ETV Bharat / bharat

ಚಾಕೋಲೆಟ್​ನೊಂದಿಗೆ ಪ್ರೀತಿಯ ಬಂಧದ ಸಿಹಿ ಮತ್ತಷ್ಟು ಹೆಚ್ಚಿಸಿಕೊಳ್ಳಿ - ಮತ್ತಷ್ಟು ಹೆಚ್ಚಿಸಿ ಚಾಕೋಲೆಟ್​ನೊಂದಿಗೆ

Chocolate day 2024: ವ್ಯಾಲೆಂಟೈನ್ಸ್​​ ವಾರದ ಮೂರನೇ ದಿನ ಚಾಕೋಲೆಟ್​​ ಡೇಯಾಗಿ ಆಚರಿಸಲಾಗುತ್ತದೆ.

valentines-week-third-day-celebrate-chocolate-day

author img

By ETV Bharat Karnataka Team

Published : Feb 9, 2024, 2:34 PM IST

ಹೈದರಾಬಾದ್​: ಯಾವುದೇ ಶುಭ ಕೆಲಸವನ್ನು ಸಿಹಿಯಿಂದ ಆರಂಭಿಸಬೇಕು ಎಂಬ ಮಾತು ಸಾಮಾನ್ಯ. ಇದೇ ಕಾರಣಕ್ಕೆ ಪ್ರತಿ ಕಾರ್ಯಕ್ಕೆ ಮುನ್ನ ಬಾಯಿ ಸಿಹಿಯಾಗುವುದು, ಅಂತಹದ್ದರಲ್ಲಿ ಜೀವನ ಪ್ರಮುಖ ಘಟ್ಟದಲ್ಲಿ ಒಂದಾಗಿರುವ ಪ್ರೀತಿಯ ವಿಚಾರದಲ್ಲೂ ಚಾಕೋಲೆಟ್​ ಜೀವನದ ಸಿಹಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂತಹ ಸಿಹಿಯಾದ ಚಾಕೋಲೆಟ್​​ಗೆ ಪ್ರೀತಿಯ ವಾರದಲ್ಲಿ ಒಂದು ದಿನವನ್ನ ಮೀಸಲಿಡಲಾಗಿದೆ. ವ್ಯಾಲೆಂಟೈನ್ಸ್ ​ವಾರದ ಮೂರನೇ ದಿನ ಈ ಚಾಕೋಲೆಟ್​​ಗೆ ಮೀಸಲಾಗಿದೆ.

ಚಾಕೋಲೆಟ್​ ಕೇವಲ ಬಾಯಿಯನ್ನು ಸಿಹಿ ಮಾಡುವುದಿಲ್ಲ. ಇದು ನಮ್ಮ ಎಲ್ಲಾ ಜ್ಞಾನೇಂದ್ರಿಗಳನ್ನು ಚುರುಕಾಗಿಸುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಮೂಡ್​ ಬದಲಾಯಿಸಲುವಲ್ಲಿ ಚಾಕೋಲೆಟ್​​ ಪ್ರಮುಖವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಜಗತ್ತಿನೆಲ್ಲೆಡೆ ಇಷ್ಟಪಟ್ಟು ಈ ಸಿಹಿಯನ್ನು ಸವಿಯುವುದು ಸುಳ್ಳಲ್ಲ.

ವ್ಯಾಲೆಂಟೈನ್ಸ್ ಎಂದು ಕರೆಯಲಾದ ಸೆಂಟ್​​ ವ್ಯಾಲೆಂಟೈನ್ ಮತ್ತು ಮತ್ತೊಬ್ಬರು ಸೆಂಟ್​​ಗೆ ಗೌರವಿಸುವ ಉದ್ದೇಶದಿಂದ ಈ ದಿನ ಹುಟ್ಟಿಕೊಂಡಿದೆ. ವಿಕ್ಟೋರಿಯಾ ಕಾಲದಲ್ಲಿ ಉಡುಗೊರೆಯ ಪ್ರಮುಖ ವಸ್ತು ಎಂದರೆ ಅದು ಚಾಕೋಲೆಟ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರೀತಿಯಲ್ಲಿರುವ ಹುಡುಗ ಅಥವಾ ಹುಡುಗಿ ಈ ಚಾಕೋಲೆಟ್​​ ಅನ್ನು ನೀಡುವ ಸಾಂಪ್ರದಾಯ ಆರಂಭವಾಯಿತು.

