ETV Bharat / bharat

ಪಂಜಾಬ್​ ಸರ್ಕಾರದ ವಿರುದ್ಧ ದಿಢೀರ್‌ ಪ್ರತಿಭಟನೆಗಳಿದ ಸಾವಿರಾರು ರೈತರು: ಕಾರಣ ಇದು! - Punjab Farmers Protest

author img

By ETV Bharat Karnataka Team

Published : Sep 2, 2024, 12:25 PM IST

ಬಿಕೆಯು (ಉಗ್ರಹನ್​) ಅಡಿಯಲ್ಲಿ ಪಂಜಾಬ್​ ಖೇತ್​​ ಮಜಾದರ್​​ ಯುನಿಯನ್​ ಕೂಡ ಈ ಪ್ರತಿಭಟನೆಗೆ ಕೈ ಜೋಡಿಸಿದೆ. ಸೆಪ್ಟೆಂಬರ್ ​​5ರವರೆಗೆ ಧರಣಿ ನಡೆಸಲು ಸಿದ್ಧತೆ ನಡೆದಿದೆ.

Thousands of farmers and farm labourers to protest against AAP govt in Punjab
ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ (IANS)

ಚಂಡೀಗಢ: ಕೃಷಿ ನೀತಿ ಅನುಷ್ಠಾನಗೊಳಿಸುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪಂಜಾಬ್​ನ ಭಾರ್ತಿ ಕಿಸಾನ್​ ಯುನಿಯೂನ್​-ಬಿಕೆಯು (ಉಗ್ರಹನ್​) ಮತ್ತು ಸಂಯುಕ್ತ ಕಿಸಾನ್​ ಮೋರ್ಚಾ (ಎಸ್​ಕೆಎಂ) ಸೇರಿದಂತೆ 37 ರೈತ ಸಂಘಟನೆಯ ಸಾವಿರಾರು ರೈತರು ಧರಣಿ ಆರಂಭಿಸಿದ್ದಾರೆ.

ಸೋಮವಾರದಿಂದ ರಾಜ್ಯದಲ್ಲಿ ಮೂರು ದಿನಗಳ ಮಳೆಗಾಲದ ವಿಧಾನಸಭಾ​ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಕೆಯು ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಎಸ್‌ಕೆಎಂನ ರೈತರು ಕೂಡ ಬಿಕೆಯು ಜೊತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೃಷಿ ನೀತಿ ಅಳವಡಿಕೆಯ ಜೊತೆಗೆ ಬಿಕೆಯು, ಭೂರಹಿತ ಕಾರ್ಮಿಕರು ಮತ್ತು ರೈತರಿಗೆ ಭೂ ಹಂಚಿಕೆಯಲ್ಲಿ ವಿಳಂಬ ಮತ್ತು ಕೃಷಿ ಮತ್ತು ಕಾರ್ಮಿಕರ ಸಾಲಮನ್ನಾದಂತಹ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದೆ. ಕೃಷಿ ನೀತಿಗೆ ಬೆಂಬಲ ವ್ಯಕ್ತಪಡಿಸಿ, ಡೆಮಾಕ್ರಟಿಕ್​​ ಟೀಚರ್ಸ್​​ ಫ್ರಂಟ್​​ ಹಾಗೂ ಗುತ್ತಿಗೆ ನೌರರ ಸಂಘಗಳು ಕೂಡ ಪ್ರತಿಭಟನಾ ರ್ಯಾಲಿಗೆ ಕೃಷಿ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿವೆ.

ಎಸ್​​ಕೆಎಂ ಕೃಷಿ ನೀತಿ ಜೊತೆಯಲ್ಲಿ ಪಂಜಾಬ್​ನಾದ್ಯಂತ ಕಾಲುವೆ ನೀರನ್ನು ಸಮರ್ಪಕವಾಗಿ ವಿತರಣೆ ಮಾಡುವ ಮತ್ತು ವಾಘಾ ಮತ್ತು ಹುಸೇನಿವಾಲಾ ಗಡಿಗಳ ಮೂಲಕ ಪಾಕಿಸ್ತಾನದೊಂದಿಗೆ ವ್ಯಾಪಾರ ಪುನರಾರಂಭಿಸುವ ಬೇಡಿಕೆಗಳನ್ನೂ ಮುಂದಿಟ್ಟಿದೆ.

ರಾಸಾಯನಿಕ ಮುಕ್ತ ಬೆಳೆಗಳ ಉತ್ತೇಜನ, ಆತ್ಮಹತ್ಯೆಗೆ ಶರಣಾದ ಕೃಷಿ ಕುಟುಂಬಕ್ಕೆ ಪರಿಹಾರ ಮತ್ತು ರಾಜ್ಯದಲ್ಲಿರುವ ಮಾದಕ ವಸ್ತು ಸಮಸ್ಯೆ ನಿವಾರಣೆಗಾಗಿ ನಾವು ಬೇಡಿಕೆ ಇಟ್ಟಿದ್ದೇವೆ ಎಂದು ಪಂಜಾಬ್​ ಖೇತ್​ ಮಜ್ದೂರ್​​ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಲಚ್ಚಮಾನ್​ ಸಿಂಗ್​ ಸೆವೆವಾಲಾ ತಿಳಿಸಿದ್ದಾರೆ.

ವಿಧಾನಸೌಧದವರೆಗೆ ರೈತರು ಮೆರವಣಿಗೆ ನಡೆಸಿ, ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಲಾಗುವುದು ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖದೇವ್​ ಸಿಂಗ್​ ಕೊರಿಕಲನ್​ ಹೇಳಿದ್ದಾರೆ.

ಇದನ್ನೂ ಓದಿ: ಕಂಟೈನರ್ ಚಾಲಕನ ಕೈ ಕಾಲು ಕಟ್ಟಿ ₹12 ಕೋಟಿ ಮೌಲ್ಯದ 1,600 ಐಫೋನ್​ ಕಳವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.