ಹೈದರಾಬಾದ್: ಸಾಮಾನ್ಯ ರೈತ ಕುಟುಂಬದಿಂದ ಬಂದಿದ್ದ ರಾಮೋಜಿ ರಾವ್ ಅವರು ಉದ್ಯಮದಲ್ಲಿ ದಿಗ್ಗಜರಾಗಿ ರೂಪುಗೊಳ್ಳುವಲ್ಲಿ ಅವರ ಪರಿಶ್ರಮ ಮತ್ತು ಸಮರ್ಪಣಾ ಶಕ್ತಿಗೆ ಸಾಕ್ಷಿಯಾಗಿದೆ. ತಮ್ಮ ಪ್ರವರ್ತಕ ಉದ್ಯಮದ ಮೂಲಕ ರಾಮೋಜಿ ರಾವ್ ಕೇವಲ ಆರ್ಧಿಕ ಭದ್ರತೆಯನ್ನು ನೀಡಲಿಲ್ಲ. ಬದಲಾಗಿ ಲಕ್ಷಾಂತರ ಮಂದಿಗೆ ನಾಳೆಯ ಉತ್ತಮ ಭವಿಷ್ಯದ ಭರವಸೆ ನೀಡಿದರು.
ಮಾರ್ಗದರ್ಶಿ ಚಿಟ್ಫಂಡ್:
ಆರ್ಥಿಕ ಸ್ಥಿರತೆಯ ಸ್ತಂಭ: 1962ರ ಅಕ್ಟೋಬರ್ನಲ್ಲಿ ಹುಟ್ಟಿದ ಸಂಸ್ಥೆ ಇಂದಿಗೂ ಅತ್ಯಂತ ನಂಬಿಕಾರ್ಹ ಚಿಟ್ ಫಂಡ್ ಸಂಸ್ಥೆಯಾಗಿದೆ. ಮಧ್ಯಮ ವರ್ಗದಿಂದ ಸಾಮಾನ್ಯ ಜನರು ಆರ್ಥಿಕ ಸ್ವಾತಂತ್ರ್ಯವನ್ನು ಇದರ ಮೂಲಕ ಕಂಡುಕೊಂಡಿದ್ದಾರೆ. ಉದ್ಯಮದ ಆರಂಭಿಕ ಹಂತದ ಸಂದೇಹಗಳ ಹೊರತಾಗಿ ರಾವ್ ಅವರ ನಿಖರತೆ ಬದ್ಧತೆ ಮತ್ತು ನಂಬಿಕೆಯಿಂದಾಗಿ ಸಂಸ್ಥೆ ಲಕ್ಷಾಂತರ ಗ್ರಾಹಕರ ನಂಬಿಕೆಯನ್ನು ಸಂಪಾದಿಸಿತು.
ದೃಢ ಬೆಳವಣಿಗೆ ಮತ್ತು ಪ್ರಭಾವ: ಕಳೆದ ಆರು ದಶಕಗಳಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಇದರ ವಾರ್ಷಿಕ ವಹಿವಾಟು 10,687 ಕೋಟಿ ಮೀರಿದೆ. 113 ಬ್ರಾಂಚ್ ಮತ್ತು 3ಲಕ್ಷಕ್ಕೂ ಹೆಚ್ಚು ಸಕ್ರಿಯ ಚಂದಾದಾರರಿದ್ದಾರೆ. ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಳಿದ್ದು, 18 ಸಾವಿರ ಏಜೆಂಟ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ. ಇದರ ಜೊತೆ ಕಂಪನಿಯು ತೆರಿಗೆ ಮತ್ತು ಉದ್ಯೋಗದ ಮೂಲಕ ಆರ್ಥಿಕತೆಗೂ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ.
ಗ್ರಾಹಕ ಕೇಂದ್ರಿತ ಪ್ರಸ್ತಾಪ: ಮಾರ್ಗದರ್ಶಿ ಚಿಟ್ಫಂಡ್ಗೆ ವಿಶಾಲ ವ್ಯಾಪ್ತಿಯಲ್ಲಿ 60 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಮನೆ ನಿರ್ಮಾಣ, ವ್ಯಾಪಾರ ಪ್ರಾರಂಭಗಳು, ಶಿಕ್ಷಣ, ಮದುವೆ ಸಮಾರಂಭ ಮತ್ತು ನಿವೃತ್ತಿಗೆ ಹಣಕಾಸಿನ ನೆರವಿಗೆ ಚಿಟ್ಫಂಡ್ ಆಸರೆಯಾಗಿ ನಿಂತಿದೆ. ಗ್ರಾಹಕರನ್ನು ದೇವರಂತೆ ಕಂಡು ಸೇವೆ ಮಾಡಬೇಕು ಎಂಬ ರಾಮೋಜಿ ರಾವ್ ಅವರ ತತ್ವದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ನಂಬಿಕೆ ಮತ್ತು ಸ್ಥಿರತೆ: ಸವಾಲು ಮತ್ತು ಪಿತೂರಿಗಳ ನಡುವೆ ಮಾರ್ಗದರ್ಶಿ ಚಿಟ್ಫಂಡ್ ಭಾರತದ ನಂ 1 ಚಿಟ್ ಫಂಡ್ ಸ್ಥಾನ ಪಡೆದಿದೆ. ರಾಮೋಜಿ ರಾವ್ ಅವರ ಸುಸ್ಥಿರ ಬೆಳವಣಿಗೆ ಮತ್ತು ನಂಬಿಕೆಯ ಅಚಲ ದೃಷ್ಟಿಕೋನವನ್ನು ಹೊಂದಿದೆ. 6 ದಶಕಗಳ ಸೇವೆಯೊಂದಿಗೆ ಸಂಸ್ಥೆ ತಮ್ಮ ತತ್ವ ಮತ್ತು ಗ್ರಾಹಕರು ಹಾಗೂ ಉದ್ಯೋಗಿಗಳ ಜೀವನಮಟ್ಟವನ್ನು ಸಮಾನವಾಗಿ ವೃದ್ಧಿಸುತ್ತಿದೆ.
ರಾಮೋಜಿ ರಾವ್ ಅವರು ವಿಧೇಯಪೂರ್ವಕ ಆರಂಭದಿಂದ ಶ್ರೇಷ್ಟತೆಯ ಪ್ರಯಾಣವೂ ಅನೇಕ ಉದ್ಯಮಿಗಳಿಗೆ ಸ್ಪೂರ್ತಿಯಾಗಿದೆ. ಮಾರ್ಗದರ್ಶಿ ಚಿಟ್ಫಂಡ್ ಮೂಲಕ ಅವರು ಲಕ್ಷಾಂತರ ಜನರ ಜೀವನವನ್ನು ಪರಿವರ್ತನೆ ಮಾಡುವ ಜೊತೆಗೆ ನಂಬಿಕೆ, ಸ್ಥಿರತೆ, ಅಚಲವಾದ ಬದ್ಧತೆಯ ಸೇವೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಹಾಟ್ ಸ್ಪಾಟ್ ಆರ್ಎಫ್ಸಿ; ನಾವಿನ್ಯತೆಯ ಸಾಮ್ರಾಜ್ಯ ಕಟ್ಟಿದ ದೂರದೃಷ್ಟಿಯ ವ್ಯಕ್ತಿ ರಾಮೋಜಿ ರಾವ್