ಚಾಕೋಲೆಟ್​ ಎಂಬುದು ಕೇವಲ ಬಾಯಿಚಪ್ಪರಿಸುವ ತಿನಿಸಲ್ಲ. ಇದು ಹಲವು ಆರೋಗ್ಯಕರ ಪ್ರಯೋಜನವನ್ನು ಹೊಂದಿದೆ. ಚಾಕೋಲೆಟ್​ನ ನೈಸರ್ಗಿಕ ರಾಸಾಯನಿಕಗಳು ವ್ಯಕ್ತಿಯ ಮನಸ್ಥಿತಿ ಬದಲಾಯಿಸುವಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ. ಚಾಕೋಲೆಟ್​ನಲ್ಲಿರುವ ಟ್ರಿಪ್ಟೊಫಾನ್ ಮೆದುಳಿನಲ್ಲಿ ಎಂಡಾರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಖುಷಿ ವ್ಯಕ್ತವಾಗುತ್ತದೆ. ನಿತ್ಯ ನಿಯಂತ್ರಣ ದರದಲ್ಲಿ ಚಾಕೋಲೆಟ್​ ಸೇವನೆ ಮಾಡುವುದರಿಂದ ಹೃದಯ ಸಮಸ್ಯೆಗಳಿಂದ ಪಾರು ಮಾಡಬಹುದಾಗಿದೆ.

ಚಾಕೋಲೆಟ್​ ಎಂಬುದು ಕೊಕೊ ಮರದಿಂದ ಬರುವ ಉತ್ಪನ್ನವಾಗಿದೆ. chocolate.org ಪ್ರಕಾರ, ಕೋಕೋವನ್ನು ದೇವರು ನೀಡಿದ ಹಣ್ಣು ಎಂದು ನಂಬಿದ ಮೆಸೊ ಅಮೆರಿಕನ್ ನಾಗರಿಕತೆಯ ಅಜ್ಟೆಕ್ ಜನರು ಕೋಕೋ ಪಾನೀಯವನ್ನು ಔಷಧೀಯ ಮಿಶ್ರಣ, ಶಕ್ತಿ ಪಾನೀಯವಾಗಿ ಬಳಸುತ್ತಿದ್ದರು.

ಅಮೆರಿಕದ ನ್ಯಾಷನಲ್​ ಕನ್ಫೆಕ್ಷನರಿ ಅಸೋಸಿಯೇಷನ್​ ನಡೆಸಿದ ಅಧ್ಯಯನ ಅನುಸಾರ, ಧೂಮಪಾನ ಮಾಡುವ ಶೇ 92ರಷ್ಟು ಮಂದಿ ಚಾಕೋಲೆಟ್​ ಅಥವಾ ಕ್ಯಾಂಡಿಯನ್ನು ಉಡುಗೊರೆಯಾಗಿ ಸ್ವೀಕರಿಸಲು ಇಚ್ಛಿಸುತ್ತಾರೆ. ಪ್ರತಿ ವರ್ಷ ಚಾಕೋಲೆಟ್​ ದಿನದಂದು ಚಾಕೋಲೆಟ್​ ಮತ್ತು ಕ್ಯಾಂಡಿ ಮಾರಾಟದಿಂದ 4 ಬಿಲಿಯನ್​ ಡಾಲರ್​ ಆದಾಯ ಬರುತ್ತದೆ.

ಆಧುನಿಕ ದಿನದಲ್ಲಿ ಉಡುಗೊರೆ ನೀಡುವ ಉದ್ದೇಶದಿಂದಲೇ ಅಂದವಾಗಿ ಜೋಡಿಸಿದ ಚಾಕೋಲೆಟ್​​ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಜೊತೆಗೆ ಮನೆಯಲ್ಲಿಯೇ ಇದನ್ನು ಮತ್ತಷ್ಟು ರುಚಿ ಭರಿತವಾಗಿ ನಿಮ್ಮ ಪ್ರೀತಿಪಾತ್ರರಿಗೆ ಸಿದ್ಧ ಮಾಡಬಹುದಾಗಿದೆ.

ಇದನ್ನೂ ಓದಿ: ತಡವಾಗುವುದಕ್ಕೆ ಮುಂಚೆಯೇ ಹೇಳಿಬಿಡಿ ಪ್ರೀತಿ ಬಗ್ಗೆ; ಇಂದು ಪ್ರಪೋಸ್​ ಡೇ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.