ETV Bharat / bharat

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ: ಈ ದಿನದ ಮಹತ್ವವೇನು? - World Population Day - WORLD POPULATION DAY

ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸುವ ಹಿನ್ನೆಲೆಯಲ್ಲಿ, ಜನಸಂಖ್ಯಾ ದಿನಾಚರಣೆಯ ಮಾಹಿತಿ ಇಲ್ಲಿದೆ.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ
ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ (ETV BHARAT)
author img

By ETV Bharat Karnataka Team

Published : Jul 11, 2024, 4:27 AM IST

ಜನಸಂಖ್ಯಾ ಸ್ಪೋಟದಿಂದಾಗಿ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮಾರ್ಗವಾಗಿ ಜಗತ್ತಿನಲ್ಲಿ ಪ್ರತಿವರ್ಷ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ. ಜನಸಂಖ್ಯಾ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ತುರ್ತು ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಜನಸಂಖ್ಯಾ ದಿನದ ಇತಿಹಾಸ: ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯು 1989 ರಲ್ಲಿ ಆಚರಿಸಲು ಆರಂಭಿಸಿತು. ಜುಲೈ 1987 ರಲ್ಲಿ ವಿಶ್ವದ ಜನಸಂಖ್ಯೆ ಐದು ಬಿಲಿಯನ್ ದಾಟಿದ ಸಂದರ್ಭದ ಕುರುಹಾಗಿ ಈ ವಿಶೇಷ ದಿನದ ಆಚರಣೆ ಪ್ರಾರಂಭಿಸಲಾಯಿತು. ಡಾ. ಕೆ.ಸಿ. ಝಕಾರಿಯಾ ಅವರು ಈ ದಿನದ ಆಚರಣೆಯ ಸಲಹೆ ನೀಡಿದ್ದರು. ವಿಶ್ವ ಜನಸಂಖ್ಯಾ ಸ್ಪೋಟದ ಸಮಸ್ಯೆಯು ಬಡತನ, ತಾಯಿಯ ಆರೋಗ್ಯ, ಕೆಟ್ಟ ಆರ್ಥಿಕ ಸ್ಥಿತಿಗಳು ಮತ್ತು ಇನ್ನೂ ಅನೇಕ ಸಮಸ್ಯೆಗಳನ್ನು ಒಳಗೊಂಡಿದೆ.

ಎಷ್ಟಿದೆ ವಿಶ್ವದ ಜನಸಂಖ್ಯೆ: 20 ನೇ ಶತಮಾನದ ಮಧ್ಯಭಾಗದಿಂದ ವಿಶ್ವದ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ವಿಶ್ವಸಂಸ್ಥೆಯ ಪ್ರಕಾರ, 2022 ರ ನವೆಂಬರ್ ಮಧ್ಯದ ವೇಳೆಗೆ ಭೂಮಿಯ ಮೇಲೆ 8 ಬಿಲಿಯನ್ ಜನರಿದ್ದರು. ಈ ಪ್ರಮಾಣ 1950 ರಲ್ಲಿ 2.5 ಬಿಲಿಯನ್ ಆಗಿತ್ತು. ಈ ಸಂಖ್ಯೆ 2010 ರಿಂದ 1 ಬಿಲಿಯನ್ ಮತ್ತು 1998 ರಿಂದ 2 ಬಿಲಿಯನ್ ಹೆಚ್ಚಾಗಿದೆ. ಮುಂದಿನ 30 ವರ್ಷಗಳಲ್ಲಿ, ಭೂಮಿಯ ಜನಸಂಖ್ಯೆ 2 ಬಿಲಿಯನ್​ಗೆ ಹೆಚ್ಚಾಗಲಿದೆ. ವಿಶ್ವದ ಜನಸಂಖ್ಯೆಯು 2050 ರಲ್ಲಿ 9.7 ಬಿಲಿಯನ್ ಹಾಗೂ 2080 ರ ದಶಕದ ಮಧ್ಯದಲ್ಲಿ 10.4 ಬಿಲಿಯನ್ ಗೆ ತಲುಪುತ್ತದೆ ಎಂದು ಊಹಿಸಲಾಗಿದೆ.

ಚೀನಾ ಮತ್ತು ಭಾರತಗಳು ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾಗಿವೆ. ಇವು ಕ್ರಮವಾಗಿ 1 ಬಿಲಿಯನ್ ಜನಸಂಖ್ಯೆ ಹೊಂದಿದ್ದು, ಎರಡೂ ರಾಷ್ಟ್ರಗಳ ಒಟ್ಟಾರೆ ಜನಸಂಖ್ಯೆ ಜಾಗತಿಕ ಜನಸಂಖ್ಯೆಯ ಸುಮಾರು ಶೇ 18 ರಷ್ಟಿದೆ.

