ETV Bharat / bharat

ತೆಲಂಗಾಣ ಸರ್ಕಾರಿ ಅಧಿಕಾರಿ ಬಳಿ ₹100 ಕೋಟಿ ಮೌಲ್ಯದ ಆಸ್ತಿ! ಎಸಿಬಿ ದಾಳಿಯಲ್ಲಿ ಬಹಿರಂಗ - ಭ್ರಷ್ಟಾಚಾರ ನಿಗ್ರಹ ದಳ

ತೆಲಂಗಾಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಸರ್ಕಾರಿ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದು, ಈವರೆಗೆ ನೂರು ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಶೋಧ ಕಾರ್ಯಚರಣೆ ಇಂದೂ ಮುಂದುವರೆಯುವ ಸಾಧ್ಯತೆ ಇದೆ.

acb raid
ಎಸಿಬಿ ದಾಳಿ
author img

By ETV Bharat Karnataka Team

Published : Jan 25, 2024, 8:33 AM IST

Updated : Jan 25, 2024, 12:31 PM IST

ತೆಲಂಗಾಣ ಸರ್ಕಾರಿ ಅಧಿಕಾರಿ ಮನೆಯಲ್ಲಿ ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು

ಹೈದರಾಬಾದ್: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳವು ಬುಧವಾರ ಸರ್ಕಾರಿ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದು, 100 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ವಶಕ್ಕೆ ಪಡೆದಿದೆ. ಮೆಟ್ರೋ ರೈಲು ಯೋಜನಾಧಿಕಾರಿ ಹಾಗೂ ತೆಲಂಗಾಣ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಟಿಎಸ್‌ಆರ್‌ಇಆರ್‌ಎ) ಕಾರ್ಯದರ್ಶಿಯಾಗಿರುವ ಎಸ್.ಬಾಲಕೃಷ್ಣ ಎಂಬವರ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೂ ಮುನ್ನ ಬಾಲಕೃಷ್ಣ, ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಹೆಚ್‌ಎಂಡಿಎ) ನಗರ ಯೋಜನೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ACB RAID
ಅಧಿಕಾರಿ ಎಸ್.ಬಾಲಕೃಷ್ಣ

ಒಟ್ಟು 14 ತಂಡಗಳಲ್ಲಿ ಎಸಿಬಿ ಶೋಧ ನಡೆಸಿದೆ. ಈ ಕಾರ್ಯಾಚರಣೆ ಇಂದು ಕೂಡಾ ಮುಂದುವರೆಯುವ ಸಾಧ್ಯತೆ ಇದೆ. ಬಾಲಕೃಷ್ಣರ ಮನೆ ಮಾತ್ರವಲ್ಲದೆ, ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ನಿನ್ನೆಯವರೆಗೆ ಸುಮಾರು 40 ಲಕ್ಷ ರೂಪಾಯಿ ನಗದು, 2 ಕೆ.ಜಿ ಚಿನ್ನ, ಚರ ಮತ್ತು ಸ್ಥಿರಾಸ್ತಿಗಳ ದಾಖಲೆಗಳು, 60 ದುಬಾರಿ ವಾಚ್​ಗಳು, 14 ಮೊಬೈಲ್ ಫೋನ್‌ಗಳು ಮತ್ತು 10 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ACB RAID
ಅಧಿಕಾರಿ ಮನೆಯಲ್ಲಿ ನಗದು ಎಣಿಸುತ್ತಿರುವ ಎಸಿಬಿ ತಂಡ
ACB RAID
ಎಸಿಬಿ ದಾಳಿ ವೇಳೆ ಸಿಕ್ಕ ಚಿನ್ನಾಭರಣ, ನಗದುಗಳು

ಬಾಲಕೃಷ್ಣ ಅವರಿಗೆ ಸೇರಿದ ನಾಲ್ಕು ಬ್ಯಾಂಕ್‌ಗಳಲ್ಲಿ ಲಾಕರ್‌ಗಳನ್ನು ಗುರುತಿಸಿದ್ದು ಇನ್ನೂ ತೆರೆಯಲಾಗಿಲ್ಲ. ಮನೆಯಲ್ಲಿ ನಗದು ಎಣಿಕೆ ಯಂತ್ರಗಳೂ ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ACB RAID
ಸರ್ಕಾರಿ ಅಧಿಕಾರಿ ಎಸ್.ಬಾಲಕೃಷ್ಣ ಮನೆ

ಇದನ್ನೂ ಓದಿ: ರಾಹುಲ್‌ ಗಾಂಧಿ, ಇತರೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್: ಅಸ್ಸಾಂ ಸಿಎಂ ಹಿಮಂತ ಶರ್ಮಾ

Last Updated : Jan 25, 2024, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.