ಫಿರೋಜ್‌ಪುರ (ಪಂಜಾಬ್): ಮಂಗಳವಾರ ಬೆಳಗ್ಗೆ ಫಿರೋಜ್‌ಪುರದಲ್ಲಿ ಬಾಂಬ್ ಇರುವ ಕುರಿತು ಕರೆ ಬಂದಿರುವ ಹಿನ್ನೆಲೆ ಜಮ್ಮು ತಾವಿಯಿಂದ ಅಹಮದಾಬಾದ್‌ಗೆ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಲಾಗಿದೆ. ಕಾಸು ಬೇಗು ರೈಲು ನಿಲ್ದಾಣದಲ್ಲಿ ರೈಲನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯಿತು. ಭಾರತೀಯ ಸೇನೆಯ ಬಾಂಬ್ ನಿಷ್ಕ್ರಿಯ ದಳ ಕೂಡಾ ಸ್ಥಳಕ್ಕೆ ಧಾವಿಸಿತ್ತು. ಸುಮಾರು 6 ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ರೈಲಿನಿಂದ ಏನೂ ಪತ್ತೆಯಾಗಲಿಲ್ಲ.
ಪ್ರಯಾಣಿಕರನ್ನು ಅದೇ ರೈಲಿನಲ್ಲಿ ಕಳುಹಿಸಲು ಸಿದ್ಧತೆ ನಡೆದಿದೆ. ಬಾಂಬ್ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಯ ಕರೆಯನ್ನು ವಿವರವಾಗಿ ಪತ್ತೆ ಹಚ್ಚಲಾಗಿದೆ ಎಂದು ಫಿರೋಜ್‌ಪುರ ಎಸ್‌ಎಸ್‌ಪಿ ಸೌಮ್ಯ ಮಿಶ್ರಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಿಂದ ಕರೆ ಬಂದಿದೆ. ಪಂಜಾಬ್ ಪೊಲೀಸರು ಸ್ಥಳೀಯ ಪಶ್ಚಿಮ ಬಂಗಾಳ ಪೊಲೀಸರನ್ನು ಸಂಪರ್ಕಿಸಿದರು. ಮತ್ತು ಪಶ್ಚಿಮ ಬಂಗಾಳದಿಂದ ಕರೆ ಮಾಡಿದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.
ಫಿರೋಜ್‌ಪುರ ಎಸ್‌ಎಸ್‌ಪಿ ಸೌಮ್ಯ ಮಿಶ್ರಾ ಅವರು, ''ಕಾಸು ಬೇಗು ರೈಲು ನಿಲ್ದಾಣದಲ್ಲಿ ಜಮ್ಮು ತಾವಿಯಿಂದ ಅಹಮದಾಬಾದ್‌ಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಫಿರೋಜ್‌ಪುರ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಪಂಜಾಬ್ ಪೊಲೀಸ್ ಇಲಾಖೆಯ ಮೂರು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಬಂದು ತೀವ್ರ ಪರಿಶೀಲನೆ ನಡೆಸಿದವು. ಕೂಡಲೇ ಶೋಧ ಕಾರ್ಯ ನಡೆಸಲಾಯಿತು. ಆದರೆ, ರೈಲಿನೊಳಗೆ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ'' ಎಂದು ಅವರು ತಿಳಿಸಿದರು.
ಐದು ರೈಲುಗಳ ಸಂಚಾರದ ಮೇಲೆ ಪರಿಣಾಮ: ಜಮ್ಮು ತಾವಿ - ಅಹಮದಾಬಾದ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರುವ ಕುರಿತು ಮಾಹಿತಿ ತಿಳಿದ ನಂತರ, ಆ ರೈಲನ್ನು ಕಾಸು ಬೇಗು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಅಹಮದಾಬಾದ್ - ಜಮ್ಮು ತಾವಿ ಎಕ್ಸ್‌ಪ್ರೆಸ್ - ಫರೀದ್‌ಕೋಟ್ ರೈಲು ನಿಲ್ದಾಣದಲ್ಲಿ 2 ಗಂಟೆಗಳ ಕಾಲ ನಿಲ್ಲಿಸಲಾಯಿತು. ಬಟಿಂಡಾಗೆ ಹಿಂತಿರುಗಿ, ಫಾಜಿಲ್ಕಾ ಮೂಲಕ ತಿರುಗಿಸಿ ಜಮ್ಮು ಕಡೆಗೆ ಕಳುಹಿಸಲಾಗಿದೆ. ಬಟಿಂಡಾ-ಫಿರೋಜ್‌ಪುರ ಪ್ಯಾಸೆಂಜರ್ ಅನ್ನು ಕೊಟ್ಕಾಪುರ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಫಿರೋಜ್‌ಪುರ - ದೆಹಲಿ ಪ್ಯಾಸೆಂಜರ್ ಫಿರೋಜ್‌ಪುರ ಕ್ಯಾಂಟ್ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಭಾರತೀಯ ಸೇನಾ ರೈಲನ್ನು ಫರೀದ್‌ಕೋಟ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಜೊತೆಗೆ ಗೂಡ್ಸ್ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದೆ. ಫಿರೋಜ್‌ಪುರ - ಭಟಿಂಡಾ ರೈಲ್ವೆ ವಿಭಾಗದಲ್ಲಿ ಸರಕು ಸಾಗಣೆ ರೈಲುಗಳನ್ನು ಸಮೀಪದ ನಿಲ್ದಾಣದಲ್ಲೇ ತಡೆಯಲಾಗಿತ್ತು.