ETV Bharat / bharat

ಭಕ್ತರಿಗೆ 'ದಾರಿ' ತೋರಿಸುತ್ತಿರುವ ಮಲ್ಲಣ್ಣ: ಹೈದರಾಬಾದ್ - ಶ್ರೀಶೈಲಂ ಮಧ್ಯ 55 ಕಿಮೀ. ಭಾರಿ ಫ್ಲೈ ಓವರ್ - Elevated Corridor Srisailam Highway - ELEVATED CORRIDOR SRISAILAM HIGHWAY

ಶ್ರೀಶೈಲ ಮಲ್ಲಿಕಾರ್ಜುನ್​ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 55 ಕಿಮೀ ಉದ್ದದ ಬೃಹತ್ ಸೇತುವೆ ನಿರ್ಮಾಣ ಮಾಡಲು ತೆಲಂಗಾಣ ಸರ್ಕಾರ ಪ್ರಸ್ತಾವನೆ ತಂದಿದೆ.

Elevated Corridor Srisailam Highway
ಭಕ್ತರಿಗೆ 'ದಾರಿ' ತೋರಿಸುತ್ತಿರುವ ಮಲ್ಲಣ್ಣ : ಹೈದರಾಬಾದ್ - ಶ್ರೀಶೈಲಂ ಮಧ್ಯ 55 ಕಿ.ಮೀ. ಭಾರೀ ಫ್ಲೈ ಓವರ್ (ETV Bharat)
author img

By ETV Bharat Karnataka Team

Published : Sep 27, 2024, 9:22 PM IST

Updated : Sep 27, 2024, 9:35 PM IST

ಹೈದರಾಬಾದ್​: ಶ್ರೀಶೈಲ ಮಲ್ಲಿಕಾರ್ಜುನ್​​ ಸ್ವಾಮಿಯ ಭಕ್ತರು ದರ್ಶನ ಪಡೆಯಲು ಹೈದರಾಬಾದ್‌ನಿಂದ ಶ್ರೀಶೈಲ ರಸ್ತೆ ಮಾರ್ಗದ ಮೂಲಕ ಹೋಗುವುದು ಕಷ್ಟಕರವಾಗಿತ್ತು. ಏಕೆಂದರೆ ಹೈದರಾಬಾದ್ ದಾಟುತ್ತಲೇ ದಟ್ಟವಾದ ನಲ್ಲಮಲ್ಲ ಕಾಡಿನಲ್ಲಿ ಪ್ರಯಾಣ ಮಾಡಬೇಕಿತ್ತು. ಅಂದರೆ ಈ ರಸ್ತೆಯಲ್ಲಿ ನಿಮ್ಮ ವಾಹನದ ವೇಗ 30 ರಿಂದ 40 ಕ್ಕೆ ತಲುಪಬಾರದು. ವಾಹನದ ವೇಗವನ್ನು ಹೆಚ್ಚಿಸಿದರೆ ದಂಡವನ್ನು ಪಾವತಿಸಬೇಕು. ಎಲ್ಲ ಕಾಲದಲ್ಲೂ ಆ ದಾರಿಯಲ್ಲಿ ಹೋಗುವುದು ಸಾಧ್ಯವಿಲ್ಲ. ರಾತ್ರಿ ಪ್ರಯಾಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೇಲಾಗಿ ಸ್ವಂತ ವಾಹನಗಳಲ್ಲಿ ಹೋಗಬೇಕೆಂದರೆ ಕಾಡುಪ್ರಾಣಿಗಳ ಭಯ ಕಾಡುತ್ತದೆ. ಇಂತಹ ಸಮಸ್ಯೆಗಳಿಂದ ಭಕ್ತರು ಮತ್ತು ಪ್ರಕೃತಿ ಪ್ರಿಯರಿಗೆ ರಿಲೀಫ್​ ನೀಡಲು ತೆಲಂಗಾಣ ಸರ್ಕಾರ ಇತ್ತೀಚೆಗೆ ಹೊಸ ಪ್ರಸ್ತಾವನೆ ತಂದಿದೆ. ಇದು 55 ಕಿಮೀ ಉದ್ದದ ಬೃಹತ್ ಸೇತುವೆಯಾಗಿದೆ.

