ETV Bharat / bharat

ವಯನಾಡು ದುರಂತಕ್ಕೆ ಒಂದು ತಿಂಗಳು: ಚೇತರಿಕೆ ಹಾದಿಯಲ್ಲಿ ಜನರು, ಉತ್ತಮ ಬದುಕಿನ ಭರವಸೆ - AFTER ONE MONTH WAYANAD LANDSLIDE

ಎಂದಿನಂತೆ ಸುಂದರ ನಾಳೆಯ ಕನಸಿನೊಂದಿಗೆ ಮಲಗಿದ್ದ ಜನರಿಗೆ ಭೂ ಕುಸಿತ ಅಕ್ಷರಶಃ ದುಸ್ವಪ್ನವಾಗಿತ್ತು. ಆ ದುಸ್ಪಪ್ನದಿಂದ ಹೊರ ಬಂದು ಸುಂದರ ಬದುಕಿನ ಭರವಸೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

Wayanad Landslide: A Month of Healing and Hope
ವಯನಾಡು ಭೂ ಕುಸಿತದ ಪ್ರವಾಹ ದೃಶ್ಯ (ಐಎಎನ್​ಎಸ್​​)
author img

By ETV Bharat Karnataka Team

Published : Aug 30, 2024, 1:18 PM IST

ವಯನಾಡು, ಕೇರಳ: ಮುಂಡಕ್ಕೈ, ಚೂರಲ್ಮಾಲ ಮತ್ತು ಮೆಪಾಡಿ ಪಂಚಾಯತ್​ನಲ್ಲಿ ಭೀಕರ ಭೂ ಕುಸಿತ ಸಂಭವಿಸಿದ ತಿಂಗಳು ಗತಿಸಿದ್ದು, ಈ ದುರಂತದಲ್ಲಿ 231 ಜನರು ಸಾವನ್ನಪ್ಪಿದರೆ, ಕಣ್ಮರೆಯಾಗಿರುವ 78 ಮಂದಿ ಸುಳಿವು ಇನ್ನೂ ಸಿಕ್ಕಿಲ್ಲ. ಭಾರಿ ಮಳೆಯಿಂದ ಸಂಭವಿಸಿದ ಭೂ ಕುಸಿತದ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರವಾಹ ನೀರಿನಲ್ಲಿ ಕೊಚ್ಚಿ ಹೋದ ಜನರ ರಕ್ಷಣೆಗಾಗಿ ಸೇನೆ ಸೇರಿದಂತೆ ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳು ವಾರಗಳ ಕಾಲ ಅವಿರಹಿತ ಕಾರ್ಯಾಚರಣೆ ನಡೆಸಿದ್ದವು.

ವಿಪತ್ತಿನ ಪರಿಣಾಮ: ಎಂದಿನಂತೆ ಸುಂದರ ನಾಳೆಯ ಕನಸಿನೊಂದಿಗೆ ಮಲಗಿದ್ದ ಜನರಿಗೆ ಭೂ ಕುಸಿತ ಅಕ್ಷರಶಃ ದುಸ್ವಪ್ನವಾಗಿತ್ತು. ನಡು ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕುಸಿತದಿಂದ ಉಂಟಾದ ಭಾರೀ ಪ್ರವಾಹಕ್ಕೆ 62 ಕುಟುಂಬಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. 183 ಮನೆಗಳು ಕಣ್ಮರೆಯಾಗಿದ್ದವು. 145 ಮನೆಗಳು ಸಂಪೂರ್ಣವಾಗಿ ನಾಶವಾಗಿದದವು . 170 ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು. ಒಟ್ಟು 240 ಮನೆಗಳು ವಾಸಕ್ಕೆ ಯೋಗ್ಯ ಇಲ್ಲದಂತೆ ಭಗ್ನಗೊಂಡಿವೆ. ಒಟ್ಟು 638 ಮನೆಗಳ ಮೇಲೆ ನೇರ ಪರಿಣಾಮ ಬೀರಿದೆ. ಪ್ರವಾಹಕ್ಕೆ ಕೊಚ್ಚಿ ಹೋದ ಗುರುತು ಪತ್ತೆಯಾಗದ 42 ದೇಹಗಳನ್ನು ಡಿಎನ್​ಎ ಪರೀಕ್ಷೆ ಮೂಲಕ ಪತ್ತೆ ಮಾಡಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ನಡುವೆ ಇನ್ನೂ 78 ಮಂದಿ ಸುಳಿವೇ ಇಲ್ಲದಂತಾಗಿದೆ.

