ETV Bharat / bharat

ಕಣಿವೆ ನಾಡಲ್ಲಿ ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ; ಶಸ್ತ್ರಾಸ್ತ್ರ ವಶಕ್ಕೆ ಪಡೆದ ಪೊಲೀಸರು - Terror Hideout Busted - TERROR HIDEOUT BUSTED

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಲಾಗಿದ್ದು, ಪೊಲೀಸರು ಮತ್ತು ಭದ್ರತಾ ಪಡೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ARMS AND EXPLOSIVES RECOVERED  SECURITY FORCES  JOINT OPERATION  IMPROVISED EXPLOSIVE DEVICE IED
ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಪೊಲೀಸರು
author img

By ETV Bharat Karnataka Team

Published : Apr 20, 2024, 6:10 PM IST

ಉಧಂಪುರ (ಜಮ್ಮು ಮತ್ತು ಕಾಶ್ಮೀರ್​): ಪೊಲೀಸರು ಮತ್ತು ಭದ್ರತಾ ಪಡೆ ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಮೂಲಕ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿವೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಘಟನಾ ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ರೈಫಲ್ಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಿಯಾಸಿಯ ಮಹೋರ್ ಉಪವಿಭಾಗದ ಲಾಂಚಾ ಪ್ರದೇಶದಲ್ಲಿದ್ದ ಭಯೋತ್ಪಾದಕರ ಅಡಗುತಾಣವನ್ನು ಪತ್ತೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ತಂಡವು ಗೌಪ್ಯ ಮಾಹಿತಿ ಪಡೆದ ನಂತರ ಕ್ರಮ ಕೈಗೊಂಡು ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಟಿಫಿನ್ ಬಾಕ್ಸ್​​ನಲ್ಲಿ ಹಾಕಲಾಗಿದ್ದ ಐಇಡಿ ಹಾಗೂ ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧದ ವೇಳೆ, ಐಇಡಿ ಮತ್ತು ಎರಡು ಪಿಸ್ತೂಲ್‌ಗಳಲ್ಲದೆ, ಮೂರು ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಗನ್‌ಪೌಡರ್, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು 24 ಬುಲೆಟ್‌ಗಳ ಜೊತೆಗೆ ಎಕೆ ಅಸಾಲ್ಟ್ ರೈಫಲ್‌ನ 40 ಬುಲೆಟ್‌ಗಳು, ಎಂಟು ಬ್ಯಾಟರಿಗಳು, 40 ಮೀಟರ್ ವಿದ್ಯುತ್ ತಂತಿ, ಐದು ಮೀಟರ್ ಪ್ಲಾಸ್ಟಿಕ್ ಹಗ್ಗ ಸಹ ಪತ್ತೆಯಾಗಿದೆ.

ಇನ್ನು ಸ್ಥಳದಲ್ಲಿ ಸ್ಟೀಲ್ ಪ್ಲೇಟ್ ಪತ್ತೆಯಾಗಿದೆ. ಒಂದು ಗ್ಲಾಸ್, ಒಂದು ಬ್ಯಾಗ್, ಮೂರು ಬೆಡ್‌ಶೀಟ್‌ಗಳು ಮತ್ತು ಕೆಲವು ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ, ಅರ್ನಾಸ್ ಮತ್ತು ರಿಯಾಸಿ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಿಯಾಸಿ ಎಸ್‌ಎಸ್‌ಪಿ ಮೋಹಿತಾ ಶರ್ಮಾ ಮಾಹಿತಿ ನೀಡಿದ್ದಾರೆ.

ಓದಿ: ನಡುರಸ್ತೆಯಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ: ಹೆದ್ದಾರಿಯಲ್ಲಿ ತಾಯಿ ಆನೆ ರೋದನೆ - Baby Elephant Died

ETV Bharat Logo

Copyright © 2025 Ushodaya Enterprises Pvt. Ltd., All Rights Reserved.