ETV Bharat / bharat

ಚುನಾವಣೆ ನಂತರ ಮಹಾರಾಷ್ಟ್ರದ ಮಹಾಯುತಿ ಸಿಎಂ ಅಭ್ಯರ್ಥಿ ಯಾರೆಂದು ನಿರ್ಧಾರ: ಗೃಹ ಸಚಿವ ಶಾ - MAHARASHTRA ASSEMBLY POLLS

ವಿಧಾನಸಭಾ ಚುನಾವಣೆಯ ನಂತರ ಮುಂದಿನ ಮುಖ್ಯಮಂತ್ರಿಯ ಯಾರಾಗಬೇಕೆಂಬುದನ್ನು ನಿರ್ಧರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ (IANS)
author img

By ETV Bharat Karnataka Team

Published : Nov 10, 2024, 4:08 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಚುನಾವಣೆಯ ನಂತರ ಮೈತ್ರಿಕೂಟದ ಪಾಲುದಾರ ಪಕ್ಷಗಳೇ ನಿರ್ಧರಿಸಲಿವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಭಾನುವಾರ ಬಿಜೆಪಿಯ ಸಂಕಲ್ಪ ಪತ್ರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಮುಂಬೈನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈತ್ರಿಕೂಟದ ಎಲ್ಲಾ ಮೂರು ಪಾಲುದಾರ ಪಕ್ಷಗಳಾದ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ ಮತ್ತು ಚುನಾವಣೆಯ ನಂತರ, ನೀಡಿದ ಭರವಸೆಗಳ ಈಡೇರಿಕೆಗೆ ಆದ್ಯತೆ ನೀಡಲು ಮೂರೂ ಪಕ್ಷಗಳ ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

"ಪ್ರಸ್ತುತ ಸಂದರ್ಭದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆಯ ನಂತರ, ಎಲ್ಲಾ ಮೂರು ಮೈತ್ರಿ ಪಾಲುದಾರರು ಚರ್ಚಿಸಿ ಮುಂದಿನ ಸಿಎಂ ಯಾರಾಗಬೇಕೆಂಬುದನ್ನು ನಿರ್ಧರಿಸುತ್ತಾರೆ" ಎಂದು ಶಾ ನುಡಿದರು.

ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆಗಿಂತ ತಮ್ಮ ಮಗನಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಮತ್ತು ಶರದ್ ಪವಾರ್ ಅಜಿತ್ ಪವಾರ್ ಅವರಿಗಿಂತ ತಮ್ಮ ಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಶಿವಸೇನೆ ಮತ್ತು ಎನ್​ಸಿಪಿ ವಿಭಜನೆಗೊಂಡವು ಎಂದು ಶಾ ಕುಟುಕಿದರು.

"ಈ ಪಕ್ಷಗಳು ತಮ್ಮ ಕುಟುಂಬ ಸದಸ್ಯರಿಗೆ ಆದ್ಯತೆ ನೀಡಿರುವುದರಿಂದ ಅವು ವಿಭಜನೆಗೊಂಡಿವೆ. ಬಿಜೆಪಿ ಕುಟುಂಬ ಆಧರಿತ ರಾಜಕಾರಣವನ್ನು ವಿರೋಧಿಸುತ್ತದೆ. ಆದರೆ ಅವರು ಯಾವುದೇ ಕಾರಣವಿಲ್ಲದೆ ಬಿಜೆಪಿಯನ್ನು ದೂಷಿಸುತ್ತಾರೆ." ಎಂದು ಶಾ ಪ್ರತಿಪಾದಿಸಿದರು.

ಮೀಸಲಾತಿಯನ್ನು ಬಿಜೆಪಿ ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದ ಶಾ, "ಒಬಿಸಿಗಳಿಗೆ ಮೀಸಲಾತಿ ನೀಡಿದ್ದು ಮೋದಿ ಸರ್ಕಾರ. ವಾಸ್ತವವಾಗಿ, ನಾವು ಮೀಸಲಾತಿಯನ್ನು ಬಲಪಡಿಸುತ್ತೇವೆ" ಎಂದು ಹೇಳಿದರು.

ರಾಹುಲ್ ಗಾಂಧಿ ಆಗಾಗ ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಖಾಲಿ ಹಾಳೆಗಳಿರುವುದು ಬೆಳಕಿಗೆ ಬಂದಿದ್ದು, ಇದು ಅವರ ಅಸಲಿ ಮುಖವನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಈಗ ಒಂದು ದೊಡ್ಡ ಜೋಕ್ ಆಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಪ್ರತಿಪಕ್ಷ ಎಂವಿಎ ನಾಯಕರು ಮಹಾಯುತಿ ಸರ್ಕಾರದ ಲಾಡ್ಕಿ ಬಹಿನ್ ಯೋಜನೆಯನ್ನು ಟೀಕಿಸುತ್ತಿದ್ದಾರೆ. ಆದರೆ ಇದಕ್ಕೂ ಹೆಚ್ಚಿನ ಆರ್ಥಿಕ ಸಹಾಯ ನೀಡುವ ಅದೇ ರೀತಿಯ ಭರವಸೆಯನ್ನು ನೀಡಿದೆ ಎಂದು ಕೇಂದ್ರ ಸಚಿವ ಶಾ ಹೇಳಿದರು.

ಇದನ್ನೂ ಓದಿ : 25 ಸಾವಿರ ಫಾಜಿಲ್, ಕಾಮಿಲ್ ಮದರಸಾ ಪದವೀಧರರು ಅತಂತ್ರ: ಮಾನ್ಯತೆ ಪಡೆದ ವಿವಿಯಲ್ಲಿ ಪ್ರವೇಶಕ್ಕೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.