ಆರ್ಥಿಕ ಅಭಿವೃದ್ಧಿಯ ಮೇಲೆ ಜನಸಂಖ್ಯಾ ಬೆಳವಣಿಗೆಯ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು:

ಧನಾತ್ಮಕ ಪರಿಣಾಮ:

  • ಉದ್ಯಮಶೀಲತೆಯಲ್ಲಿ ಹೆಚ್ಚುತ್ತಿರುವ ಆಸಕ್ತಿ.
  • ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯ ಹೆಚ್ಚಳ.
  • ಯುವ ಕಾರ್ಮಿಕ ಶಕ್ತಿಯಿಂದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಬಲವರ್ಧನೆ.
  • ಹೆಚ್ಚಿನ ಬೇಡಿಕೆಯಿಂದ ಉತ್ಪಾದನಾ ಆರ್ಥಿಕತೆ ಹೆಚ್ಚಳ.
  • ನಗರೀಕರಣ-ಚಾಲಿತ ಮೂಲಸೌಕರ್ಯ ಅಭಿವೃದ್ಧಿ, ಹೆಚ್ಚಿದ ರಾಜಕೀಯ ಶಕ್ತಿ.
  • ಪರಿಣತಿ ಮತ್ತು ಕಾರ್ಮಿಕ ವಿಭಜನೆಯ ಹೆಚ್ಚಿನ ಅವಕಾಶ.
  • ಕ್ಷಿಪ್ರ ಆವಿಷ್ಕಾರ ಮತ್ತು ಕಲ್ಪನೆಗಳ ಪ್ರಚಾರ.
  • ಜೊತೆಗೆ ಪ್ರತಿಭೆಗಳ ದೊಡ್ಡ ಸಂಗ್ರಹ.

ನಕಾರಾತ್ಮಕ ಪರಿಣಾಮ:

  • ಮೂಲಸೌಕರ್ಯ ಮತ್ತು ವಸತಿಯ ಮೇಲೆ ಹೆಚ್ಚಿದ ಒತ್ತಡ.
  • ಸಮಾಜದಲ್ಲಿ ಅಪರಾಧ ಮತ್ತು ಅಸ್ಥಿರತೆ ಹೆಚ್ಚಾಗುವ ಸಾಧ್ಯತೆ.
  • ರೋಗ ಹರಡುವ ಹೆಚ್ಚಿನ ಸಂಭವನೀಯತೆ.
  • ಆಹಾರ ಮತ್ತು ನೀರಿನ ಸಂಭಾವ್ಯ ಕೊರತೆಗಳು.
  • ಮಾಲಿನ್ಯ ಮತ್ತು ತ್ಯಾಜ್ಯ ಉತ್ಪಾದನೆಯ ಹೆಚ್ಚಳ.
  • ನಗರೀಕರಣವನ್ನು ನಿರ್ವಹಿಸಲು ಮತ್ತು ಸಾಕಷ್ಟು ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಲು ಸವಾಲುಗಳು.
  • ಆದಾಯದ ಅಂತರದಲ್ಲಿ ಸಂಭಾವ್ಯ ಹೆಚ್ಚಳ.
  • ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸುವ ಅಡೆತಡೆ.
  • ಇಂಧನ ಸಂಪನ್ಮೂಲಗಳ ಬೇಡಿಕೆಯ ಹೆಚ್ಚಳ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.

ಭಾರತದ ಜನಸಂಖ್ಯೆ: ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (ಯುಎನ್ಎಫ್​ಪಿಎ) ವಿಶ್ವ ಜನಸಂಖ್ಯೆಯ ಸ್ಥಿತಿ - 2024 ರ ವರದಿ "Interwoven Lives, Threads of Hope: Ending Inequalities in Sexual and Reproductive Health and Rights," ಎಂಬ ಶೀರ್ಷಿಕೆಯ ವರದಿಯು ಭಾರತದ ಜನಸಂಖ್ಯೆಯು 77 ವರ್ಷಗಳಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ.

ಅಂದಾಜು 144.17 ಕೋಟಿ ಜನಸಂಖ್ಯೆಯೊಂದಿಗೆ ಭಾರತವು ಜಾಗತಿಕವಾಗಿ ಅಗ್ರಸ್ಥಾನದಲ್ಲಿದ್ದರೆ, ಚೀನಾ 142.5 ಕೋಟಿಯೊಂದಿಗೆ ನಂತರದ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.

