ಹೈದರಾಬಾದ್ (ತೆಲಂಗಾಣ): ಬಡತನದಲ್ಲಿ ಬೆಂದ ಯುವಕನೊಬ್ಬ ಹೈದರಾಬಾದ್‌ನಲ್ಲಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಬೆಳೆದಿದ್ದಾರೆ. ಕೇವಲ 10 ರೂಪಾಯಿಗೆ ಉಪಹಾರ ಒದಗಿಸುವ ಮೂಲಕ ಮನೆ ಮಾತಾಗಿದ್ದಾರೆ. ಎಸ್ವಿ 'ಇಂಟಿ ದೋಸಾ' (ಮನೆಯ ದೋಸೆ) ಎಂಬ ಹೆಸರಲ್ಲಿ ಹೋಟೆಲ್ ಉದ್ಯಮ ಮಾಡುತ್ತಿದ್ದು, 30ಕ್ಕೂ ಹೆಚ್ಚು ಜನರಿಗೆ ಕೆಲಸವನ್ನೂ ನೀಡಿದ್ದಾರೆ.
ಗುಂಟೂರು ಮೂಲದ ಶಿವಕುಮಾರ್ ಎಂಬುವರೇ ಈ ಹೋಟೆಲ್ ಉದ್ಯಮಿ. ಇವರು ಚಿಕ್ಕಂದಿನಿಂದಲೂ ಅಪಾರ ಕಷ್ಟಗಳನ್ನು ಎದುರಿಸಿದವರು. ತಂದೆ ತೀರಿಹೋದ ನಂತರ, ತಾಯಿ ಕುಟುಂಬದ ಆಧಾರಸ್ತಂಭವಾಗಿದ್ದರು. ತಾಯಿಗೆ ನೆರವಾಗಲು ಶಿವಕುಮಾರ್ ಶಾಲೆ ಬಿಟ್ಟು ದುಡಿಮೆಗೆ ಇಳಿದಿದರು. ಕುಟುಂಬದ ಆರ್ಥಿಕ ಸಮಸ್ಯೆಯು ಹತ್ತನೇ ತರಗತಿಗೆ ಓದು ನಿಲ್ಲಿಸುವಂತೆ ಮಾಡಿತ್ತು. ಇದರ ನಡುವೆ ಸಂಗೀತದ ಮೇಲಿನ ಉತ್ಸಾಹ ಬೆಳೆದಿತ್ತು. ಗಾಯಕನಾಗುವ ಕನಸು ಚಿರುಗಿತ್ತು. ಆದರೆ, ಜೀವನ ಜೊತೆಗಿನ ಹೋರಾಟವು ಸಂಗೀತ ತರಬೇತಿ ಮುಂದುವರಿಸಲು ಬಿಡಿಲ್ಲ.
ಇದರ ನಡುವೆ ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಶಿವಕುಮಾರ್ ಹೈದರಾಬಾದ್‌ಗೆ ಬಂದರು. ವಿವಿಧ ಸಣ್ಣ-ಪುಟ್ಟ ಕೆಲಸಗಳನ್ನು ತೆಗೆದುಕೊಂಡು ಸಂಪರ್ಕ ಜಾಲ ಬೆಳೆಸಿಕೊಂಡರು. ಈ ವೇಳೆ, 'ಈಟಿವಿ' ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವು ಸಿಕ್ಕು ಶಿವಕುಮಾರ್ ಪ್ರತಿಭೆ ಹೊರಹಾಕಲು ನೆರವಾಯಿತು. ಈ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿಯೂ ಹೊರಹೊಮ್ಮಿದ್ದರು. ಆದಾಗ್ಯೂ, ತಾವು ಎದುರಿಸಿದ ಆರ್ಥಿಕ ಅಸ್ಥಿರತೆಯು ಅದ್ಭುತ ಕಲ್ಪನೆಗೆ ಪ್ರೇರೇಪಿಸಿತು.
