ETV Bharat / bharat

ಭಯೋತ್ಪಾದಕ ಘಟಕ ಭೇದಿಸಿದ ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ಪೊಲೀಸರು; ಮದ್ದು ಗುಂಡುಗಳು ವಶಕ್ಕೆ - JK ENCOUNTER - JK ENCOUNTER

ಪಾಕಿಸ್ತಾನ ಮೂಲದ ಜೆಇಎಂ ಸಂಘಟನೆಯ ಕಾಶ್ಮೀರಿ ಭಯೋತ್ಪಾದಕನು ಉಗ್ರರ ಗುಂಪಿಗೆ ಸೇರಲು ಯುವಕರನ್ನು ಗುರುತಿಸುವ, ಪ್ರೇರೇಪಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

terror-module-busted-in-awantipora-of-jammu-and-kashmir
ಪೊಲೀಸರು ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳು (ETV Bharat)
author img

By ETV Bharat Karnataka Team

Published : Sep 28, 2024, 11:21 AM IST

ಹೈದರಾಬಾದ್​: ನಿರ್ದಿಷ್ಟ ಗುಪ್ತಚರದ ಮಾಹಿತಿ ಮೇರೆಗೆ ಆವಂತಿಪೋರಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಚಿನ ಗುಂಪೊದನ್ನು ಭೇದಿಸಿದ್ದು, ಐಇಡಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಆರು ಭಯೋತ್ಪಾದಕರನ್ನು ವಶಕ್ಕೆ ಪಡೆಯಲಾಗಿದೆ. ಇವರು ಪಾಕಿಸ್ತಾನ ಮೂಲದ ಜೆಇಎಂ ಸಂಘಟನೆಯ ಕಾಶ್ಮೀರಿ ಭಯೋತ್ಪಾದಕನು ಉಗ್ರರ ಗುಂಪಿಗೆ ಸೇರಲು ಯುವಕರನ್ನು ಗುರುತಿಸುವ, ಪ್ರೇರೇಪಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದ. ಗುಂಪು ಸೇರ ಬಯಸುವ ಯುವಕರನ್ನು ಪತ್ತೆ ಮಾಡಿದ ನಂತರ ಅವರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳನ್ನು ತಲುಪಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೀಗ ಈ ಗುಂಪಿನ ಮೇಲೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ, ಜೈಲಿನಲ್ಲಿರುವ ಓವರ್ ಗ್ರೌಂಡ್ ವರ್ಕರ್ ನೆರವಿನೊಂದಿಗೆ ಆವಂತಿಪೋರಾ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಹಲವಾರು ಯುವಕರನ್ನು ಭಯೋತ್ಪಾದಕ ಜಾಲಕ್ಕೆ ಸೇರಿಸಲು ಪ್ರೇರೇಪಿಸಿದ್ದಾನೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಇವರು ಯುವಕರಿಗೆ ಪಿಸ್ತೂಲ್‌ಗಳು, ಗ್ರೆನೇಡ್‌ಗಳು, ಐಇಡಿಗಳು ಮತ್ತು ಇತರ ಸ್ಫೋಟಕಗಳನ್ನು ಒದಗಿಸುತ್ತಿದ್ದು, ನಿರ್ದೇಶಿತ ಹತ್ಯೆ, ಭದ್ರತಾ ಪಡೆಗಳು ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ಗ್ರೆನೇಡ್ ದಾಳಿಗಳು ಅಥವಾ ಐಇಡಿ ದಾಳಿಯಂತಹ ವಿಧ್ವಂಸಕ ಕೃತ್ಯ ನಡೆಸಲು ಸೂಚನೆಗಳನ್ನು ನೀಡಲಾಗುತ್ತಿತ್ತು. ಭಯೋತ್ಪಾದಕ ದಾಳಿ ನಡೆಸುವ ಮುನ್ನ ಅವರಿಗೆ ಈ ಕುರಿತು ಔಪಚಾರಿಕ ತರಬೇತಿಯನ್ನು ನೀಡಲಾಗುತ್ತಿತ್ತು.

ನಿರ್ದಿಷ್ಟ ಸ್ಥಳದಲ್ಲಿ ಐಇಡಿ ಇರಿಸಲು ಮತ್ತು ತರಬೇತಿ ನೀಡಲು ಅವರಿಗೆ ಭಯೋತ್ಪಾದಕ ಗುಂಪಿನಿಂದ ಸಹಾಯ ದೊರೆಯುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಜೊತೆಗೆ ಐಇಡಿ ತಯಾರಿಸಲು ಸಾಮಗ್ರಿಗಳ ಸಂಗ್ರಹಣೆಗೆ ಅನುಕೂಲವಾಗುವಂತೆ ಹ್ಯಾಂಡ್ಲರ್‌ನಿಂದ ಹಣವನ್ನು ನೀಡಲಾಗುತ್ತಿತ್ತು ಎಂದು ವರದಿಯಾಗಿದೆ.

ಇದುವರೆಗೆ ಆರು ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದ್ದು, ಅವರು ನೀಡಿದ ಹೇಳಿಕೆ ಅನುಸಾರ 5 ಐಇಡಿಗಳು, 30 ಡಿಟೋನೇಟರ್‌ಗಳು, ಐಇಡಿಗಳಿಗಾಗಿ 17 ಬ್ಯಾಟರಿಗಳು, ಎರಡು ಪಿಸ್ತೂಲ್‌ಗಳು, ಮೂರು ಪಿಸ್ತೂಲ್ ಮ್ಯಾಗಜೀನ್‌ಗಳು, 25 ಮದ್ದುಗುಂಡುಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು, ಸ್ಫೋಟಕ ಸೇರಿದಂತೆ 20 ಸಾವಿರ ಹಣವನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸಂಕಲ್ಪ ಮಹಾ ರ್ಯಾಲಿಯಲ್ಲಿಂದು ಪ್ರಧಾನಿ ಮೋದಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.