ETV Bharat / bharat

ಅಂಬೆಗಾಲಿಡುವ ಮಗುವಿನ ಮೇಲೆ ಬೀದಿ ನಾಯಿಗಳ ಅಟ್ಟಹಾಸ; ಕಂದನ ಸಾವಿನಿಂದ ಕುಟುಂಬಸ್ಥರ ಆಕ್ರಂದನ - ಬೀದಿ ನಾಯಿಗಳು ದಾಳಿ

ದೆಹಲಿಯಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ ಅಂಬೆಗಾಲಿಡುವ ಮಗು ಬಲಿಯಾಗಿದೆ. ನಾಯಿಗಳಿಗೆ ಆಹಾರ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತ ಮಗುವಿನ ಕುಟುಂಬ ಆಗ್ರಹಿಸಿದೆ.

Toddler mauled to death  New Delhi  stray dogs attack on child  ಬೀದಿ ನಾಯಿಗಳು ದಾಳಿ  ಅಂಬೆಗಾಲಿಡುವ ಹೆಣ್ಣು ಮಗು
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
author img

By PTI

Published : Feb 25, 2024, 7:48 PM IST

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಾಯಿಗಳ ಕಾಟ ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚಿನ ಪ್ರಕರಣ ತುಘಲಕ್ ರಸ್ತೆ ಪ್ರದೇಶದಿಂದ ಬೆಳಕಿಗೆ ಬಂದಿದೆ. ಅಲ್ಲಿ ಮೂರ್ನಾಲ್ಕು ಬೀದಿ ನಾಯಿಗಳು ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಮಗು ಸಂಪೂರ್ಣವಾಗಿ ಗಾಯಗೊಂಡಿದ್ದು, ಸಾಕಷ್ಟು ಪ್ರಯತ್ನದ ನಂತರ ಹುಡುಗಿಯನ್ನು ರಕ್ಷಿಸಲಾಗಿತ್ತು. ಆದರೆ ಅಷ್ಟೊತ್ತಿಗೆ ತಡವಾಗಿತ್ತು. ಕುಟುಂಬದವರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದರು. ಇಂದು ದೆಹಲಿ ಮಹಾನಗರ ಪಾಲಿಕೆ ಮೇಯರ್ ಡಾ. ಶೈಲಿ ಒಬೆರಾಯ್ ಮೃತ ಮಗುವಿನ ಕುಟುಂಬವನ್ನು ಭೇಟಿಯಾಗಿ ಸಂತಾಪ ಸೂಚಿಸಿದರು.

ದೆಹಲಿಯಲ್ಲಿ ಬೀದಿ ನಾಯಿಗಳಿಂದ ದೊಡ್ಡ ಸಮಸ್ಯೆಯಾಗಿದೆ. ಇದು ಎನ್‌ಡಿಎಂಸಿ ಕ್ಷೇತ್ರ. ಮುಂಬರುವ ದಿನಗಳಲ್ಲಿ ಎನ್‌ಡಿಎಂಸಿ ಮತ್ತು ಎಂಸಿಡಿ ಒಟ್ಟಾಗಿ ಕೆಲಸ ಮಾಡಲಿವೆ. ಪ್ರಾಣಿ ಪ್ರಿಯರ ಮೇಲೂ ಕಾಳಜಿ ವಹಿಸಲಾಗುವುದು. ದೆಹಲಿಯ ಜನರನ್ನೂ ನೋಡಿಕೊಳ್ಳಲಾಗುವುದು. ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾಹಿತಿ ರವಾನಿಸಲಾಗಿದೆ. ಏನೇ ನೆರವು ನೀಡಿದರೂ ದೆಹಲಿ ಸರ್ಕಾರ ನೀಡಲಿದೆ. ಈ ಸಂಪೂರ್ಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸಂತ್ರಸ್ತೆಯ ಕುಟುಂಬ ತುಘಲಕ್ ಲೇನ್ ಪ್ರದೇಶದ ಧೋಬಿ ಘಾಟ್‌ನಲ್ಲಿ ವಾಸಿಸುತ್ತಿದೆ.

ಈ ಘಟನೆ ನಡೆದಾಗ ಪಕ್ಕದಲ್ಲಿ ಡಿಜೆ ಆಡುತ್ತಿತ್ತು. ಈ ಗದ್ದಲದಲ್ಲಿ ಬಾಲಕಿಯ ಕಿರುಚಾಟ ಕೇಳಿಸಲಿಲ್ಲ. ಬಳಿಕ ಈ ಬಗ್ಗೆ ತಿಳಿಯುತ್ತಿದ್ದಂತೆ ನಾವು ತಕ್ಷಣ ಮಗುವನ್ನು ನಾಯಿಗಳ ಹಿಡಿತದಿಂದ ರಕ್ಷಿಸಲಾಗಿತ್ತು. ಆದರೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ಮಗುವಿನ ಚಿಕ್ಕಪ್ಪ ರವಿ ತಿಳಿಸಿದ್ದಾರೆ.

ದಿನ ನಿತ್ಯ ಶ್ವಾನಪ್ರೇಮಿ ಮಹಿಳೆಯೊಬ್ಬರು ಪದೇ ಪದೇ ನಮ್ಮನ್ನು ಬೆದರಿಸಿ ಅಲ್ಲಿಂದ ತೆರಳುತ್ತಾರೆ. ಇಂದು ಅವರಿಂದಾಗಿ ಪುಟ್ಟ ಹುಡುಗಿಯ ಸಾವಾಗಿದೆ. ಈ ಘಟನೆಯ ನಂತರ ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಸ್ಥಳೀಯರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಕುಟುಂಬಸ್ಥರು ನೋವು ತೋಡಿಕೊಂಡರು.

ಮೇಡಮ್​ವೊಬ್ಬರು ಎನ್​ಜಿಒ ನಡೆಸುತ್ತಿದ್ದಾರೆ ಮತ್ತು ಅವರು ಈ ನಾಯಿಗಳಿಗೆ ಆಹಾರ ಮತ್ತು ಕುಡಿಯಲು ನೀರು ಹಾಕಿ ಹೋಗುತ್ತಾರೆ. ಹಲವು ಬಾರಿ ದೂರು ನೀಡಿದ್ದರೂ ಮೇಡಂ ನಮಗೆ ಬೆದರಿಕೆ ಹಾಕಿ ಅಲ್ಲಿಂದ ತೆರಳುತ್ತಾರೆ. ಇಂದು ಪುಟ್ಟ ಮಗುವಿನ ಪ್ರಾಣ ಹೋಗಿದೆ. ಬೀದಿನಾಯಿಗಳನ್ನು ಬೇಗ ಹಿಡಿಯದಿದ್ದರೆ ಬೇರೆಯವರಿಗೂ ಈ ರೀತಿ ಆಗಬಹುದು ಎಂದು ಸ್ಥಳೀಯರಾದ ಅಮಿತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ: ಎರಡು ನಾಯಿಗಳಿಗೆ ಹೊಂಚು ಹಾಕಿ ವಿಫಲವಾಗಿದ್ದ ಚಿರತೆ: ಮತ್ತೊಂದು ಯತ್ನದಲ್ಲಿ ಒಂದು ಶ್ವಾನ ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.