ಮಾಲ್ಡಾ (ಪಶ್ಚಿಮ ಬಂಗಾಳ): ಪ್ರಕೃತಿಯ ಪ್ರಕೋಪಕ್ಕೆ ಗುರುವಾರ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಮಾಹಿತಿ ಪ್ರಕಾರ, 11 ಸಾವಿನ ಪ್ರಕರಣಗಳು ದಾಖಲಾಗಿದ್ದರೂ, ಅಲ್ಪಾವಧಿಯಲ್ಲಿಯೇ ಇಷ್ಟೊಂದು ಸಾವುಗಳು ಸಂಭವಿಸಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಸಿಕ್ಕೀಂ ಹವಾಮಾನ ಇಲಾಖೆಯ ಕೇಂದ್ರ ನಿರ್ದೇಶಕ ಗೋಪಿನಾಥ್ ರಾಹಾ ಮಾತನಾಡಿ, "ಮಾಲ್ಡಾ ಜಿಲ್ಲೆಯಲ್ಲಿ ಬಹಳ ದಿನಗಳಿಂದ ಮಳೆಯಾಗಿಲ್ಲ, ದೀರ್ಘಕಾಲ ಮಳೆ ಬಾರದಿದ್ದಾಗ ಮಾತ್ರ ಈ ಸಮಸ್ಯೆ ಉಂಟಾಗುತ್ತದೆ. ಈ ಬಾರಿ ಮಾಲ್ಡಾದಲ್ಲಿ ಶಾಖದ ಪ್ರಮಾಣ ಹೆಚ್ಚಾಗಿದೆ. ಮೊದಲನೆಯದ್ದು, ಹೆಚ್ಚಿನ ತಾಪಮಾನ ಮತ್ತು ಎರಡನೆಯದ್ದು ನೀರಿನ ಆವಿಯ ಪ್ರಮಾಣ. ಈ ಎರಡೂ ಅಂಶಗಳು ಗಾಳಿಯಲ್ಲಿ ಎಷ್ಟು ಪ್ರಕ್ಷುಬ್ಧತೆಯನ್ನು ಸೃಷ್ಟಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮಾಲ್ಡಾದಲ್ಲಿ ದೀರ್ಘಕಾಲ ಮಳೆಯಿಲ್ಲದ ಕಾರಣ, ಗಾಳಿಯ ಅಸ್ಥಿರತೆಯು ಹೆಚ್ಚಾಗಿದೆ. ಈಗ, ನೀರಿನ ಆವಿ ಪ್ರವೇಶಿಸುತ್ತಿದ್ದಂತೆ, ಲಂಬವಾಗಿ ಎತ್ತರದ ಗುಡುಗುಗಳು ರೂಪುಗೊಳ್ಳುತ್ತವೆ'' ಎಂದು ಅವರು ತಿಳಿಸಿದರು.
ಪ್ರೊಫೆಸರ್ ಅರಿಜಿತ್ ದಾಸ್ ಮಾಹಿತಿ: ಗೌರ್ ಬಂಗಾ ವಿಶ್ವವಿದ್ಯಾಲಯದ ಭೌಗೋಳಿಕ ವಿಭಾಗದ ಪ್ರೊಫೆಸರ್ ಅರಿಜಿತ್ ದಾಸ್ ಅವರು, ಮಾಲಿನ್ಯವು ಗುಡುಗು, ಮೋಡಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ ಎಂದು ಹೇಳುತ್ತಾರೆ. "ಪಶ್ಚಿಮ ಬಂಗಾಳವು ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಕಾಲ್ ಬೈಸಾಖಿ ರಚನೆಗೆ ಸೂಕ್ತವಾದ ಪರಿಸ್ಥಿತಿಗಳನ್ನು ಹೊಂದಿದೆ. ಕಾಲ್ ಬೈಸಾಖಿಯಿಂದ, ಒಂದು ಗಂಟೆಯ ಕಾಲ ಬಿರುಗಾಳಿ ಮತ್ತು ಮಳೆ ಎಂದರ್ಥ. ನಂತರ ಹವಾಮಾನ ಸಹಜ ಸ್ಥಿತಿಗೆ ಮರಳುತ್ತದೆ. ಈಗ ಬಿರುಗಾಳಿ ಮತ್ತು ಮಳೆಯ ಪ್ರಮಾಣ ಮೊದಲಿನಂತಿಲ್ಲ. ಆದರೆ, ತೀವ್ರ ಸಿಡಿಲಿನ ಸಂಭವವು ಅಸಾಮಾನ್ಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹವಾಮಾನ ಬದಲಾಗುತ್ತಿದೆ. ವಾತಾವರಣದ ಸರಾಸರಿ ತಾಪಮಾನವೂ ಹೆಚ್ಚಿದೆ. ಇವೆಲ್ಲದಕ್ಕೂ ಮಾನವನ ಚಟುವಟಿಕೆಗಳೇ ಪ್ರಮುಖ ಕಾರಣ. ಮಿಂಚಿನ ಹಿಂದೆ ಮಾಲಿನ್ಯವೂ ಒಂದು ಕಾರಣವಾಗಿದೆ. ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ ಕಾಮಗಾರಿಯ ಧೂಳು ಕೂಡ ಮಾಲಿನ್ಯಕ್ಕೆ ಕಾರಣ. ವಿವಿಧ ಮಾಲಿನ್ಯಕಾರಕ ಅನಿಲಗಳು ಅದರೊಂದಿಗೆ ಬೆರೆತಾಗ, ಗಾಳಿಯ ಶಾಖ ಹೀರಿಕೊಳ್ಳುವ ಸಾಮರ್ಥ್ಯವು ಬಹಳಷ್ಟು ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಕೆಲವು ಕಾರಣಗಳಿಂದಾಗಿ, ಬಂಗಾಳ ಕೊಲ್ಲಿಯಿಂದ ಬರುವ ನೀರಿನ ಆವಿಯ ಪ್ರಮಾಣವು ಹೆಚ್ಚಾಗುತ್ತದೆ. ಕ್ಯುಮುಲೋನಿಂಬಸ್ ಮೋಡಗಳು ರೂಪುಗೊಳ್ಳುತ್ತವೆ. ಈ ರೀತಿ ಪಶ್ಚಿಮ ಬಂಗಾಳದಲ್ಲಿ ಆಗಾಗ್ಗೆ ಸಂಭವಿಸುತ್ತದೆ ಎಂದು ಪ್ರೊಫೆಸರ್ ದಾಸ್ ಈಟಿವಿ ಭಾರತ್‌ಗೆ ತಿಳಿಸಿದರು. "ಈ ಕ್ಯುಮುಲೋನಿಂಬಸ್ ಮೋಡಗಳು ಚಂಡಮಾರುತ ಹಾಗು ಮಳೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದರೆ, ಗುಡುಗುಗಳ ತೀವ್ರತೆ ಮತ್ತು ಆವರ್ತನವನ್ನು ಹೆಚ್ಚಿಸುತ್ತದೆ" ಎಂದರು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ: ಗುರುವಾರ ಮಾಲ್ಡಾದಲ್ಲಿ ಮಿಂಚು ಕಂಡುಬಂದಿದೆ. ಈ ಜಿಲ್ಲೆಯಲ್ಲಿ ವಾಯುಮಾಲಿನ್ಯ ಹೆಚ್ಚಿರುವುದೇ ಇದಕ್ಕೆ ಕಾರಣವಾಗಿದೆ. ಹೆಚ್ಚಿನ ಮಾಲಿನ್ಯದಿಂದ ಸ್ಥಳೀಯವಾಗಿ ಗಾಳಿಯ ಉಷ್ಣತೆಯು ಹೆಚ್ಚಾಗುತ್ತಿದೆ. ಕ್ಯುಮುಲೋನಿಂಬಸ್ ಮೋಡಗಳು ಯಾವಾಗ ರೂಪುಗೊಳ್ಳುತ್ತವೆಯೋ ಆಗ ಕೇವಲ ಮಾಲ್ಡಾದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಇತರ ಕೆಲವು ಪ್ರದೇಶಗಳಲ್ಲಿಯೂ ನಡೆಯುತ್ತಿದೆ. ಇದು ಜೀವಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಘಟನೆ ಮಾಲ್ಡಾದಲ್ಲಿ ನಡೆದಿದೆ. ಇಂದು ನಾವು ಗಾಳಿಯಲ್ಲಿ ಮಾಲಿನ್ಯದ ಅಂಶಗಳನ್ನು ನೋಡಿದ್ದೇವೆ. ಆದ್ದರಿಂದ ಮುಂದಿನ 7 ರಿಂದ 15 ದಿನಗಳಲ್ಲಿ ಅಂತಹ ಘಟನೆ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕ ಸೋಮನಾಥ್ ದತ್ತಾ ಹೇಳಿದ್ದಾರೆ.
ನಾಳೆ ಗುಡುಗು ಸಹಿತ ಮಳೆ: "ನಮ್ಮಲ್ಲಿ ಉತ್ತರ ಬಂಗಾಳದಲ್ಲಿ ರಾಡಾರ್ ಇಲ್ಲ. ಆದ್ದರಿಂದ, ಸ್ಥಳೀಯ ಮಿಂಚಿನ ಮುನ್ಸೂಚನೆಗಾಗಿ ನಮ್ಮ ವೀಕ್ಷಣಾ ಕೇಂದ್ರವು ಎಂಗ್ರೆಜ್‌ಬಜಾರ್ ಪ್ರದೇಶದಲ್ಲಿದೆ. ಹಾಗಾಗಿ ಅಲ್ಲಿ ಏನಾಯಿತು ಎಂಬುದರ ಕುರಿತು ನಮಗೆ ಮಾಹಿತಿ ಸಿಗಲಿಲ್ಲ. ನಾಳೆ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದ್ದೇವೆ" ಎಂದು ಸೋಮನಾಥ್ ದತ್ತಾ ಹೇಳಿದರು.