ETV Bharat / bharat

ಊಟ ಬಡಿಸೋದು ತಡವಾಯ್ತು ಎಂದು ಮದುವೆ ಕ್ಯಾನ್ಸಲ್​ ಮಾಡಿದ ವರ: ಸಹೋದರ ಸಂಬಂಧಿಗೆ ತಾಳಿಕಟ್ಟಿದ - UP GROOM CANCELS WEDDING

ಊಟ ಬಡಿಸುವುದು ತಡ ಆಯಿತು ಎಂದು ಜಗಳ ತೆಗೆದು ಮದುವೆಗೆ ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP groom cancels wedding over delay in serving food, marries cousin
ಊಟ ಬಡಿಸೋದು ತಡವಾಯ್ತು ಎಂದು ಮದುವೆ ಕ್ಯಾನ್ಸಲ್​ ಮಾಡಿದ ವರ: ಸಹೋದರ ಸಂಬಂಧಿಗೆ ತಾಳಿಕಟ್ಟಿದ (IANS)
author img

By ETV Bharat Karnataka Team

Published : Dec 30, 2024, 7:36 AM IST

ಚಂದೌಲಿ, ಉತ್ತರಪ್ರದೇಶ: ಉತ್ತರ ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಊಟ ಬಡಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ವರನೊಬ್ಬ ಮದುವೆ ಬೇಡ ಎಂದು ನಿರಾಕರಿಸಿದ್ದಾನೆ. ಈ ಬಗ್ಗೆ ನಡೆದ ಎಲ್ಲ ಸಂಧಾನಗಳು ವಿಫಲವಾಗಿದ್ದರಿಂದ, ವರ ಮರುದಿನ ಸಹೋದರ ಸಂಬಂಧಿಯೊಂದಿಗೆ ಮದುವೆಯಾದ ಘಟನೆ ನಡೆದಿದೆ.

ವರನ ಕಡೆಯವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರಿಂದ ವಧು ಮತ್ತು ಆಕೆಯ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು. ಮದುವೆ ಹಿನ್ನೆಲೆ ವಧುವಿನ ಕಡೆಯವರು ವರನ ಕುಟುಂಬಕ್ಕೆ 1.5 ಲಕ್ಷ ರೂ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಊಟಕ್ಕೆ ತಡ ಮಾಡಲಾಗಿದೆ ಎಂದು ವರ ಮದುವೆಗೆ ನಿರಾಕರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವಧು ಹೇಳಿದ್ದೇನು?: ಮಾಧ್ಯಮಗಳ ಜತೆ ಮಾತನಾಡಿರುವ ವಧು, ‘‘ಏಳು ತಿಂಗಳ ಹಿಂದೆ ಮೆಹ್ತಾಬ್ ಎಂಬುವವನ ಜತೆ ತನ್ನ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್ 22 ರಂದು ಮದುವೆ ಮೆರವಣಿಗೆ ಹಮೀದ್‌ಪುರ ಗ್ರಾಮದ ನನ್ನ ಮನೆಗೆ ಆಗಮಿಸಿತ್ತು. ಮೆಹ್ತಾಬ್​ ಮತ್ತು ಅವನ ಸಂಬಂಧಿಕರನ್ನು ಅದ್ದೂರಿಯಾಗಿಯೇ ಬರ ಮಾಡಿಕೊಂಡಿದ್ದೆವು. ನಾನು ಸಹ ನೂರಾರು ಕನಸುಗಳೊಂದಿಗೆ ಹೊಸ ಜೀವನಕ್ಕೆ ಅಡಿ ಇಡಲು ಬೆಳಗ್ಗೆಯಿಂದಲೇ ಸಿದ್ಧನಾಗಿದ್ದೆ. ವರ ಮತ್ತು ಅವನ ಮನೆಯವರು ಖುಷಿ ಖುಷಿಯಿಂದಲೇ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ, ಊಟ ಬಡಿಸುವುದು ತಡ ಮಾಡಲಾಗಿದೆ ಎಂದು ಆರೋಪಿಸಿ ಮದುವೆಗೆ ನಿರಾಕರಿಸಿದರು, ತನ್ನ ತಂದೆ ತಾಯಿಯನ್ನು ನಿಂದಿಸಿ ಜಗಳ ತೆಗೆದರು. ಹಲ್ಲೆಯನ್ನೂ ಮಾಡಿದರು, ಹೀಗಾಗಿ ನಾನು ನ್ಯಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದೆ ಎಂದು ವಧು ಹೇಳಿದ್ದಾರೆ.

