ರಾಯ್ಪುರ್ (ಛತ್ತೀಸ್ಗಢ): ಛತ್ತೀಸ್ಗಢದ ಸುಕ್ಮಾದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.
ಸುಕ್ಮಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಭದ್ರತಾ ಪಡೆ ಯಶಸ್ವಿಯಾಗಿ ನಡೆಸಿದೆ. ಗುಂಡಿನ ದಾಳಿಗೆ ಒಳಗಾದ ಮೂವರ ನಕ್ಸಲರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ ಎಂದು ರಾಯ್ಪುರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮಾಹಿತಿ ನೀಡಿದರು.
ಬಿಜಾಪುರ್ನಲ್ಲಿ ಜನವರಿ 6ರಂದು ಐಇಡಿ ಬಾಂಬ್ ಸ್ಫೋಟಿಸಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಹಾಗೂ ಕಾರು ಚಾಲಕನ ಸಾವಿನ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಶರ್ಮಾ, ನಕ್ಸಲರು ಮಾಡಿದ ಈ ಕೃತ್ಯದಿಂದಾಗಿ ಭದ್ರತಾ ಪಡೆ ಸಿಬ್ಬಂದಿಗಳಲ್ಲಿ ಸಾಕಷ್ಟು ಕೋಪಕ್ಕೆ ಕಾರಣವಾಗಿತ್ತು. ಭದ್ರತಾ ಪಡೆಯನ್ನು ನಾನು ಭೇಟಿಯಾದಾಗ, ಅವರು ನಕ್ಸಲರ ಹಾವಳಿಯನ್ನು ನಿಗದಿತ ಸಮಯದಲ್ಲಿ ನಿರ್ನಾಮ ಮಾಡುವುದಾಗಿ ತಿಳಿಸಿದರು ಎಂದರು.
2026ರ ಮಾರ್ಚ್ ಹೊತ್ತಿಗೆ ದೇಶದಲ್ಲಿ ನಕ್ಸಲರನ್ನು ನಿರ್ಮೂಲನೆ ಮಾಡಲಾಗುವುದು ಎಂಬ ಪಣದ ಪುನರ್ ಉಚ್ಚಾರವನ್ನು ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು. ಅಲ್ಲದೇ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ನಮ್ಮ ಯೋಧರ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.
ಗುರುವಾರ, ಸುಕ್ಮಾ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿ ಹಾಗೂ ಅರಣ್ಯದಲ್ಲಿ ಭದ್ರತಾ ಪಡೆದ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆ ಈ ಎನ್ಕೌಂಟರ್ ನಡೆಸಿದೆ. ಜಿಲ್ಲಾ ರಿಸರ್ವ್ ಗಾರ್ಡ್, ಸ್ಪೆಷಲ್ ಟಾಸ್ಕ್ ಫೋರ್ಸ್ ಮತ್ತು ಕೊಬ್ರಾ ಸಿಬ್ಬಂದಿ ಕೂಡ ಈ ಕಾರ್ಯಾಚರಣೆಯಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಈ ವರ್ಷ ಇಲ್ಲಿಯವರೆಗೆ 9 ನಕ್ಸಲರನ್ನು ಪ್ರತ್ಯೇಕ ಎನ್ಕೌಂಟರ್ನಲ್ಲಿ ಹೊಡೆದುರುಳಿಸಲಾಗಿದೆ. ಅಬುಜಮದ್ನಲ್ಲಿ ಹಾಗೂ ಬಿಜಾಪುರ್ ಜಿಲ್ಲೆಯ- ನಾರಾಯಣಪುರ - ದಂತೇವಾಡ ಜಿಲ್ಲೆಯಲ್ಲಿ ಮೂರು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆ ಜನವರಿ 6ಕ್ಕೆ ಮುಗಿದಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲರು ಹತರಾಗಿದ್ದಾರೆ ಎಂದು ಅವರು ತಿಳಿಸಿದರು.
ಕಳೆದ ವರ್ಷ 219 ನಕ್ಸಲರು ಹತ; ಜನವರಿ 3ರಂದು ರಾಯ್ಪುರ ವಿಭಾಗದ ಗರಿಬಾಂಡ್ ಜಿಲ್ಲೆಯಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ. ಕಳೆದ ವರ್ಷ 219 ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ ಪೊಲೀಸರು ತಿಳಿಸಿದರು.
ಇದನ್ನೂ ಓದಿ: 1978ರ ಸಂಭಾಲ್ ಗಲಭೆಯ ಮರುತನಿಖೆಗೆ ಯುಪಿ ಸರ್ಕಾರದ ಆದೇಶ: ವಾರದೊಳಗೆ ವರದಿ ಸಲ್ಲಿಸಲು ಸೂಚನೆ