ಬಹೃತ್​ ಸೇತುವೆ ನಿರ್ಮಾಣವಾದರೆ ಎಷ್ಟು ಅನುಕೂಲ: ರಾಜ್ಯ ಸರ್ಕಾರ ಮಾಡಿರುವ ಪ್ರಸ್ತಾವನೆ ಸಾಕಾರಗೊಂಡರೆ ಮಣ್ಣನೂರು ಚೆಕ್ ಪೋಸ್ಟ್ ನಿಂದ 55 ಕಿ.ಮೀ ದೂರದವರೆಗೆ ಈ ಸೇತುವೆ ಮೂಲಕ ಶ್ರೀಶೈಲ ಮಲ್ಲಣ್ಣನ ದರ್ಶನಕ್ಕೆ ಯಾವುದೇ ಅಡೆತಡೆಯಿಲ್ಲದೇ ತೆರಳಬಹುದು. ದಟ್ಟವಾದ ಬೆಟ್ಟಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ಪ್ರಕೃತಿ ನೀಡುವ ತಾಜಾ ಗಾಳಿಯನ್ನು ಉಸಿರಾಡುತ್ತಾ ನೇರವಾಗಿ ಶ್ರೀಶೈಲವನ್ನು ತಲುಪಬಹುದು. ಇದಲ್ಲದೇ, ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ. ವಾಹನದ ವೇಗದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಸಾಧ್ಯತೆಗಳಿವೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಮುಖ ರಸ್ತೆ : ಹೈದರಾಬಾದ್-ಶ್ರೀಶೈಲಂ-ನಂದ್ಯಾಲ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 765 ತೆಲಂಗಾಣ ಮತ್ತು ಆಂಧ್ರಪ್ರದೇಶದ ನಡುವಿನ ಪ್ರಮುಖ ರಸ್ತೆಯಾಗಿದೆ. ಹೈದರಾಬಾದಿನಿಂದ ಶ್ರೀಶೈಲಕ್ಕೆ ಹೋಗುವ ಭಕ್ತರು ಹೆಚ್ಚಾಗಿ ಈ ರಸ್ತೆಯನ್ನು ಬಳಸುತ್ತಾರೆ. ಈ ರಸ್ತೆ ತುಕ್ಕುಗುಡ, ಆಮನಗಲ್ಲು, ದಿಂಡಿ ಮತ್ತು ಮಣ್ಣನೂರು ಮೂಲಕ ಹಾದು ಹೋಗುತ್ತದೆ. ಈ ರಸ್ತೆಯು ತೆಲಂಗಾಣದಿಂದ ತಿರುಪತಿಗೆ ಹೋಗುವ ಪ್ರಮುಖ ಮಾರ್ಗವಾಗಿದೆ. ಹೈದರಾಬಾದ್ - ಶ್ರೀಶೈಲಂ ಮಾರ್ಗದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತವೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಈ ಹೆದ್ದಾರಿ ಹೆಚ್ಚಾಗಿ ನಲ್ಲಮಲ್ಲ ಅರಣ್ಯ ಪ್ರದೇಶದ ಮಧ್ಯದಲ್ಲಿ ಹಾದು ಹೋಗುತ್ತದೆ.

ಹುಲಿ ಸಂರಕ್ಷಿತ ಪ್ರದೇಶ: ಈ ಮಾರ್ಗದ ಮಧ್ಯದಲ್ಲಿ ಅಮ್ರಾಬಾದ್ ಹುಲಿ ಸಂರಕ್ಷಿತ ಪ್ರದೇಶವಿದೆ, ದೊಡ್ಡ ಹುಲಿಗಳು ಮತ್ತು ಇತರ ಕಾಡು ಪ್ರಾಣಿಗಳ ಸಂಚಾರವು ಹೆಚ್ಚು ಇರುತ್ತದೆ. ಹಾಗಾಗಿ ಈ ಭಾಗದ ರಸ್ತೆ ವಿಸ್ತರಣೆಗೆ ಹಿಂದಿನ ಸರ್ಕಾರಗಳು ಮಾಡಿದ ಪ್ರಯತ್ನಗಳು ಸಫಲವಾಗಿಲ್ಲ. ಈ ಆದೇಶದಲ್ಲಿ ಪ್ರಸ್ತುತ ಸರಕಾರ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿದೆ. ತೆಲಂಗಾಣ ರಾಜ್ಯ ಆರ್ & ಬಿ ಅಧಿಕಾರಿಗಳು ಈ ಮಾರ್ಗದಲ್ಲಿ 55 ಕಿಮೀ ಉದ್ದದ ಸೇತುವೆ ನಿರ್ಮಿಸಲು ಪ್ರಸ್ತಾವನೆಗಳನ್ನು ತಂದಿದ್ದಾರೆ. ಅವುಗಳನ್ನು ವಾರದ ಹಿಂದೆ ಕೇಂದ್ರ ಹೆದ್ದಾರಿ ಸಾರಿಗೆ ಇಲಾಖೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು.

