೋನ್ ಬಳಸುವುದರಿಂದ ಬ್ಯಾಟರಿ ಮತ್ತು ಫೋನ್ ಎರಡೂ ಬಿಸಿಯಾಗುತ್ತವೆ. ಇದರಿಂದಾಗಿ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ನೀವು ಇದರಿಂದ ದೂರವಿರುವುದು ಒಳ್ಳೆಯದು.
ಈ ವಿಷಯಗಳನ್ನು ನೆನಪಿನಲ್ಲಿಡಿ
- ಮೊಬೈಲ್ ಬ್ಯಾಟರಿ ಶೇ.20ರಷ್ಟು ಕ್ಕಿಂತ ಕಡಿಮೆ ಆಗುವ ಮೊದಲು ಫೋನ್ ಚಾರ್ಜಿಂಗ್ ಮಾಡಬೇಡಿ..
- ಚಾರ್ಜ್ ಮಾಡುವಾಗ ಮೊಬೈಲ್ ಬಿಸಿಯಾದ ಸ್ಥಳದಲ್ಲಿ ಇಡಬೇಡಿ.
- ಮೊಬೈಲ್ ಚಾರ್ಜಿಂಗ್ಗೆ ಇಟ್ಟು ಬಳಸದಿರುವು ಅಥವಾ ಅದರಿಂದ ನೀವು ದೂರವಿರುವುದು ಒಳ್ಳೆಯದು..
- ಸರಿಯಾದ ಚಾರ್ಜರ್ ಆಯ್ಕೆಮಾಡಿ ಮತ್ತು ಮೂಲ ಚಾರ್ಜರ್‌ನೊಂದಿಗೆ ಫೋನ್ ಅನ್ನು ಮಾತ್ರ ಚಾರ್ಜ್ ಮಾಡುವುದು ಸೂಕ್ತ.
ಓದಿ: ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಲಿರುವ ಸುನಿತಾ: ಸಾಂಟಾ ಹ್ಯಾಟ್ ಸೆಲ್ಫಿ ಹಂಚಿಕೊಂಡ ಗಗನಯಾತ್ರಿಗಳು!