ETV Bharat / bharat

ಗಂಟೆಗೂ ಹೆಚ್ಚಿನ ಕಾಲ ಗುಂಡಿನ ಚಕಮಕಿ: ಕೊನೆಗೂ ಉಗ್ರರಿಬ್ಬರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

Terrorist Gunfight With Forces: ಬೆಳ್ಳಂಬೆಳಗ್ಗೆ ಜಮ್ಮುಕಾಶ್ಮೀರದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಉಗ್ರರಿಬ್ಬರನ್ನು ಸೇನೆ ಬೇಟೆಯಾಡಿದೆ.

TERRORIST KILLED  AKHNOOR GUNFIGHT  SECURITY FORCES
ಮತ್ತೊಬ್ಬ ಉಗ್ರನನ್ನು ಹೊಡೆದುರುಳಿಸಿದ ಸೇನೆ (PTI)
author img

By ETV Bharat Karnataka Team

Published : Oct 29, 2024, 9:23 AM IST

Updated : Oct 29, 2024, 10:50 AM IST

ಶ್ರೀನಗರ, ಜಮ್ಮು ಕಾಶ್ಮೀರ Terrorist Gunfight With Security Forces: ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರಿಬ್ಬರನ್ನು ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಬಗ್ಗೆ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ್ದಾರೆ.

ಒಟ್ಟು ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಇನ್ನೂ ಅಡಗಿರುವ ಮೂರನೇ ಉಗ್ರನನ್ನು ತಟಸ್ಥಗೊಳಿಸಿದ್ದೇವೆ ಎಂದು ಸೇನೆ ಹೇಳಿದೆ.

ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸಾಗುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಆಂಬ್ಯುಲೆನ್ಸ್‌ ಮೇಲೆ ಮೂವರು ಭಯೋತ್ಪಾದಕರ ಗುಂಡು ಹಾರಿಸಿದ್ದರು. ವಿಶೇಷ ಪಡೆಗಳು ಮತ್ತು ಎನ್‌ಎಸ್‌ಜಿ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸೋಮವಾರ ಸಂಜೆ ಉಗ್ರರನೊಬ್ಬನನ್ನು ಹೊಡೆದುರುಳಿಸಲಾಗಿತ್ತು. ಬಳಿಕ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇಂದು ಬೆಳಗ್ಗೆ ಭದ್ರತಾ ಪಡೆಗಳು ಖೌರ್‌ನ ಭಟ್ಟಲ್ ಏರಾದಲ್ಲಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಅಡಗಿಕೊಂಡಿದ್ದ ಭಯೋತ್ಪಾದಕರ ವಿರುದ್ಧ ಗುಂಡಿನ ದಾಳಿ ನಡೆಸಿ ಹೊಡೆದುರಳಿಸಿತ್ತು. ಅಡಗಿಕೊಂಡಿದ್ದ ಮೂರನೇ ಉಗ್ರನಿಗಾಗಿ ಶೋಧ ಮುಂದುವರಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಎರಡನೇ ಭಯೋತ್ಪಾದಕನನ್ನು ಹೊಡೆದುರುಳಿಸುವ ಮೊದಲು ಒಂದು ಗಂಟೆಗೂ ಹೆಚ್ಚು ಕಾಲ ತೀವ್ರವಾದ ಗುಂಡಿನ ದಾಳಿ ನಡೆದಿದ್ದವು. ಈ ವೇಳೆ ಭಯಂಕರ ಸ್ಫೋಟಗಳು ನಡೆದವು. ಬಳಿಕ ಮೂರನೇ ಉಗ್ರನನ್ನು ಸಹ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಡಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಹ ಸಮೀಪದ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದು, ಕೂಬಿಂಗ್​ ಕಾರ್ಯಾಚರಣೆ ಮುಂದುವರಿದಿದೆ.

ಓದಿ: ಉಗ್ರರ ಗುಂಡಿಗೆ ಬಲಿಯಾದ ಶ್ವಾನ, ಫ್ಯಾಂಟಮ್​ ತ್ಯಾಗಕ್ಕೆ ಕಣ್ಣೀರಿನ ವಿದಾಯ ಹೇಳಿದ ಸೇನೆ

Last Updated : Oct 29, 2024, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.