ETV Bharat / bharat

ಮಹಿಳೆಯನ್ನು 30 ಗಂಟೆ ಡಿಜಿಟಲ್​ ಅರೆಸ್ಟ್​ ಮಾಡಿ, 10.5 ಲಕ್ಷ ದೋಚಿದ ಖದೀಮರು - Digital Arrest - DIGITAL ARREST

ಮಹಿಳೆ ಕೆಲ ದಿನಗಳ ಹಿಂದೆ ಕೊರಿಯರ್​ವೊಂದನ್ನು ಕಳುಹಿಸಿದ್ದು, ಈ ದತ್ತಾಂಶವನ್ನು ಸೈಬರ್​ ಮಾಹಿತಿ ಮೂಲಕ ಕದ್ಧು ದುಷ್ಕರ್ಮಿಗಳು ಆಕೆಯನ್ನು ಬೆದರಿಸಿದ್ದಾರೆ.

Uttarakhand Woman Put  under digital arrest through video call for 30 hours
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Aug 5, 2024, 9:37 PM IST

ಉತ್ತರಾಖಂಡ್​: ಡೆಹ್ರಾಡೂನ್​ ನಿವಾಸಿಯಾದ ಮಹಿಳೆಯೊಬ್ಬರನ್ನು ವಿಡಿಯೋ ಕಾಲ್​ ಮೂಲಕ 30 ಗಂಟೆಗಳ ಕಾಲ ಡಿಜಿಟಲ್​ ಗೃಹ​ ಬಂಧನಕ್ಕೆ ಒಳಗಾಗಿಸಿ 10.5 ಲಕ್ಷ ರೂ ದೋಚಿರುವ ಘಟನೆ ವರದಿಯಾಗಿದೆ. ದಲ್ನವಾಲಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೊರಿಯರ್​ ಮೂಲಕ ಆಕ್ಷೇಪಾರ್ಹ ವಸ್ತುಗಳಿದ್ದು ಈ ಸಂಬಂಧ ನಿಮ್ಮನ್ನು ಬಂಧಿಸಲಾಗುವುದು. ಈ ಬಂಧನವನ್ನು ತಪ್ಪಿಸಬೇಕು ಎಂದರೆ, ತನಿಖೆಗೆ ಸಹಕರಿಸುವಂತೆ ಹೇಳಿ ಆಕೆಯ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ಸಾರಾಂಶ: ಜುಲೈ 31ರಂದು ತಮ್ಮ ಹೆಸರಿನಲ್ಲಿ ಕೊರಿಯರ್​ವೊಂದು ಥೈಲ್ಯಾಂಡ್​ಗೆ ಹೋಗುತ್ತಿದ್ದು, ಅದರಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳಿವೆ ಎಂದು ತಿಳಿಸಿದರು. ಅಲ್ಲದೇ, ಈ ಸಂಬಂಧ ಹೆಚ್ಚಿನ ವಿವರಣೆಗೆ ಮುಂಬೈ ಕ್ರೈಂ ಬ್ರಾಂಚ್​ಗೆ ಕರೆ ವರ್ಗಾವಣೆ ಮಾಡಲಾಗುವುದು ಎಂದು ಸ್ಕೈಪ್​ ವಿಡಿಯೋ ಕಾಲ್​ನಲ್ಲಿ ಸಂಪರ್ಕದಲ್ಲಿರುವಂತೆ ಹೇಳಿದರು.

ವಿಚಾರಣೆ ನೆಪದಲ್ಲಿ 30 ಗಂಟೆಗಳ ಕಾಲ ನನ್ನನ್ನು ವಿಡಿಯೋ ಕಾಲ್​ನಲ್ಲಿರುವಂತೆ ನೋಡಿಕೊಂಡರು. ನನ್ನ ಜೊತೆಗೆ ಪೊಲೀಸ್​ ಯುನಿಫಾರ್ಮ್​ನಲ್ಲಿದ್ದ ವ್ಯಕ್ತಿಯೊಬ್ಬರು ಮಾತನಾಡಿದರು. ಆತ ಮಾತನಾಡುತ್ತಾ, ಸರಿಯಾಗಿ ಮಾಹಿತಿ ನೀಡದೇ ಹೋದಲ್ಲಿ ಮುಂಬೈ ಕ್ರೈಂ ಬ್ರಾಂಚ್​ ಮುಂದೆ ಬರಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.

ಆತನ ಎಲ್ಲಾ ಪ್ರಶ್ನೆಗಳಿಗೆ ವಿಡಿಯೋ ಕರೆ ಮೂಲಕ ಉತ್ತರಿಸಿದೆ. ಈ ವೇಳೆ ಆತ ನನ್ನ ಎಲ್ಲಾ ಉತ್ತರಗಳನ್ನು ಮುಂಬೈ ಕ್ರೈಂ ಬ್ರಾಂಚ್​ಗೆ ಕಳುಹಿಸಲಾಗುವುದು. ನೀವು ಕಳುಹಿಸಿದ ಕೊರಿಯರ್​ ತಡೆಯಲು ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು 10.50 ಲಕ್ಷ ರೂ ಪಾವತಿ ಮಾಡಬೇಕು ಎಂದು ಹೇಳಿದ. ಇದರಿಂದ ಭಯಗೊಂಡು ಹಣವನ್ನು ಹೇಗೋ ಮಾಡಿ ಹೊಂದಿಸಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ದಲ್ನವಾಲಾ ಪೊಲೀಸ್​ ಮುಖ್ಯಸ್ಥ ಮನೋಜ್​ ನೈನ್ವಾಲ್​ ಅಪರಿಚಿತ ಆರೋಪಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಕೆಲವು ದಿನಗಳ ಹಿಂದೆ ಕೊರಿಯರ್​ವೊಂದನ್ನು ಕಳುಹಿಸಿದ್ದು, ಈ ದತ್ತಾಂಶವನ್ನು ಸೈಬರ್​ ಮಾಹಿತಿ ಮೂಲಕ ಕದ್ಧು ಆಕೆಯನ್ನು ಬೆದರಿಸಲಾಗಿದೆ. ಮಹಿಳೆ ದೂರಿನ ಆಧಾರದ ಮೇಲೆ ಮತ್ತು ಮೊಬೈಲ್​ ಸಂಖ್ಯೆ ಆಧಾರಿಸಿ ಪತ್ತೆ ಕಾರ್ಯ ನಡೆಸಲಾಗುವುದು ಎಂದರು.

ಇದನ್ನೂ ಓದಿ: ಕೋಚಿಂಗ್​ ಸೆಂಟರ್​ಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ: ಸುಪ್ರೀಂ ಕೋರ್ಟ್​ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.