ಒಂದೆಡೆ ಘಾಟ್ ರಸ್ತೆ ಮತ್ತೊಂದೆಡೆ ದಟ್ಟ ಅರಣ್ಯ: ಹೈದರಾಬಾದ್ - ಶ್ರೀಶೈಲಂ ಮಾರ್ಗದಲ್ಲಿ ಘಾಟ್ ರಸ್ತೆ ಆರಂಭವಾಗುವ ಪ್ರದೇಶದಿಂದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂದರೆ ಮಣ್ಣನೂರು ಚೆಕ್ ಪೋಸ್ಟ್ ಮುಂಭಾಗದಲ್ಲಿರುವ ಬ್ರಾಹ್ಮಣಪಲ್ಲಿಯಿಂದ ಕಾರಿಡಾರ್ ಆರಂಭವಾಗಲಿದೆ. ಈ ಕಾರಿಡಾರ್ ಘಾಟ್ ರಸ್ತೆಯಲ್ಲಿರುವ ದಟ್ಟವಾದ ಅಮ್ರಾಬಾದ್ ಅಭಯಾರಣ್ಯದ ಮೂಲಕ ಹಾದು ಹೋಗುತ್ತದೆ. ಮಣ್ಣನೂರು ಮತ್ತು ಮೋಮಲಪೆಂಟಾಲದ ಜನವಸತಿ ಪ್ರದೇಶಗಳಿರುವ ಬೈಪಾಸ್‌ಗೆ ಪ್ರಸ್ತಾವನೆ ಕಳುಹಿಸಲಾಗಿದೆ.

ತೆಲಂಗಾಣದ ಅತಿ ಉದ್ದದ ಸೇತುವೆ: ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದರೆ ತೆಲಂಗಾಣ ರಾಜ್ಯದಲ್ಲಿ 55 ಕಿ.ಮೀ ಉದ್ದದ ಅತಿ ದೊಡ್ಡ ಸೇತುವೆಯಾಗಲಿದೆ. ಇದರ ನಿರ್ಮಾಣದ ಅಂದಾಜು ವೆಚ್ಚ ಸುಮಾರು 7 ಸಾವಿರ ಕೋಟಿ ರೂ.. ಎಲಿವೇಟರ್ ಕಾರಿಡಾರ್ ಮಣ್ಣನೂರು-ಫರ್ಹಾಬಾದ್ ಜಂಗಲ್ ಸಫಾರಿ - ವಟವರ್ಲಪಲ್ಲಿ-ದೋಮಲಪೆಂಟಾ ಮೂಲಕ ಹಾದು ಹೋಗಲಿದೆ. ಕೇಂದ್ರದಿಂದ ಒಪ್ಪಿಗೆ ದೊರೆತ ಬಳಿಕ ರಾಜ್ಯ ಸರ್ಕಾರ ಡಿಪಿಆರ್‌ ರೂಪಿಸುವತ್ತ ಗಮನ ಹರಿಸಲಿದೆ. ಎಪಿ ಸರ್ಕಾರವು ಪಾತಾಳಗಂಗಾದಿಂದ ಶ್ರೀಶೈಲಂವರೆಗೆ ಈ ಕಾರಿಡಾರ್‌ನ ಜೋಡಣೆಯನ್ನು ಮಾಡಿದೆ ಎಂದು ವರದಿಯಾಗಿದೆ.

ಇವುಗಳನ್ನು ಓದಿ: ತ್ರಿನೇತ್ರ ಗಣೇಶ ದೇವಸ್ಥಾನದ ಬಳಿಯ ಅಂಗಡಿಗಳಲ್ಲಿ 2 ಸಾವಿರ ಕೆಜಿಯಷ್ಟು ಲಡ್ಡುಗಳು ನಾಶ - laddus destroyed

9ನೇ ತರಗತಿ ವಿದ್ಯಾರ್ಥಿನಿಯರ ಕೈಯಲ್ಲಿ ಪಿಸ್ತೂಲ್​: ಬೆಚ್ಚಿಬಿದ್ದ ಶಾಲಾ ವಿದ್ಯಾರ್ಥಿಗಳು; ತನಿಖೆಗೆ ಆದೇಶಿಸಿದ SP - STUDENTS REACH SCHOOL WITH PISTOL

ಆಟವಾಡುತ್ತಿದ್ದಾಗ ಮಕ್ಕಳ ಕೈಗೆ ಸಿಕ್ತು 1,000 ವರ್ಷಗಳಷ್ಟು ಹಳೆಯದಾದ ಈಳಂ ನಾಣ್ಯ: ಏನಿದರ ಐತಿಹಾಸಿಕ ವಿಶೇಷತೆಗಳು! - Rajarajan Coins Found

Last Updated : Sep 27, 2024, 9:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.