ಈ ದುರಂತವೂ ಬೆಳಗಾಗುವಷ್ಟರಲ್ಲಿ ಇಲ್ಲಿನ ಸಂಪೂರ್ಣ ದೃಶ್ಯಗಳನ್ನು ಬದಲಾಯಿಸಿತ್ತು. ತಕ್ಷಣಕ್ಕೆ ದೊಡ್ಡ ಮಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸೇನಾ ಪಡೆ ತುರ್ತಾಗಿ ವಯನಾಡುಗೆ ಆಗಮಿಸಿ, ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಹಲವು ಜೀವಗಳನ್ನು ಕಾಪಾಡಿತ್ತು. ದುರಂತದಲ್ಲಿ ಕೊಚ್ಚಿಹೋದ ಅನೇಕ ಸಂತ್ರಸ್ತರು ನಿಲಂಬುರ್​, ಮಲಪ್ಪುರಂನಲ್ಲಿ ಪತ್ತೆಯಾಯಿತು. ಈ ಮೃತಗಳ ಶರೀರಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ನಡೆಸುವ ಮೂಲಕ ಶಾಂತಿ ಕೋರಲಾಯಿತು. ಪ್ರವಾಹಕ್ಕೆ ತುತ್ತಾದ ವಯನಾಡಿಗೆ ಮಿಡಿದ ಜನರು ಬೆಂಬಲದ ಮಹಾಪೂರವನ್ನೇ ಹರಿಸಿದರು.

ಇಂತಹ ಬಿಕಟ್ಟಿನ ಸಂದರ್ಭದಲ್ಲಿ ಸರ್ಕಾರ, ಇಲ್ಲಿನ ಜನರಿಗಾಗಿ ಪುನರ್ವಸತಿ ನಡೆಸಲು ಸಜ್ಜಾಗಿದೆ. ಮುಖ್ಯಮಂತ್ರಿ ಪಿಣರಾಜಿ ವಿಜಯನ್​ ಭೂ ಕುಸಿತದ ಪ್ರತಿ ಸಂತ್ರಸ್ತರಿಗ 1000 ಅಡಿಯ ಒಂದು ಹಂತದ ಮನೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಮನೆಯನ್ನು ಕಳೆದುಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಂತ್ರಸ್ತರ ಆಸರೆಗಾಗಿ ಸರ್ಕಾರ ಇದೀಗ ಮುಂದಾಗಿದ್ದು, ಹಲವು ಕ್ರಮಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಪ್ರವಾಹ ಪರಿಣಾಮಕ್ಕೆ ಒಳಗಾದ ಪ್ರದೇಶಗಳಲ್ಲಿ ಸೆಪ್ಟೆಂಬರ್​ 2ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು, ಈ ವೇಳೆ ಮಕ್ಕಳನ್ನು ಈ ಕರಾಳ ನೆನಪಿನಿಂದ ಹೊರ ತರಲು ಹಬ್ಬದ ರೀತಿ ಸ್ವಾಗತಿಸಲಾಗುವುದು. ಈ ಮೂಲಕ ತಮ್ಮ ಊರು ಮತ್ತೆ ಜೀವನ ಪಡೆಯುತ್ತಿದೆ ಎಂಬ ಭರವಸೆ ಮೂಡಿಸಿ ಪುನರ್​ರೂಪಿಸಲಾಗಿದೆ. ಈ ಮೂಲಕ ವಯನಾಡಿನ ಜನರಲ್ಲಿ ಆಶಾಕಿರಣವೊಂದು ಮೂಡಿಸುವ ಪ್ರಯತ್ನಕ್ಕೆ ಮುಂದಾಗಲಾಗಿದೆ.

ಇದನ್ನೂ ಓದಿ: ವಯನಾಡು ದುರಂತ : ನಾಪತ್ತೆಯಾಗಿದ್ದ 5 ಹಸುಗಳು ಮತ್ತೆ ಯಜಮಾನನ ಬಳಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.