ನಾಸಿಕ್ (ಮಹಾರಾಷ್ಟ್ರ): ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಟೆಸ್ಲಾ ರಸ್ತೆಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ ಮಹಾರಾಷ್ಟ್ರ ಮೂಲದ ಯುವಕ ಮತ್ತು ಆತನ ಇಬ್ಬರು ಸ್ನೇಹಿತರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದ ನಾಸಿಕ್ ಮೂಲದ ದಿಗ್ವಜಯ್ ರಾಜೇಂದ್ರ ಔಸರ್ಕರ್ ಮೃತ ಯುವಕ. ತನ್ನ ಗೆಳತಿಯ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಹೊಸದಾಗಿ ಖರೀದಿಸಿದ್ದ ಟೆಸ್ಲಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.
ದಿಗ್ವಿಜಯ್ ಅವರು ಅಮೆರಿಕದಲ್ಲಿ ಮೆಕಾನಿಕಲ್ ಇಂಜಿನಿರಿಂಗ್ ಪದವಿಯನ್ನು ಪಡೆದಿದ್ದರು. ನಂತರ ಕೆನಡಾದಲ್ಲಿ ಉತ್ತಮ ಕಂಪನಿಯಲ್ಲಿ ಕೆಲಸ ಪಡೆದಿದ್ದರು. ತನ್ನ ಗೆಳತಿ ಝಲಕ್ ಪಟೇಲ್ ಬರ್ತಡೇ ಹಿನ್ನೆಲೆ ದಿಗ್ವಜಯ್ ಮತ್ತು ಆತನ ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ತಮ್ಮ ಹೊಸ ಕಾರು ಟೆಸ್ಲಾದಲ್ಲಿ ಲಾಂಗ್ ಡ್ರೈವ್ ಹೋಗಿದ್ದರು. ಈ ಸಮಯದಲ್ಲಿ ತಕ್ಷಣಕ್ಕೆ ಕಾರು ಡೆಡ್ ಸ್ಟಾಪ್ನಲ್ಲಿ ಪಲ್ಟಿಯಾಗಿದ್ದು, ಕಬ್ಬಿಣದ ಕಂಬಕ್ಕೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ. ಝಲಕ್ ಹೊರತುಪಡಿಸಿ ಇನ್ನುಳಿದ ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಉಳಿದಿಬ್ಬರು ಗುಜರಾತ್ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.
ದಿಗ್ವಿಜಯ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ನಾಸಿಕ್ನ ಮನೆಯಲ್ಲಿ ಮೌನ ಆವರಿಸಿದೆ. ಆತನ ತಂದೆ ಮತ್ತು ಸಹೋದರಿ ಕೆನಡಾಗೆ ತೆರಳಿದ್ದಾರೆ. ಪ್ರಕರಣ ಸಂಬಂಧ ಕೆನಡಾ ಪೊಲೀಸರು ಕೂಡ ತನಿಖೆ ನಡೆಸಿದ್ದಾರೆ. 15 ದಿನದ ಹಿಂದಷ್ಟೇ ದಿಗ್ವಿಜಯ್ನನ್ನು ಆತನ ಪೋಷಕರು ಭೇಟಿಯಾಗಿ ಬಂದಿದ್ದರು, ಇದೀಗ ಈ ಸಾವಿನ ಸುದ್ದಿ ಅವರಿಗೆ ಬರಸಿಡಿಲಿನಂತೆ ಬಂದೆರಗಿದೆ.
ಕುಟುಂಬದ ಇತರೆ ಸದಸ್ಯರ ವೀಸಾ ಅವಧಿ ಮುಗಿದಿದ್ದು, ಆತನ ತಂದೆ ಮತ್ತು ಸಹೋದರಿ ಮಾತ್ರ ಕೆನಡಾಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ಸಮಯದಲ್ಲಿ ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳ ಈ ದುರಂತ ಘಟನೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದಿಗ್ವಿಜಯ್ ಸೋದರ ಸಂಬಂಧಿ ಕೇತನ್ ಔಸರ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಊರಲ್ಲಿ ಕಳೆದ 70 ವರ್ಷಗಳಿಂದ ದೀಪಾವಳಿಯನ್ನ ಆಚರಿಸಿಯೇ ಇಲ್ಲ: ಏಕೆ ಅಂತೀರಾ?