2011 ರಲ್ಲಿ ನಡೆದ ಹಿಂದಿನ ಜನಗಣತಿಯಲ್ಲಿ ಭಾರತದ ಜನಸಂಖ್ಯೆ 1.21 ಬಿಲಿಯನ್ ಎಂದು ದಾಖಲಿಸಲಾಗಿದೆ. ವರದಿಯ ಪ್ರಕಾರ - ಭಾರತದ ಜನಸಂಖ್ಯೆಯ ಸರಿಸುಮಾರು ಶೇ24 ರಷ್ಟು 0-14 ವಯಸ್ಸಿನವರಾಗಿದ್ದರೆ, ಶೇ 17 ರಷ್ಟು 10 ರಿಂದ 19 ವರ್ಷದೊಳಗಿನವರು.10-24 ವಯಸ್ಸಿನವರು ಜನಸಂಖ್ಯೆಯ ಶೇ 26ರಷ್ಟು ಇದ್ದಾರೆ ಎಂದು ಅಂದಾಜಿಸಲಾಗಿದೆ. 15-64 ವಯಸ್ಸಿನವರು ಶೇ 68 ರಷ್ಟಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಶೇ7 ರಷ್ಟಿದ್ದು, ಪುರುಷರು 71 ವರ್ಷ ಮತ್ತು ಮಹಿಳೆಯರು 74 ವರ್ಷಗಳವರೆಗೆ ಬದುಕುವ ನಿರೀಕ್ಷೆಯಿದೆ.

ಭಾರತದಲ್ಲಿ ಅತಿಯಾದ ಜನಸಂಖ್ಯೆ: ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, 1.3 ಬಿಲಿಯನ್ ಗಿಂತಲೂ ಹೆಚ್ಚು ಜನರಿಗೆ ನೆಲೆಯಾಗಿದೆ. ಇದು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಬಿರುದನ್ನು ಪಡೆದುಕೊಂಡಿದೆ. ಆದರೆ ದೇಶದ ಜನಸಂಖ್ಯೆಯು ಸಮರ್ಥನೀಯವಲ್ಲದ ದರದಲ್ಲಿ ಬೆಳೆಯುತ್ತಿರುವುದರಿಂದ, ಭಾರತವು ಗಂಭೀರವಾದ ಅತಿಯಾದ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಭಾರತದ ಜನಸಂಖ್ಯೆಯು 2030 ರ ವೇಳೆಗೆ 1.5 ಬಿಲಿಯನ್ ಮತ್ತು 2050 ರ ವೇಳೆಗೆ 2 ಬಿಲಿಯನ್ ಮೀರಬಹುದು ಎಂದು ಜನಸಂಖ್ಯಾ ಅಂದಾಜುಗಳು ಸೂಚಿಸುತ್ತವೆ. ಇದರ ಪರಿಣಾಮವಾಗಿ ದೇಶದ ಸಂಪನ್ಮೂಲಗಳ ಮೇಲೆ ಗಣನೀಯ ಒತ್ತಡ ಉಂಟಾಗಲಿದೆ ಮತ್ತು ಸಾಮಾಜಿಕ ಅಸ್ಥಿರತೆ, ಬಡತನ ಮತ್ತು ಪರಿಸರ ಹದಗೆಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ, ಹೆಚ್ಚು ವ್ಯಾಪಕವಾದ ಕ್ರಮದ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ.

ಜನಸಂಖ್ಯೆ ಹೆಚ್ಚಳ ತಡೆಗಟ್ಟುವ ಮಾರ್ಗಗಳು:

  • ಮದುವೆ ವಯಸ್ಸು ಹೆಚ್ಚಿಸುವುದು.
  • ಸಮತೋಲಿತ ಅನುಪಾತ.
  • ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಸುಧಾರಣೆ.
  • ಸೂಕ್ತ ಕೈಗಾರಿಕೀಕರಣ, ಸರಿಯಾದ ಭೂ ಬಳಕೆ ಮತ್ತು ಶಿಕ್ಷಣದ ಅಗತ್ಯ.
  • ಸರಿಯಾದ ಸಾರ್ವಜನಿಕ ನೀತಿಗಳು.
  • ಆಧುನಿಕ ಕುಟುಂಬ ಯೋಜನೆ.
  • ಮಹಿಳಾ ಸಬಲೀಕರಣ.
  • ಜ್ಞಾನ ವೃದ್ಧಿ.

ಇದನ್ನೂ ಓದಿ : ಜುಲೈ 14ರಂದು ಪುರಿ ಜಗನ್ನಾಥ 'ರತ್ನ ಭಂಡಾರ'ದ ಬೀಗ ತೆರೆಯುವ ಸಾಧ್ಯತೆ - JAGANNATH TEMPLE RATNA BHANDAR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.