10 ರೂಪಾಯಿ ಟಿಫಿನ್ ಸೆಂಟರ್: ಹೈದರಾಬಾದ್ನಂತಹ ನಗರದಲ್ಲಿ ತಮ್ಮಂತಹ ಜನರು ಕೈಗೆಟುಕುವ ಆಹಾರಕ್ಕೆ ಹುಡುಕಾಟ ನಡೆಸುತ್ತಿರುವುದನ್ನು ಶಿವಕುಮಾರ್ ಮನಗಂಡರು. ಜೊತೆಗೆ ಇದರ ಅಗತ್ಯವನ್ನು ಮನದಟ್ಟು ಮಾಡಿಕೊಂಡು ಶಿವಕುಮಾರ್ ಕೇವಲ 10 ರೂಪಾಯಿಗೆ ಗುಣಮಟ್ಟದ ಊಟ ನೀಡುವ ಟಿಫಿನ್ ಸೆಂಟರ್ಅನ್ನು ಪ್ರಾರಂಭಿಸಿದರು. ದಿಲ್‌ಸುಖ್‌ನಗರದಲ್ಲಿರುವ ಈ ಟಿಫಿನ್ ಸೆಂಟರ್ನಲ್ಲಿ ಇಡ್ಲಿ, ದೋಸೆ ಮತ್ತು ಉಪ್ಪಿಟ್ಟು ಸೇರಿದಂತೆ ಹಲವು ರೀತಿಯ ಉಪಹಾರಗಳನ್ನು ಮಾಡಲಾಗುತ್ತಿದೆ. ಇದು ಮನೆಯಲ್ಲಿ ತಯಾರಿಸಿದ ಆಹಾರದ ರುಚಿ ನೀಡುತ್ತಿದೆ.
ಇದೇ ಕಾರಣಕ್ಕೆ ಕಡಿಮೆ ಸಮಯದಲ್ಲೇ ಶಿವಕುಮಾರ್ ಅವರ ಟಿಫಿನ್ ಸೆಂಟರ್ ಜನಪ್ರಿಯತೆ ಗಳಿಸಿತ್ತು. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸ್ನಾತಕೋತ್ತರರಿಗೆ ತಮ್ಮ ಬಜೆಟ್‌ನಲ್ಲಿ ಉಪಹಾರ ಲಭ್ಯವಾಗುವಂತೆ ಮಾಡಿದರು. ಈಗ ಶಿವಕುಮಾರ್ ಅವರ 10 ರೂಪಾಯಿಯ ಟಿಫಿನ್ ಸೆಂಟರ್ ಹೈದರಾಬಾದ್‌ನ ಹಲವರ ಅಚ್ಚು-ಮೆಚ್ಚಾಗಿದೆ. ಇಂದು ನಗರದಾದ್ಯಂತ ನಾಲ್ಕು ಶಾಖೆಗಳನ್ನು ಸ್ಥಾಪಿಸಲು ಕಾರಣವಾಗಿದೆ. 30ಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಶಿವಕುಮಾರ್, ಇಷ್ಟು ಜನರ ಕುಟುಂಬಕ್ಕೂ ಆಸರೆಯಾಗಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡರೂ ಶಿವಕುಮಾರ್ ಸಂಗೀತದ ಆಸೆಯನ್ನು ಬಿಟ್ಟಿಲ್ಲ. ಉನ್ನತ ಗಾಯಕರಾಗುವ ತಮ್ಮ ಕನಸನ್ನು ಮುಂದುವರಿಸಿದ್ದಾರೆ. ತಾನು ಒಮ್ಮೆ ಅನುಭವಿಸಿದ ಹಸಿವಿನ ಕಷ್ಟ ಬೇರೆ ಯಾರೂ ಅನುಭವಿಸಬಾರದು ಎಂಬುವುದೇ ನನ್ನ ಇಚ್ಛೆಯಾಗಿದೆ. ಮತ್ತಷ್ಟು ಜನರಿಗೆ ಕಡಿಮೆ ಹಣದಲ್ಲಿ ಟಿಫಿನ್ ಒದಗಿಸುವ ನಿಟ್ಟಿನಲ್ಲಿ ಈ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಯೋಚನೆಯೂ ಎನ್ನುತ್ತಾರೆ ಶಿವಕುಮಾರ್.
ಇದನ್ನೂ ಓದಿ: ಬಾಗಲಕೋಟೆ: ವಿವಿಧ ತಳಿಯ ಕುರಿಗಳ ಸಾಕಣೆ: ಶ್ರಮಕ್ಕೆ ತಕ್ಕಂತೆ ಭರಪೂರ ಆದಾಯ; ಏನಿವರ ಸಕ್ಸಸ್ ಮಂತ್ರ!