ETV Bharat / bharat

ತಮಿಳುನಾಡು ಸ್ಯಾಮ್​ಸಂಗ್ ಇಂಡಿಯಾ​​ ಘಟಕದಲ್ಲಿ ಉದ್ವಿಗ್ನ ವಾತಾವರಣ - TENSION NEAR SAMSUNG PLANT

ಉತ್ತಮ ವೇತನ, ಸೌಕರ್ಯಗಳ ಸುಧಾರಣೆ ಮತ್ತು ಟ್ರೇಡ್​ ಯೂನಿಯನ್‌ ಮಾನ್ಯತೆ ನೀಡಬೇಕು ಎಂಬಂತಹ ಹಲವು ಬೇಡಿಕೆಗಳೊಂದಿಗೆ ಸೆಪ್ಟೆಂಬರ್​ 9ರಂದು ಸ್ಯಾಮ್​ಸಂಗ್​ ಇಂಡಿಯಾ ನೌಕರರು ಪ್ರತಿಭಟನೆಗೆ ಇಳಿದಿದ್ದರು.

Tension prevailed near Samsung plant in Tamilnadu after police crackdown on striking workers
ತಮಿಳುನಾಡಿನ ಸ್ಯಾಮ್​ಸಂಗ್​ ಇಂಡಿಯಾ ಘಟಕ (IANS)
author img

By ETV Bharat Karnataka Team

Published : Oct 9, 2024, 4:33 PM IST

ಚೆನ್ನೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ತಮಿಳುನಾಡಿನ ಶ್ರೀ ಪೆರಂಬುದೂರ್​​ ಜಿಲ್ಲೆಯ ಸುಂಗುವರಚತ್ರಮ್​ನ ಸ್ಯಾಮ್​ಸಂಗ್​ ಇಂಡಿಯಾ ಘಟಕದ ನೌಕರರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಸಿಪಿಐ(ಎಂ) ಬೆಂಬಲಿತ ಸೆಂಟರ್​ ಫಾರ್​ ಇಂಡಿಯನ್​ ಟ್ರೇಡ್​ ಯೂನಿಯನ್​ನ ನಾಯಕನನ್ನು ಪೊಲೀಸರು ಇಂದು ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ.

ಸ್ಯಾಮ್​ಸಂಗ್​ ಘಟಕದಲ್ಲಿ 1,800 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, 1000 ಮಂದಿ ಧರಣಿಗೆ ಮುಂದಾಗಿದ್ದು, 800 ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ.

ಘಟಕದ ಮುಂದೆ ಪ್ರತಿಭಟನೆ ನಡೆಸಲು ನಿರ್ಮಿಸಲಾಗಿದ್ದ ಟೆಂಟ್​ ಅನ್ನು ಪೊಲೀಸರು ತೆರವು ಮಾಡಿದ್ದಾರೆ. ಆದಾಗ್ಯೂ, ಪ್ರತಿಭಟನಾನಿರತ ನೌಕರರು ಸಂಸ್ಥೆಯಿಂದ ಸ್ವಲ್ಪ ದೂರದಲ್ಲಿರುವ ತೆರೆದ ಪ್ರದೇಶದಲ್ಲಿ ಹೋರಾಟ ಮುಂದುವರೆಸಿದ್ದಾರೆ. ಪೊಲೀಸರು ಪ್ರತಿಭಟನಾನಿರತರನ್ನು ಸ್ಥಳದಿಂದ ಚದುರಿಸುವ ಕಾರ್ಯದ ನಡುವೆಯೂ ನೌಕರರು ಪಟ್ಟುಬಿಡದೆ ಹೋರಾಟ ನಡೆಸಿದ್ದಾರೆ. ಈ ನಡುವೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ದಾದ ನಡೆದಿದೆ.

ಪ್ರತಿಭಟನಾನಿರತ ನೌಕರರ ಮೇಲೆ ಪೊಲೀಸರ ಕ್ರಮವನ್ನು ಸಿಪಿಐ(ಎಂ) ಖಂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪಕ್ಷದ ನಾಯಕ ಹಾಗೂ ಮಧುರೈ ಸಂಸದ ವೆಂಕಟೇಶನ್​, 'ಪ್ರಜಾಪ್ರಭುತ್ವ ಮಾರ್ಗದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾನೂನು ಪಾಲನೆ ಮಾಡಬೇಕಾದವರು ಸ್ಯಾಮ್​ಸಂಗ್​ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ' ಎಂದು ಆಕ್ರೋಶ ಹೊರಹಾಕಿದರು.

ಈ ನಡುವೆ ಪ್ರತಿಭಟನೆ ಮುಗಿಸಿ, ಕೆಲಸಕ್ಕೆ ಮರಳುವಂತೆ ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.​ಬಿ.ರಾಜಾ ಮನವಿ ಮಾಡಿದ್ದಾರೆ. ಕೋರ್ಟ್​ ಆದೇಶದ ಬಳಿಕ ಸಿಐಟಿಯು ಬೆಂಬಲಿತ ಯೂನಿಯನ್​ಗೆ ಮಾನ್ಯತೆ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ.

ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು, ನೌಕರರ ಸಾರಿಗೆ, ಎಲ್ಲ ವಾಹನಗಳಿಗೆ ಎಸಿ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಂಸ್ಥೆಯ ಮ್ಯಾನೇಜ್​ಮೆಂಟ್​ ಪೂರೈಸಲು ಸಿದ್ದವಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.

ಇನ್ನೊಂದೆಡೆ, ನೌಕರರ ಸಮಿತಿ ಸಹಿ ಹಾಕಿದ ಒಪ್ಪಂದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾನಿರತ ನೌಕರರು ತಿಳಿಸಿದ್ದಾರೆ. ಈ ಒಪ್ಪಂದ ಸಂಸ್ಥೆಯ ಪರವಾಗಿದೆ ಎಂದು ಸಿಐಟಿಯು ನಾಯಕರು ದೂರಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಪ್ರಥಮ ಸಂಪುಟ ಸಭೆಯಲ್ಲೇ ರಾಜ್ಯ ಸ್ಥಾನಮಾನ ಪುನಃಸ್ಥಾಪನೆಗೆ ನಿರ್ಣಯ: ಒಮರ್ ಅಬ್ದುಲ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.