ಉಜ್ಜಯಿನಿ, ಮಧ್ಯಪ್ರದೇಶ: ಮಿಸ್ ಇಂಡಿಯಾ ನಿಕಿತಾ ಪೋರ್ವಾಲ್ ಭಾನುವಾರ ಮಧ್ಯಪ್ರದೇಶದ ಮಹಾಕಾಲನ ನಗರ ಉಜ್ಜಯಿನಿಗೆ ಭೇಟಿ ನೀಡಿದರು. ಉಜೈನಿಗೆ ಭೇಟಿ ನೀಡಿದ ತಕ್ಷಣ ಅವರು ಬಾಬಾ ಮಹಾಕಾಲನ ಮಂದಿರಕ್ಕೆ ಆಗಮಿಸಿ, ಮಹಾದೇವನ ಆಶೀರ್ವಾದ ಪಡೆದರು. ನಿಕಿತಾ ಪೋರ್ವಾಲ್ ಮಹಾಕಾಲ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಿಕಿತಾ ಪೋರ್ವಾಲ್ ತಲೆಯ ಮೇಲೆ ಕಿರೀಟ ಧರಿಸಿರುವ ಬಗ್ಗೆ ಈ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಮಹಾಕಾಲ ದೇವಸ್ಥಾನದ ಅರ್ಚಕ ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಿಸ್ ಇಂಡಿಯಾ ಕಿರೀಟ ಧರಿಸಲು ಆಕ್ಷೇಪ: ಫೆಮಿನಾ ಮಿಸ್ ಇಂಡಿಯಾ ನಿಕಿತಾ ಪೋರ್ವಾಲ್ ಅವರು ಬಾಬಾ ಮಹಾಕಾಲ ದೇವಸ್ಥಾನದಲ್ಲಿ ಕಿರೀಟವನ್ನು ಧರಿಸಿ ಪೂಜಿಸುತ್ತಿರುವುದಕ್ಕೆ ಮಹಾಕಾಲ ದೇವಸ್ಥಾನದ ಅರ್ಚಕ ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಮಹಾಕಾಲ ದೇವಸ್ಥಾನಕ್ಕೆ ಒಂದು ಘನತೆ ಇದೆ. ಇಲ್ಲಿ ಪ್ರೋಟೋಕಾಲ್ ಮತ್ತು ಡ್ರೆಸ್ ಕೋಡ್ ಇದೆ. ತಲೆ ಮೇಲೆ ಪೇಟ, ಬಟ್ಟೆ ಅಥವಾ ಕ್ಯಾಪ್ ಧರಿಸಿ ಮಹಾದೇವನ ಮುಂದೆ ಹೋಗುವಂತಿಲ್ಲ. ಇದನ್ನು ದೇವಸ್ಥಾನ ಸಮಿತಿ ಅನುಸರಿಸುತ್ತದೆ. ಆದಾಗ್ಯೂ, ಅನೇಕ ಬಾರಿ ಸ್ಥಾನ ಮತ್ತು ಪ್ರತಿಷ್ಠೆಯ ಬಗ್ಗೆ ಇಂತಹ ವಿಷಯಗಳು ಬೆಳಕಿಗೆ ಬರುತ್ತವೆ.
ದೇವಸ್ಥಾನದ ಘನತೆ ಕಾಪಾಡುವಂತೆ ಕರೆ: ಉಜ್ಜಯಿನಿಯ ಮಗಳು ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿದ್ದಾರೆ, ಇದು ಹೆಮ್ಮೆಯ ವಿಷಯವಾಗಿದೆ. ಆದರೆ, ಕಿರೀಟವನ್ನು ಧರಿಸಿ ಬಾಬಾ ಮಹಾಕಾಲನ ಮುಂದೆ ಹೋಗುವುದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಅರ್ಚಕರು ಹೇಳಿದ್ದಾರೆ.
ಆ ಕಿರೀಟವನ್ನು ಕೈಯಲ್ಲಿ ಹಿಡಿದು ಮಹಾಕಾಲನ ಪಾದದಲ್ಲಿ ಇಟ್ಟು ಪೂಜಿಸಬೇಕಿತ್ತು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು. ನಿಕಿತಾ ಅವರು ಮಿಸ್ ಇಂಡಿಯಾ ಗೆಲ್ಲುವ ಮೂಲಕ ನಗರಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ, ದೇವಾಲಯವು ತನ್ನದೇ ಆದ ಕಟ್ಟುಪಾಡು ಹಾಗೂ ಪರಂಪರೆಯನ್ನು ಹೊಂದಿದೆ, ಅದನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ರಾಜಾಧಿರಾಜ್ ಬಾಬಾ ಮಹಾಕಾಲ್ ದೇವಸ್ಥಾನದ ಘನತೆ ಕಾಪಾಡುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಗಮನಹರಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.
ಇದನ್ನು ಓದಿ: ನಂಬಿ ಬಂದವರಿಗೆ ಸುಖ, ಸಮೃದ್ಧಿ ಕರುಣಿಸುವ ಹಾಸನಾಂಬೆ; ಇಲ್ಲಿದೆ ದೇವಿಯ ಇತಿಹಾಸ!