ETV Bharat / bharat

ಆರೋಗ್ಯ ವಿಮೆಯ ಜಿಎಸ್​ಟಿ ಕಡಿಮೆ ಮಾಡಿ: ಟಿಎಂಸಿ ಮುಖಂಡ ಒ'ಬ್ರಿಯಾನ್ ಒತ್ತಾಯ - GST on health insurance - GST ON HEALTH INSURANCE

ಆರೋಗ್ಯ ವಿಮಾ ಪಾಲಿಸಿಯ ಮೇಲಿನ ಜಿಎಸ್​ಟಿ ಕಡಿಮೆ ಮಾಡುವಂತೆ ಟಿಎಂಸಿಯ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ ಸೋಮವಾರ ಸರಕಾರವನ್ನು ಒತ್ತಾಯಿಸಿದ್ದಾರೆ.

ಟಿಎಂಸಿ ಮುಖಂಡ ಒ'ಬ್ರಿಯಾನ್
ಟಿಎಂಸಿ ಮುಖಂಡ ಒ'ಬ್ರಿಯಾನ್ (IANS)
author img

By PTI

Published : Aug 5, 2024, 1:34 PM IST

ನವದೆಹಲಿ: ಆರೋಗ್ಯ ವಿಮಾ ಪಾಲಿಸಿಗಳಿಗೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್ಟಿಯನ್ನು ಕಡಿಮೆ ಮಾಡುವಂತೆ ಟಿಎಂಸಿಯ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ ಸೋಮವಾರ ಸರಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟು ಹಣಕಾಸು ಸಚಿವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದರು.

"ನಮ್ಮ ಬೇಡಿಕೆ ಸರಳವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ವಿಮೆಯ ಮೇಲೆ ಈಗ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್ಟಿಯನ್ನು ಕಡಿಮೆ ಮಾಡಬೇಕು. ಇದು ಜನರಿಗೆ, ಮುಖ್ಯವಾಗಿ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರುವುದರಿಂದ ಇದನ್ನು ಕಡಿಮೆ ಮಾಡಲೇಬೇಕಿದೆ." ಎಂದು ಡೆರೆಕ್ ಹೇಳಿದರು.

ಜಾಗತಿಕವಾಗಿ ಆರೋಗ್ಯ ವಿಮಾ ಪಾಲಿಸಿ ಪಡೆಯುವವರ ಪ್ರಮಾಣ ಶೇಕಡಾ 7 ರಷ್ಟಿದ್ದರೆ, ಇದು ಭಾರತದಲ್ಲಿ ಈಗಲೂ ಶೇ 4ರಷ್ಟಿದೆ ಎಂದು ಟಿಎಂಸಿ ನಾಯಕ ಒ'ಬ್ರಿಯಾನ್ ಸದನದ ಗಮನಸೆಳೆದರು. ವಿಮಾ ಕ್ಷೇತ್ರದಲ್ಲಿ ಶೇಕಡಾ 75 ರಷ್ಟು ಜೀವ ವಿಮಾ ಪಾಲಿಸಿಗಳು ಮತ್ತು ಶೇಕಡಾ 25 ರಷ್ಟು ವೈದ್ಯಕೀಯ ಪಾಲಿಸಿಗಳಿದ್ದು, ಈ ಕ್ಷೇತ್ರದಲ್ಲಿ ಅಸಮತೋಲನವಿದೆ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ ಮತ್ತು ಅನೇಕ ವಿರೋಧ ಪಕ್ಷದ ಸಂಸದರು ಸಹ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಡೆರೆಕ್ ಹೇಳಿದರು.

"ಹಣಕಾಸು ಸಚಿವರು ನಮ್ಮ ಮಾತು ಕೇಳದಿದ್ದರೆ ಬಿಡಲಿ. ಕನಿಷ್ಠ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರ ಮಾತನ್ನಾದರೂ ಅವರು ಕೇಳಲಿ" ಎಂದು ಅವರು ಹೇಳಿದರು.

ಜಿಎಸ್​ಟಿ ಕೌನ್ಸಿಲ್ ಮಾತ್ರ ಇದನ್ನು ಬದಲಾಯಿಸಬಹುದು ಎಂಬ ಸರ್ಕಾರದ ಸಮಜಾಯಿಷಿಯನ್ನು ಒಪ್ಪದ ಡೆರೆಕ್, "ಇದು ತಪ್ಪು ಹೇಳಿಕೆಯಾಗಿದೆ" ಎಂದರು ಮತ್ತು ಜಿಎಸ್​ಟಿ ಕೌನ್ಸಿಲ್​ನಲ್ಲೂ ಎನ್​ಡಿಎಗೆ ಬಹುಮತವಿರುವುದನ್ನು ಎತ್ತಿ ತೋರಿಸಿದರು.

"ಜಿಎಸ್​ಟಿ ಮಂಡಳಿ ಎಂಬ ಪರದೆಯ ಹಿಂದೆ ಅಡಗಿಕೊಳ್ಳಲು ನಾವು ಹಣಕಾಸು ಸಚಿವರಿಗೆ ಅವಕಾಶ ನೀಡಬಾರದು. ಇದು ಮಧ್ಯಮ ವರ್ಗದ ಸಮಸ್ಯೆಯಾಗಿದೆ. ಇದು ರಾಜಕೀಯ ವಿಷಯವಲ್ಲ" ಎಂದು ಡೆರೆಕ್ ಹೇಳಿದರು. ಹಿರಿಯ ನಾಗರಿಕರಿಗೆ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯೆ ರೇಣುಕಾ ಚೌಧರಿ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ : ಆಗಸ್ಟ್ 6 ರಿಂದ ಆರ್​ಬಿಐ ಎಂಪಿಸಿ ಸಭೆ: ಬಡ್ಡಿದರ ಶೇ 6.5ರಲ್ಲಿಯೇ ಮುಂದುವರಿಕೆ ಸಾಧ್ಯತೆ - RBI Interest Rate

ETV Bharat Logo

Copyright © 2024 Ushodaya Enterprises Pvt. Ltd., All Rights Reserved.