ETV Bharat / bharat

ವುಲಾರ್ ಕೆರೆ ಉದ್ದಕ್ಕೂ ನಿಗೂಢವಾಗಿ ಸತ್ತುಬಿದ್ದಿರುವ ಬಾತುಕೋಳಿಗಳು : ವನ್ಯಜೀವಿ ತಜ್ಞರ ಕಳವಳ - KASHUR AENZ

ದಕ್ಷಿಣ ಏಷ್ಯಾದ ಅತಿದೊಡ್ಡ ಸಿಹಿ ನೀರಿನ ಕೆರೆ ವುಲಾರ್ ಕೆರೆ ಉದ್ದಕ್ಕೂ ಬಾತುಕೋಳಿಗಳು ಸಾವನ್ನಪ್ಪಿವೆ. ಇವುಗಳ ಸಾವಿನ ನಿಖರ ಕಾರಣ ತಿಳಿಯಲು ವನ್ಯಜೀವಿ ತಜ್ಞರು ಮುಂದಾಗಿದ್ದಾರೆ.

Kashur Aenz
ಬಾತುಕೋಳಿಗಳು (ETV Bharat)
author img

By ETV Bharat Karnataka Team

Published : Nov 9, 2024, 7:43 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ ) : ಸ್ಥಳೀಯವಾಗಿ 'ಕಶುರ್ ಏಂಜ್' ಎಂದು ಕರೆಯಲ್ಪಡುವ ಕಾಶ್ಮೀರದ ಸಾವಿರಾರು ಸ್ಥಳೀಯ ಬಾತುಕೋಳಿಗಳು ವುಲಾರ್ ಕೆರೆಯ ದಡದಲ್ಲಿ ಮತ್ತು ಅದರ ಉದ್ದಕ್ಕೂ ನಿಗೂಢವಾಗಿ ಸತ್ತಿವೆ. ಕಾಶ್ಮೀರ ಪ್ರದೇಶಕ್ಕೆ ವಿಶಿಷ್ಟವಾದ ಈ ಪಕ್ಷಿಗಳ ಹಠಾತ್ ಮರಣವು ವನ್ಯಜೀವಿ ತಜ್ಞರು ಮತ್ತು ಸಂರಕ್ಷಣಾ ಅಧಿಕಾರಿಗಳಲ್ಲಿ ಕಳವಳ ಉಂಟುಮಾಡಿದೆ. ಹೀಗಾಗಿ, ಅವರು ಇವುಗಳ ಸಾವಿನ ನಿಖರ ಕಾರಣ ತಿಳಿಯಲು ಮುಂದಾಗಿದ್ದಾರೆ.

ವುಲಾರ್ ಕೆರೆಯಲ್ಲಿ ಕಶುರ್ ಏಂಜ್ ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ನಮಗೆ ವರದಿಗಳು ಬಂದಿವೆ ಎಂದು ಪಕ್ಷಿಶಾಸ್ತ್ರಜ್ಞ ಮತ್ತು 'ಬರ್ಡ್ಸ್ ಆಫ್ ಕಾಶ್ಮೀರ್' ಗುಂಪಿನ ಸಂಸ್ಥಾಪಕ ಇರ್ಫಾನ್ ಜೀಲಾನಿ ಹೇಳಿದ್ದಾರೆ. "ವಿಷಯ ತಿಳಿದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದ್ದೇವೆ, ವಿಶೇಷವಾಗಿ ಈ ಸಮಯದಲ್ಲಿ ಕಾಶ್ಮೀರಕ್ಕೆ ವಲಸೆ ಹಕ್ಕಿಗಳು ಹೆಚ್ಚಾಗಿ ಆಗಮಿಸುತ್ತವೆ'' ಎಂದಿದ್ದಾರೆ.

ಜೀಲಾನಿ ಅವರ ಪ್ರಕಾರ, 'ಆರಂಭಿಕ ಸೂಚನೆಗಳು ರಾನಿಖೇತ್ ಅಥವಾ ನ್ಯೂಕ್ಯಾಸಲ್ ಕಾಯಿಲೆಯ ಕಡೆಗೆ ಸೂಚಿಸುತ್ತವೆ. ಇವು ಬಾತುಕೋಳಿಗಳ ಮೇಲೆ ಪರಿಣಾಮ ಬೀರುವ ವೈರಲ್ ಸೋಂಕು. ಆದರೆ, ಕೆರೆಗೆ ಆಗಾಗ ಬರುವ ಬಾತುಕೋಳಿಗಳಂತಹ ಇತರ ಪಕ್ಷಿ ಪ್ರಭೇದಗಳಿಗೆ ಯಾವುದೇ ಅಪಾಯವಿಲ್ಲ' ಎಂದಿದ್ದಾರೆ.

'ಚಳಿಗಾಲದಲ್ಲಿ ಸಾಮಾನ್ಯವಾಗಿ ವಲಸೆ ಬರುವ ಗ್ರೇಲ್ಯಾಗ್ ಹೆಬ್ಬಾತು ಇನ್ನೂ ಇಲ್ಲಿಗೆ ಬಂದಿಲ್ಲ, ಇದು ಹೊರಗಿನಿಂದ ಬಂದಿರುವ ವೈರಲ್ ಆಗುವ ಸಾಧ್ಯತೆಯಿಲ್ಲ. ರೋಗವು ಮತ್ತಷ್ಟು ಹರಡುವುದನ್ನು ತಡೆಯಲು ವ್ಯಾಕ್ಸಿನೇಷನ್‌ಗಳ ಅಗತ್ಯವಿದೆ' ಎಂದು ಅವರು ಹೇಳಿದ್ದಾರೆ.

