ETV Bharat / bharat

ಯುಪಿ, ಕೇರಳ - ಪಂಜಾಬ್ ಉಪಚುನಾವಣೆ ದಿನಾಂಕ ಬದಲಾವಣೆ - BY POLLS RESCHEDULED

ಕೆಲ ರಾಜ್ಯಗಳಲ್ಲಿನ ಉಪಚುನಾವಣೆ ದಿನಾಂಕಗಳನ್ನು ಬದಲಾಯಿಸಲಾಗಿದೆ.

ಚುನಾವಣಾ ಆಯೋಗ
ಚುನಾವಣಾ ಆಯೋಗ (IANS)
author img

By ETV Bharat Karnataka Team

Published : Nov 4, 2024, 3:20 PM IST

ನವದೆಹಲಿ: ಉತ್ತರ ಪ್ರದೇಶ, ಕೇರಳ ಮತ್ತು ಪಂಜಾಬ್ ರಾಜ್ಯಗಳ ಉಪಚುನಾವಣೆಯನ್ನು ನವೆಂಬರ್ 13 ರಿಂದ ನವೆಂಬರ್ 20 ಕ್ಕೆ ಮುಂದೂಡಲಾಗಿದೆ. ಈ ಕುರಿತು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಕಾಂಗ್ರೆಸ್, ಬಿಜೆಪಿ, ಬಿಎಸ್ ಪಿ ಮತ್ತು ಆರ್​ಎಲ್​ಡಿ ಸೇರಿದಂತೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮನವಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿವಿಧ ಹಬ್ಬಗಳ ಕಾರಣದಿಂದಾಗಿ ಈ ರಾಜ್ಯಗಳಲ್ಲಿ ದಿನಾಂಕಗಳನ್ನು ಬದಲಾಯಿಸುವಂತೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

ಕೇರಳದ 56-ಪಾಲಕ್ಕಾಡ್ ಎಸಿ ಮತಕ್ಷೇತ್ರದಲ್ಲಿ 2024 ರ ನವೆಂಬರ್ 13 ರಿಂದ 15 ರವರೆಗೆ "ಕಲ್ಪತಿ ರಥೋತ್ಸವಂ" ಉತ್ಸವ ನಡೆಯಲಿದ್ದು, ಕ್ಷೇತ್ರದ ಬಹುತೇಕ ಮತದಾರರು ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಹೇಳಿತ್ತು. ಹೀಗಾಗಿ ಕೇರಳ ಉಪಚುನಾವಣೆಯ ದಿನಾಂಕ ಬದಲಾಯಿಸಲಾಗಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಕಾರ್ತಿಕ ಪೂರ್ಣಿಮೆಯನ್ನು ಆಚರಿಸಲು ಜನರು ಮೂರರಿಂದ ನಾಲ್ಕು ದಿನ ಮುಂಚಿತವಾಗಿಯೇ ಬೇರೆ ಊರುಗಳಿಗೆ ಪ್ರಯಾಣಿಸುತ್ತಾರೆ. ಹೀಗಾಗಿ ದಿನಾಂಕ ಬದಲಾಯಿಸಬೇಕೆಂದು ಬಿಜೆಪಿ, ಬಿಎಸ್ ಪಿ ಮತ್ತು ಆರ್​ಎಲ್​ಡಿ ಮನವಿ ಮಾಡಿದ್ದವು. ಪಂಜಾಬಿನಲ್ಲಿ ನವೆಂಬರ್ 15 ರಂದು ಶ್ರೀ ಗುರುನಾನಕ್ ದೇವ್ ಜಿ ಅವರ 555 ನೇ ಪ್ರಕಾಶ್ ಪರ್ವ್ ಮತ್ತು ನವೆಂಬರ್ 13 ರಿಂದ ಅಖಂಡ ಪಥವನ್ನು ಆಯೋಜಿಸಲಾಗುವುದು. ಹೀಗಾಗಿ ಇಲ್ಲಿ ಚುನಾವಣೆ ದಿನಾಂಕ ಬದಲಾಯಿಸಬೇಕೆಂದು ಕಾಂಗ್ರೆಸ್ ಕೋರಿತ್ತು.

ಕೇರಳದ ಒಂದು ವಿಧಾನಸಭಾ ಕ್ಷೇತ್ರ, ಪಂಜಾಬ್ ನ ನಾಲ್ಕು ಮತ್ತು ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳ ಮತ ಎಣಿಕೆ ಮತ್ತು ಚುನಾವಣಾ ಮುಕ್ತಾಯದ ದಿನಾಂಕವು ಕ್ರಮವಾಗಿ ನವೆಂಬರ್ 23 ಮತ್ತು 25 ರಂದು ನಡೆಯಲಿದೆ. ವಿಶೇಷವೆಂದರೆ, ಮತದಾರರ ಅನುಕೂಲಕ್ಕಾಗಿ ಮತ್ತು ಮತದಾನದ ಪ್ರಮಾಣ ಹೆಚ್ಚಿಸಲು ಆಯೋಗವು ಈ ಹಿಂದೆಯೂ ಅನೇಕ ಬಾರಿ ಮತದಾನದ ದಿನಾಂಕಗಳನ್ನು ಮರು ನಿಗದಿಪಡಿಸಿತ್ತು.

ಇದನ್ನೂ ಓದಿ : ಪಕ್ಷಪಾತ ಆರೋಪ: ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.