ಮದುವೆಯ ಅತಿಥಿಗಳು ಊಟಕ್ಕೆ ಕುಳಿತಿದ್ದರಿಂದ ಮೆಹ್ತಾಬ್‌ಗೆ ಊಟ ಬಡಿಸುವುದಕ್ಕೆ ತುಸು ವಿಳಂಬವಾಯಿತು. ಇದೇ ವಿಚಾರವಾಗಿ ಆತನ ಸ್ನೇಹಿತರು ಮಹ್ತಾಬ್​​​ ಗೆ ತಮಾಷೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆತ ಹಾಗೂ ಆತನ ಕುಟುಂಬಸ್ಥರು, ತಮ್ಮ ತಂದೆ -ತಾಯಿ ಜೊತೆ ವಾಗ್ವಾದಕ್ಕಿಳಿದರು. ಸಮಸ್ಯೆ ಬಗೆಹರಿಸಲು ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿದರು. ಆದರೆ ಇದ್ಯಾವುದಕ್ಕೂ ಬಗ್ಗದ ಮೆಹ್ತಾಬ್, ಮಾಂಗಲ್ಯ ಕಟ್ಟಲು ನಿರಾಕರಿಸಿ ಮದುವೆ ಮಂಟಪದಿಂದ ತೆರಳಿದರು ಎಂದು ವಧು ಘಟನೆಯ ಬಗ್ಗೆ ವಿವರಿಸಿದ್ದಾಳೆ. ಇದರಿಂದ ವಧುವಿನ ಕುಟುಂಬ ಆಘಾತಕ್ಕೆ ಒಳಗಾಗಬೇಕಾಯಿತು. ಮೆಹ್ತಾಬ್ ಮರುದಿನ ತನ್ನ ಸೋದರಸಂಬಂಧಿಯೊಬ್ಬರನ್ನು ವಿವಾಹವಾಗಿದ್ದಾರೆ.

ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ ವಧುವಿನ ಕಡೆಯವರು: ಮೆಹ್ತಾಬ್​ ಈ ಮದುವೆ ಮುರಿದುಕೊಂಡು, ಮತ್ತೊಬ್ಬರೊಂದಿಗೆ ವಿವಾಹಬಂಧಕ್ಕೆ ಒಳಗಾಗಿದ್ದರಿಂದ ಆಕ್ರೋಶಗೊಂಡ ವಧು ಮತ್ತು ಆಕೆಯ ಪೋಷಕರು ಡಿಸೆಂಬರ್ 23 ರಂದು ಇಂಡಸ್ಟ್ರಿಯಲ್ ನಗರದಲ್ಲಿರುವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನಲ್ಲಿ ಇರುವುದೇನು?: ವರನ ಕಡೆಯಿಂದ ಸುಮಾರು 200 ಅತಿಥಿಗಳಿಗೆ ಊಟೋಪಚಾರ ಮಾಡಲಾಗಿತ್ತು. ಇದಕ್ಕೆ ಸುಮಾರು 7 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವಧುವಿನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಮದುವೆಗೆ ಕೆಲವೇ ಗಂಟೆಗಳ ಮೊದಲು ವರನ ಕುಟುಂಬಕ್ಕೆ 1.5 ಲಕ್ಷ ರೂಪಾಯಿ ನೀಡಿದ್ದೆವು ಎಂದು ವಧುವಿನ ಕುಟುಂಬ ಅಳಲು ತೋಡಿಕೊಂಡಿದೆ.

ಈ ದೂರು ಪರಿಶೀಲಿಸಿದ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಲಘೆ, ಎರಡೂ ಕಡೆಯವರನ್ನು ಕರೆಯಿಸಿ ಸಂಧಾನ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಕಡೆಯವರು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ವಧುವಿನ ಕುಟುಂಬಕ್ಕೆ 1.61 ಲಕ್ಷ ರೂಪಾಯಿ ನೀಡುವುದಾಗಿ ವರನ ಕಡೆಯವರು ಒಪ್ಪಿಕೊಂಡಿದ್ದಾರೆ, ಎರಡೂ ಕಡೆಯವರು ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸರ್ಕಲ್ ಆಫೀಸರ್ ರಾಜೇಶ್ ರೈ ತಿಳಿಸಿದ್ದಾರೆ.

ಇದನ್ನು ಓದಿ:ಜ.13ರಿಂದ ಕುಂಭಮೇಳ: ಸಿದ್ಧತೆ ಬಹುತೇಕ ಪೂರ್ಣ, 40 ಕೋಟಿ ಜನರ ಆಗಮನ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.