ಅಸ್ವಸ್ಥ ಬಾತುಕೋಳಿಗಳನ್ನ ಗುರುತಿಸಿದ್ದೇವೆ: ಬಂಡಿಪೋರಾದ ಪಶುಸಂಗೋಪನಾ ಇಲಾಖೆಯ ಮುಖ್ಯಾಧಿಕಾರಿ ಡಾ. ಜಿ. ಎ ಲೋನ್ ಅವರು ಮಾತನಾಡಿ, "ನಮ್ಮ ತಂಡವು ಕೆಲವು ಅಸ್ವಸ್ಥ ಬಾತುಕೋಳಿಗಳನ್ನ ಗುರುತಿಸಿದೆ. ಆರಂಭಿಕ ತನಿಖೆಗಳು ರಾಣಿಖೇತ್ ರೋಗವನ್ನು ಸೂಚಿಸುತ್ತವೆ. ನಾವು ನಮ್ಮ ತಪಾಸಣೆಯನ್ನು ಪಕ್ಕದ ಪ್ರದೇಶಗಳಿಗೆ ವಿಸ್ತರಿಸುತ್ತಿದ್ದೇವೆ'' ಎಂದಿದ್ದಾರೆ.

"ಸೋಂಕಿತ ಪಕ್ಷಿಗಳಿಗೆ ಚಿಕಿತ್ಸೆ ನೀಡಲು ಲಸಿಕೆ ಮತ್ತು ಔಷಧಗಳ ವ್ಯವಸ್ಥೆ ಸೇರಿದಂತೆ ಇಲಾಖೆಯು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ನಾವು ಪರಿಸ್ಥಿತಿ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅಲ್ಲದೇ, ಬೇರೆ ವಲಸೆ ಹಕ್ಕಿಗಳಿಗೆ ಯಾವುದೇ ಪರಿಣಾಮ ಬೀರದ ಕಾರಣ ಭಯಪಡುವ ಅಗತ್ಯವಿಲ್ಲ ಮತ್ತು ಇತರ ಪಕ್ಕದ ಪ್ರದೇಶಗಳಿಂದ ಯಾವುದೇ ಬಾತುಕೋಳಿಗಳು ಮರಣ ಹೊಂದಿರುವ ವರದಿಗಳಿಲ್ಲ" ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದ ಅತಿದೊಡ್ಡ ಸಿಹಿನೀರಿನ ಕೆರೆ ವುಲಾರ್ ಕೆರೆಯು ಬಂಡಿಪೋರಾ ಸಮೀಪದಲ್ಲಿದೆ. ಇದು ಹಲವಾರು ವಲಸೆ ಪ್ರಭೇದಗಳಿಗೆ ಚಳಿಗಾಲದ ಆವಾಸಸ್ಥಾನವಾಗಿದೆ. 1986 ರಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶ ಮತ್ತು ನಂತರ ರಾಮ್ಸರ್ ಸೈಟ್ ಎಂದು ಈ ಸ್ಥಳವನ್ನು ಗುರುತಿಸಲಾಗಿದೆ.

ಲಕ್ಷಗಟ್ಟಲೆ ವಲಸೆ ಹಕ್ಕಿಗಳನ್ನು ಸೆಳೆಯುತ್ತದೆ : ಸಲಿಕೆ ಮತ್ತು ಮಲ್ಲಾರ್ಡ್‌ನಂತಹ ಜಲಪಕ್ಷಿಗಳಿಂದ ಹಿಡಿದು ಅಳಿವಿನಂಚಿನಲ್ಲಿರುವ ಪಲ್ಲಾಸ್ ಮೀನು - ಹದ್ದುಗಳವರೆಗೆ ಈ ಕೆರೆ ನೆಲೆಯಾಗಿದೆ. ಪ್ರತಿ ಚಳಿಗಾಲದಲ್ಲಿ ಈ ವುಲಾರ್​ ಕೆರೆ ಲಕ್ಷಗಟ್ಟಲೆ ವಲಸೆ ಹಕ್ಕಿಗಳನ್ನು ಸೆಳೆಯುತ್ತದೆ. ಕಳೆದ ವರ್ಷದ ಸಂಖ್ಯೆಯು ಸರಿಸುಮಾರು ನಾಲ್ಕು ಲಕ್ಷವನ್ನು ತಲುಪಿದೆ. ಈ ವರ್ಷ ನಾವು ಇನ್ನೂ ಹೆಚ್ಚಿನ ವಲಸೆ ಹಕ್ಕಿಗಳನ್ನ ನಿರೀಕ್ಷಿಸುತ್ತೇವೆ ಎಂದು ವುಲಾರ್ ಕನ್ಸರ್ವೇಶನ್ & ಮ್ಯಾನೇಜ್‌ಮೆಂಟ್ ಅಥಾರಿಟಿ (ಡಬ್ಲ್ಯುಎಲ್‌ಸಿಎ)ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಕಾಶ್ಮೀರ: ಶ್ರೀನಗರದ ಬಳಿ ಅಪರೂಪದ ಫಾಲ್ಕೇಟೆಡ್ ಬಾತುಕೋಳಿ, ಕಾಲರ್ಡ್ ಪ್ರಟಿನ್ ಕೋಲ್ ಪಕ್ಷಿಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.