ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಗ್ರಾಮ ರಕ್ಷಕರನ್ನು (ವಿಲೇಜ್ ಡಿಫೆನ್ಸ್ ಗಾರ್ಡ್ಸ್) ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ನಜೀರ್ ಅಹ್ಮದ್ ಮತ್ತು ಕುಲ್ದೀಪ್ ಕುಮಾರ್ ಹತ್ಯೆಯಾದವರು. ಇವರು ಒಹ್ಲಿ- ಕುಂಟ್ವಾರಾ ನಿವಾಸಿಗಳಾಗಿದ್ದಾರೆ. ತಮ್ಮ ಜಾನುವಾರುಗಳನ್ನು ಮೇಯಿಸಲು ಉಧ್ವಾರಿ ಪ್ರದೇಶದ ಮುಂಜ್ಲಾ ಧರ್ ಅರಣ್ಯ ಪ್ರದೇಶಕ್ಕೆ ಹೋಗಿದ್ದರು. ಈ ವೇಳೆ ಶಸ್ತ್ರಸಜ್ಜಿತ ಉಗ್ರರು ಇಬ್ಬರ ಮೇಲೆ ಮನಬಂದಂತೆ ಗುಂಡು ಹಾರಿಸಿ ಅತ್ಯಂತ ಅಮಾನುಷವಾಗಿ ಕೊಂದು ಹಾಕಿದ್ದಾರೆ. ಇಬ್ಬರ ಮೃತದೇಹಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
VIDEO | " it is an unfortunate incident. two village defence guards - nazir ahmad and kuldeep kumar... i feel the locals had informed terrorists about them," says bjp leader kavinder gupta (@KavinderGupta) on killing of two VDGs in Jammu and Kashmir's Kishtwar district.
— Press Trust of India (@PTI_News) November 7, 2024
(Full… pic.twitter.com/LbSxXxRm6Q
ಇಬ್ಬರು ಸಂಜೆಯಾದರೂ ಮನೆಗೆ ಮರಳದ ಕಾರಣ ನಾಪತ್ತೆಯಾಗಿರುವ ಕುರಿತು ದೂರು ಸ್ವೀಕರಿಸಿದ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ನಂತರ ಉಗ್ರರ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಹತ್ಯೆಯ ಹೊಣೆ ಹೊತ್ತ ಕಾಶ್ಮೀರಿ ಟೈಗರ್ಸ್: ಪಾಕಿಸ್ತಾನ ಉಗ್ರವಾದಿ ಸಂಘಟನೆ ಜೈಶ್-ಇ-ಮೊಹಮ್ಮದ್‌ನ ಭಾಗವಾದ ಕಾಶ್ಮೀರಿ ಟೈಗರ್ಸ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ನಾ ಪ್ರತಿಕ್ರಿಯಿಸಿ, "ಇಂಥ ಅಮಾನುಷ ಕೃತ್ಯ ಎಸಗುವ ಉಗ್ರವಾಗಿ ಸಂಘಟನೆಗಳನ್ನು ನಾಶಪಡಿಸಲು ನಾವು ಕಟಿಬದ್ಧರಾಗಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ: ಸದನ ಮುಂದೂಡಿಕೆ