ETV Bharat / bharat

ಜೂನ್​ 12 ರಂದು ಚಂದ್ರಬಾಬು ನಾಯ್ಡು ಪ್ರಮಾಣವಚನ :ಆಂಧ್ರ ಕ್ಯಾಬಿನೆಟ್‌ನಲ್ಲಿ ಜನಸೇನೆಯಿಂದ ಯಾರಾಗಲಿದ್ದಾರೆ ಸಚಿವರು? - Who will take oath as ministers from Jana Sena

author img

By ETV Bharat Karnataka Team

Published : Jun 10, 2024, 11:45 AM IST

Updated : Jun 10, 2024, 11:59 AM IST

ಜೂನ್​ 12 ರಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಪವನ್​ ಕಲ್ಯಾಣ್​ ನೇತೃತ್ವದ ಜನಸೇನಾ ಪಕ್ಷದ ಎಷ್ಟು ಎಂಎಲ್ಎ ಗಳು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಜೂನ್​ 12 ರಂದು ಚಂದ್ರಬಾಬು ನಾಯ್ಡು ಪ್ರಮಾಣವಚನ :ಆಂಧ್ರ ಕ್ಯಾಬಿನೆಟ್‌ನಲ್ಲಿ ಜನಸೇನೆಯಿಂದ ಯಾರಾಗಲಿದ್ದಾರೆ ಸಚಿವರು?
ಜೂನ್​ 12 ರಂದು ಚಂದ್ರಬಾಬು ನಾಯ್ಡು ಪ್ರಮಾಣವಚನ :ಆಂಧ್ರ ಕ್ಯಾಬಿನೆಟ್‌ನಲ್ಲಿ ಜನಸೇನೆಯಿಂದ ಯಾರಾಗಲಿದ್ದಾರೆ ಸಚಿವರು? (ETV Bharat)

ಅಮರಾವತಿ, ಆಂಧ್ರಪ್ರದೇಶ: ಚಿತ್ರನಟ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಸಿದ್ದ ಇರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪವನ್ ಕಲ್ಯಾಣ್ ದೆಹಲಿ ಮಾಧ್ಯಮಗಳಿಗೆ ಈ ಸುಳಿವು ನೀಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಎನ್ ಡಿಎ ಮೈತ್ರಿಕೂಟದ ಗೆಲುವಿನಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಪ್ರಮುಖ ಪಾತ್ರ ವಹಿಸಿದೆ. ಜನಸೇನಾ ಪಕ್ಷದಿಂದ ಸ್ಪರ್ಧಿಸಿದ್ದ ಎಲ್ಲಾ 21 ವಿಧಾನಸಭೆ ಮತ್ತು ಎರಡು ಲೋಕಸಭೆ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಈ ನಡುವೆ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಚಂದ್ರಬಾಬು ನಾಯ್ಡು ಸಜ್ಜಾಗಿದ್ದಾರೆ. ಎರಡು ಬಾರಿ ಸಮಗ್ರ ಆಂಧ್ರಪ್ರದೇಶ ಸಿಎಂ ಹಾಗೂ ಒಂದು ಬಾರಿ ವಿಭಜಿತ ಆಂಧ್ರಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಇದೇ ತಿಂಗಳ 12 ರಂದು ನಾಲ್ಕನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಜನಸೇನೆಯನ್ನು ತಮ್ಮ ಕ್ಯಾಬಿನೆಟ್‌ಗೆ ಸೇರ್ಪಡೆಗೊಳಿಸುವ ಕುರಿತು ಯಾವುದೇ ಘೋಷಣೆ ಮಾಡಿಲ್ಲ.

ಜನಸೇನೆಯಿಂದ ಒಬ್ಬರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂದು ಭಾವಿಸಲಾಗಿದ್ದರೂ ಆ ಅವಕಾಶ ಸಿಕ್ಕಿಲ್ಲ. ಈಗ ಎಲ್ಲರ ಕಣ್ಣು ಆಂಧ್ರಪ್ರದೇಶ ಸಚಿವ ಸಂಪುಟದ ಮೇಲೆ ನೆಟ್ಟಿದೆ. ಜನಸೇನೆಯಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರು ಯಾರು? ಪವನ್ ಕಲ್ಯಾಣ್ ಸಂಪುಟ ಸೇರುತ್ತಾರಾ? ಆ ವಿಷಯದ ಬಗ್ಗೆ ಎಲ್ಲರಲ್ಲಿ ತೀವ್ರ ಕುತೂಹಲವಿದೆ.

ಇದನ್ನು ಓದಿ: ಮೋದಿ ಸರ್ಕಾರ 3.0 ಅಸ್ತಿತ್ವಕ್ಕೆ: 30 ಸಂಪುಟ ಸಚಿವರು, 5 ಸ್ವತಂತ್ರ ನಿರ್ವಹಣೆ, 36 ರಾಜ್ಯಖಾತೆ ಸಚಿವರಿಂದ ಪ್ರಮಾಣ ಸ್ವೀಕಾರ - Modi Government

Last Updated : Jun 10, 2024, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.